ADVERTISEMENT

‘ಯಡಿಯೂರಪ್ಪ ಸ್ಪರ್ಧೆ: ಹೈ.ಕ ಅಭಿವೃದ್ಧಿಗೆ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 6:49 IST
Last Updated 22 ಸೆಪ್ಟೆಂಬರ್ 2017, 6:49 IST

ಸಿರವಾರ: ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಈ ಭಾಗದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದರೆ, ಹೈದರಾಬಾದ್- ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ  ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಶರಣಪ್ಪಗೌಡ ಹೇಳಿದರು.

ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪ ಅವಧಿಯಲ್ಲಿ ₹12000 ಕೋಟಿ ವೆಚ್ಚದಲ್ಲಿ ತುಂಗಾಭದ್ರ ಎಡದಂಡೆ ನಾಲೆಗಳ ಶಾಶ್ವತ ದುರಸ್ತಿ ಕಾರ್ಯ ಮತ್ತು ಕೃಷಿ ವಿಶ್ವವಿದ್ಯಾಲಯ ಮಂಜೂರು ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯ ನಡೆದಿದೆ. ಯಡಿಯೂರಪ್ಪ ಅವರನ್ನು ರಾಯಚೂರು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಮನವಿ ಮಾಡುತ್ತೇವೆ ಎಂದರು.

ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಎನ್.ಶಂಕ್ರಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಲಾಭದ ದುರುದ್ದೇಶದಿಂದ ಲಿಂಗಾಯತ ಧರ್ಮವನ್ನು ಒಡೆಯುವ ತಂತ್ರಗಾರಿಕೆ ಮಾಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಮತದಾರರು ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದು ಟೀಕಿಸಿದರು.

ADVERTISEMENT

ಪದಾಧಿಕಾರಿಗಳಾದ ಶಿವಶರಣಗೌಡ ಲಕ್ಕಂದಿನ್ನಿ, ರಮೇಶ ಚಿಂಚರಕಿ, ಮುಖಂಡರಾದ ಬಂಡೇಶ ವಲ್ಕಂದಿನ್ನಿ, ಕೊಟ್ರೇಶಪ್ಪ ಕೋರಿ, ಸಿದ್ದಯ್ಯಸ್ವಾಮಿ, ಜೆ.ಅಮರೇಶಗೌಡ, ಆರ್.ನಾಗರಾಜಗೌಡ, ಬಸವರಾಜ ಗಡ್ಲ, ಬಾಬು, ಶರಣಗೌಡ ಶಾಖಪೂರು, ಈರಣ್ಣ ನಾಯಕ, ಹುಚ್ಚಪ್ಪ ನಾಯಕ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.