ADVERTISEMENT

ಎಸ್ಸೆಸ್ಸೆಲ್ಸಿ: ಮಾನ್ವಿ ತಾಲ್ಲೂಕಿಗೆ ಶೇ 62 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 14 ಮೇ 2017, 8:32 IST
Last Updated 14 ಮೇ 2017, 8:32 IST

ಮಾನ್ವಿ : ಎಸ್ಸೆಸ್ಸೆಲ್ಸಿ  ಪರೀಕ್ಷೆಯಲ್ಲಿ ಮಾನ್ವಿ ತಾಲ್ಲೂಕಿಗೆ  ಶೇ 62ರಷ್ಟು  ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ತಿಳಿಸಿದ್ದಾರೆ. ತಾಲ್ಲೂಕಿನಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 4,376 ವಿದ್ಯಾರ್ಥಿಗಳಲ್ಲಿ 2,718 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ನೀರಮಾನ್ವಿಯ ಆದರ್ಶ ವಿದ್ಯಾಲಯದ  ವಿದ್ಯಾರ್ಥಿ ಗಿರೀಶಕುಮಾರ ವೀರಭದ್ರಪ್ಪ 616 (ಶೇ 98.56)  ಅಂಕಗಳನ್ನು ಗಳಿಸಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ.ಮಾನ್ವಿ ಪಟ್ಟಣದ ಶಾರದಾ ವಿದ್ಯಾನಿಕೇತನ ಪ್ರೌಢಶಾಲೆಯ ವಿದ್ಯಾರ್ಥಿನಿ  ವೈ.ವೈಷ್ಣವಿ ಅನಂತಕೃಷ್ಣರಾವ್‌ 614 (ಶೇ 98.24) ದ್ವಿತೀಯ ಸ್ಥಾನ , ಕವಿತಾಳದ ಮೊರಾರ್ಜಿ  ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಮಹೇಶ ಬಸವರಾಜ 609 (ಶೇ 97.44) ಮೂರನೇ ಸ್ಥಾನ ಪಡೆದಿದ್ದಾರೆ. ಸಿರವಾರದ ಸರ್ಕಾರಿ ಉರ್ದು ಪ್ರೌಢಶಾಲೆಗೆ ಶೇ 100ರಷ್ಟು  ಫಲಿತಾಂಶ ಬಂದಿದೆ.

ಶೇ 60ರಷ್ಟು ಫಲಿತಾಂಶ: ಪಟ್ಟಣದ ವೆಂಕಟೇಶ್ವರ ಪ್ರೌಢಶಾಲೆ  ಶೇ 60ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆ ಬರೆದ ಒಟ್ಟು 63 ವಿದ್ಯಾರ್ಥಿಗಳಲ್ಲಿ  38 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶಶಿಕುಮಾರ ಗೋವಿಂದಪ್ಪ 565 (ಶೇ 91), ಅಬ್ದುಲ್‌ ಕರೀಮ್‌ ಮಹ್ಮದ್‌ ಹಸನ್‌ 561( ಶೇ 90), ಕೆ.ರೂಪಶ್ರೀ ಶ್ರೀಶೈಲ 552(88.32) ಅತ್ಯಧಿಕ ಅಂಕಗಳನ್ನು ಗಳಿಸಿದ್ದಾರೆ. ಒಟ್ಟು 5  ವಿದ್ಯಾರ್ಥಿಗಳು ಅಗ್ರಶ್ರೇಣಿ, 24 ಪ್ರಥಮ ದರ್ಜೆ, 8 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ADVERTISEMENT

55 ವಿದ್ಯಾರ್ಥಿಗಳು ಉತ್ತೀರ್ಣ:  ಕಲ್ಮಠ ಪ್ರೌಢಶಾಲೆ  ಶೇ51 ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆಗೆ ಕುಳಿತ ಒಟ್ಟು 107 ವಿದ್ಯಾರ್ಥಿಗಳಲ್ಲಿ 55 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  5 ವಿದ್ಯಾರ್ಥಿಗಳು ಅಗ್ರಶ್ರೇಣಿ, 41 ಪ್ರಥಮ ದರ್ಜೆ, 8 ವಿದ್ಯಾರ್ಥಿಗಳು ದ್ವಿತೀಯ ದರ್ಜೆ, ಓರ್ವ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.  ದಯಾನಂದ ಕರಿಯಪ್ಪ 605 ( ಶೇ 96.80)  ಅಂಕ ಗಳಿಸಿದ್ದಾರೆ.

ಶೇ 91.66ರಷ್ಟು ಫಲಿತಾಂಶ: ಪಟ್ಟಣದ ನೇತಾಜಿ ಪ್ರೌಢಶಾಲೆ  ಕನ್ನಡ ಮಾಧ್ಯಮ ವಿಭಾಗದಲ್ಲಿ ಶೇ 91.66 ಮತ್ತು ಆಂಗ್ಲ ಮಾಧ್ಯಮದಲ್ಲಿ ಶೇ 93.75 ಫಲಿತಾಂಶ ಪಡೆದಿದೆ. ಕನ್ನಡ ಮಾಧ್ಯಮದಲ್ಲಿ ಒಟ್ಟು 7   ವಿದ್ಯಾರ್ಥಿಗಳು ಅಗ್ರಶ್ರೇಣಿ, 33 ಪ್ರಥಮ ದರ್ಜೆ, 15 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸೌಜನ್ಯಾ ಚಂದ್ರಶೇಖರ 604 ಮತ್ತು ಸುಷ್ಮಾ ಎರೆಯಪ್ಪಗೌಡ 600  ಅಂಕಗಳನ್ನು ಗಳಿಸಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ   ಇಬ್ಬರು ವಿದ್ಯಾರ್ಥಿಗಳು ಅಗ್ರಶ್ರೇಣಿ, 13 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.  ಭ್ರಮರಾಂಬಿಕಾದೇವಿ ಸುವರ್ಣಗಿರಿಮಠ 587, ಮಾನಸ ಸುಧೀರ್‌ 570  ಅಂಕಗಳನ್ನು ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.