ADVERTISEMENT

ಕುಡಿಯುವ ನೀರಿಗಾಗಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಮೇ 2017, 8:58 IST
Last Updated 16 ಮೇ 2017, 8:58 IST

ಸಿಂಧನೂರು: ತಾಲ್ಲೂಕಿನ ತುರ್ವಿಹಾಳದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಸೋಮವಾರ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಮೆರವಣಿಗೆ ಮಾಡಿ ಪಟ್ಟಣ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.

‘ನೀರಿನ ಸಮಸ್ಯೆ ಕುರಿತು ಹಲವಾರು ಬಾರಿ ಪಂಚಾಯತಿ ಅಧ್ಯಕ್ಷ ಮರಿಯಪ್ಪ ನಾಯಕ ಮತ್ತು ಮುಖ್ಯಾಧಿಕಾರಿ ಹಂಪಯ್ಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು 12ನೇ ವಾರ್ಡ್‍ ಸದಸ್ಯ ಶರಣೇಗೌಡ ದೇವರಮನಿ  ಹೇಳಿದರು.

ಅಧ್ಯಕ್ಷ ಮತ್ತು ಮುಖ್ಯಾಧಿಕಾರಿಯನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡರು. ‘ನೀರಿನ ಸಮಸ್ಯೆ ತೀವ್ರತೆ  ಅರ್ಥವಾಗಿದ್ದು, ಆದಷ್ಟು ಶೀಘ್ರ ಕ್ರಮಕೈಗೊಳ್ಳುವುದಾಗಿ’ ಅಧ್ಯಕ್ಷ ಮರಿಯಪ್ಪ ನಾಯಕ ಭರವಸೆ ನೀಡಿದರು.

ADVERTISEMENT

ಭೀಮಮ್ಮ, ದುರುಗಮ್ಮ,ಅಯ್ಯಮ್ಮ, ಅಂಬಮ್ಮ, ಮರಿಯಪ್ಪ, ಮಲ್ಲಮ್ಮ, ಶರಣಪ್ಪ, ತಿಪ್ಪಮ್ಮ, ದ್ಯಾವಮ್ಮ, ಶಂಕ್ರಮ್ಮ, ಅಂಬಮ್ಮ, ಮೀನಾಕ್ಷಮ್ಮ, ಹುಲಿಗೆಮ್ಮ, ಹನುಮಂತ,  ಮರೇಂದ್ರ, ಶ್ರೀನಿವಾಸ, ಗಜ್ಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.