ADVERTISEMENT

ಗಗನಕ್ಕೇರಿದ ತರಕಾರಿ ಬೆಲೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 9:31 IST
Last Updated 13 ನವೆಂಬರ್ 2017, 9:31 IST
ಶಕ್ತಿನಗರದ ಭಾನುವಾರದ ಸಂತೆಯಲ್ಲಿ ತರಕಾರಿ ಖರೀದಿಸುತ್ತಿರುವ ಗ್ರಾಹಕರು
ಶಕ್ತಿನಗರದ ಭಾನುವಾರದ ಸಂತೆಯಲ್ಲಿ ತರಕಾರಿ ಖರೀದಿಸುತ್ತಿರುವ ಗ್ರಾಹಕರು   

ಶಕ್ತಿನಗರ: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಗ್ರಾಹಕರಿಂದ ತುಂಬಿರುತ್ತಿದ್ದ ಇಲ್ಲಿನ ವಾರದ ಸಂತೆಯಲ್ಲಿ ತರಕಾರಿ ಬೆಲೆ ವಿಪರೀತ ಹೆಚ್ಚಾಗಿದ್ದರಿಂದ ವಹಿವಾಟು ಕಳೆಗುಂದಿತ್ತು.

ಪ್ರತಿ ಕೆ.ಜಿ ಟೊಮೆಟೊ, ಈರುಳ್ಳಿ ₹50, ಬದನೆಕಾಯಿ, ಗೆಡ್ಡೆಕೋಸು, ಸೌತೆಕಾಯಿ, ಹಸಿಮೆಣಸಿನ ಕಾಯಿ, ಹೂ ಕೋಸು, ಬೆಂಡೆಕಾಯಿ ₹60, ಆಲೂಗಡ್ಡೆ ₹40ಕ್ಕೆ ಮಾರಾಟವಾಗು­ತ್ತಿದೆ. ಜನ ಸಾಮಾನ್ಯರು ತರಕಾರಿ ಖರೀದಿ­ಸಲು ಹಿಂದೆ ಮುಂದೆ ನೋಡುವಂತಾಗಿದೆ.

ತರಕಾರಿ ಬೆಲೆ ವಾರದಲ್ಲಿ ದುಪ್ಪಟ್ಟಾಗಿದ್ದು, ₹500 ಖರ್ಚು ಮಾಡಿದರೂ ಬ್ಯಾಗ್‌ ತುಂಬು­ತ್ತಿಲ್ಲ. ಈ ಬೆಲೆ ಏರಿಕೆಯಿಂದ ಸ್ವಲ್ಪವೇ ತರಕಾರಿ ಖರೀದಿಸಿ ಜೀವನ ಸಾಗಿಸುವಂತಾಗಿದೆ ಎಂದು ಅರಷಿಣಿಗಿ ದೇವೇಂದ್ರ ಹೇಳಿದರು.

ADVERTISEMENT

‘ಧಾರಣೆ ಏರಿಕೆಯಿಂದ ಗ್ರಾಹಕರು ಖರೀದಿಗೆ ಹಿಂಜರಿಯುತ್ತಿದ್ದಾರೆ. ಇದರಿಂದ ತರಕಾರಿ ಉಳಿದುಕೊಂಡು ನಷ್ಟವಾಗುವ ಭೀತಿ ಎದುರಾಗಿದೆ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.