ADVERTISEMENT

ಕಾಮಗಾರಿ ತ್ವರಿತಕ್ಕೆ ಶಾಸಕ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 7:13 IST
Last Updated 9 ಸೆಪ್ಟೆಂಬರ್ 2017, 7:13 IST

ರಾಯಚೂರು: ‘ನಾನು ರಸ್ತೆ ನಿರ್ಮಾಣ ಕಾಮಗಾರಿಗೆ ಸರ್ಕಾರದಿಂದ ಹಣ ಮಂಜೂರು ಮಾಡಿಸಲು ಶ್ರಮಿಸಿದೆ. ಆದರೆ ಅಧಿಕಾರಗಳಿಂದ ಬೇಗನೆ ಕಾಮಗಾರಿ ಮಾಡಿಸಲು ಆಗುತ್ತಿಲ್ಲ. ಕಾಮಗಾರಿ ತ್ವರಿತಗೊಳಿಸಬೇಕು’ಎಂದು ಶಾಸಕ ಡಾ.ಶಿವರಾಜ ಪಾಟೀಲ ಸೂಚನೆ ನೀಡಿದರು.

ನಗರದ ವಿವಿಧೆಡೆ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶುಕ್ರವಾರ ವೀಕ್ಷಣೆ ಮಾಡಿದರು. ‘ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬುದು ಅಧಿಕಾರಗಳು ತಿಳಿದುಕೊಳ್ಳಬೇಕು. ಕೆಲಸ ಮಾಡದಿದ್ದರೆ ಮನೆಗೆ ಹೋಗಿ. ಇದು ನನ್ನ ಕೊನೆಯ ಎಚ್ಚರಿಕೆ. ನಗರೋತ್ಥಾನ ಕಾಮಗಾರಿಗಳು ನಡೆಯದ ಕಾರಣ ನೋಟಿಸ್ ನೀಡಲಾಗಿದೆ. ಕಾಮಗಾರಿ ನಡೆಯದಿದ್ದರೆ ಜಿಲ್ಲಾಧಿಕಾರಿ ವಿರುದ್ಧ ಹೋರಾಟ ಆರಂಭಿಸಲಾಗುವುದು’ ಎಂದು ಹೇಳಿದರು.

ಡಿಎಸ್‌ಪಿ ಹರೀಶ ಅವರೊಂದಿಗೆ ಚರ್ಚಿಸಿ, ರಸ್ತೆಯ ನಿರ್ಮಾಣ ಕಾಮಗಾರಿಯ ನಡೆದ ಕಾರಣ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ಪೋಲಿಸ್‌ ಸಿಬ್ಬಂದಿ ನೇಮಿಸುವಂತೆ ಸೂಚಿಸಿದರು.

ADVERTISEMENT

ನಗರಸಭೆ ಆಯುಕ್ತ ಗುರುಲಿಂಗಪ್ಪ, ಒಳಚರಂಡಿಯ ನಿಗಮದ ಚಂದ್ರಶೇಖರ್‌, ಮುಂಖಡರಾದ ಎನ್. ಶಿವ ಶಂಕರ, ಭೀಮಣ್ಣ ಮಂಚಾಲ ಯಲ್ಲಪ್ಪ ಖಾಜಾಮೋಹಿದ್ದೀನ್‌, ದಾನಪ್ಪ ಯಾದವ, ವಿಶ್ವನಾಥ ಪಟ್ಟಿ, ನರಸಿಂಹಲು, ಅಲಂಬಾಬು, ಸುಂದರರಾಜ್, ಜಾನ್‌ ಪಶ್ಚಿಮ ಪೋಲಿಸ್‌ ಠಾಣೆಯ ಪಿಎಸ್ಐ, ಟ್ರಾಫಿಕ್ ಪಿಎಸ್ಐ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.