ADVERTISEMENT

ಮಂತ್ರಾಲಯ: ಆರಾಧನೆ ಸಪ್ತರಾತ್ರೋತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2015, 7:08 IST
Last Updated 29 ಆಗಸ್ಟ್ 2015, 7:08 IST

ರಾಯಚೂರು: ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿಗಳ 344ನೇ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವಕ್ಕೆ ಶುಕ್ರವಾರ ಧ್ವಜಾರೋಹಣ ನೆರವೇರಿಸುವ ಮೂಲಕ ಪೀಠಾಧಿಪತಿ ಸುಭುದೇಂದ್ರ ಸ್ವಾಮೀಜಿ ಚಾಲನೆ ನೀಡಿದರು.

ಗಜಪೂಜೆ, ಗೋ ಪೂಜೆ, ಲಕ್ಷ್ಮೀ ಪೂಜೆ ಹಾಗೂ ಧಾನ್ಯ ಪೂಜೆ ಮಾಡಿದರು. ನಂತರ ವಿವಿಧ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮ ನಡೆದವು. ಸಪ್ತರಾತ್ರೋತ್ಸವದ 7  ದಿನಗಳಂದು ನಿತ್ಯ ಬೆಳಿಗ್ಗೆ 4ರಿಂದ 8-30ರವರೆಗೆ ನಿರ್ಮಾಲ್ಯ ವಿಸರ್ಜನೆ, ಶ್ರೀ ಉತ್ಸವ ರಾಯರ ಪಾದಪೂಜೆ, ಪಂಚಾಮೃತ ಅಭಿಷೇಕ, 11 ಗಂಟೆಗೆ ಶ್ರೀಗಳಿಂದ ಶ್ರೀ ಮೂಲರಾಮದೇವರ ಪೂಜೆ, ಸಂಜೆ 5 ಗಂಟೆಗೆ ಜ್ಞಾನಯಜ್ಞ- ವಿದ್ವಾಂಸರಿಂದ ಪ್ರವಚನ, ಹಗಲು ದೀವಟಿಗೆ, ಪ್ರಾಕಾರ ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ.

ಪಂಡಿತ ಕೇಸರಿ ರಾಜಾ ಎಸ್. ಗಿರಿಯಾಚಾರ್ಯ, ವ್ಯವಸ್ಥಾಪಕ ಶ್ರೀನಿವಾಸರಾವ್, ವಾದಿರಾಜಾಚಾರ್ಯ, ಕಾರ್ಯನಿರ್ವಾಹಕ ಅಧಿಕಾರಿ ಮಾಧವ ಶೆಟ್ಟಿ, ಅನಂತ ಪುರಾಣಿಕ, ಶ್ರೀಪತಿ ಆಚಾರ್ಯ, ಡಿ.ಎಂ.ಆನಂದರಾವ್. ನರಸಿಂಹಮೂರ್ತಿ ಸೇತುಮಾಧವ ಕನಕವೀಡು, ಸಾವಿರಾರು ಭಕ್ತರು  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.