ADVERTISEMENT

ರಾಸಾಯನಿಕ ಮಿಶ್ರಿತ ನೀರು: ನಾಲೆ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 6:38 IST
Last Updated 16 ಸೆಪ್ಟೆಂಬರ್ 2017, 6:38 IST

ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ರಾಸಾಯಿನಿಕ ಮಿಶ್ರಿತ ಕಲುಷಿತ ನೀರು ನಾಲೆಗಳಲ್ಲಿ ಸೇರಿದ್ದು, ಕಾರ್ಮಿಕರು ಸ್ವಚ್ಛತೆ ಕಾರ್ಯ ಕೈಗೊಂಡಿದ್ದಾರೆ.

ಆರ್‌ಟಿಪಿಎಸ್‌ನಿಂದ ಹೊರಬರುವ ಕೆಮಿಕಲ್ಸ್‌ ಮಿಶ್ರಿತ ನೀರು ನದಿ ಸೇರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆಯಾಗಿ ನಾಲ್ಕೈದು ದಿನಗಳಿಂದ ನಾಲೆಗಳಲ್ಲಿ ಉಸುಕಿನ ಚೀಲ, ಬಿದಿರು, ಹುಲ್ಲುಗಳನ್ನು ಅಡ್ಡಲಾಗಿ ಕಟ್ಟಿ ಕಲುಷಿತ ನೀರು ತಡೆಗೆ ಕಾರ್ಮಿಕರು ಮುಂದಾಗಿದ್ದಾರೆ.

ರಾಸಾಯಿನಿಕ ಮಿಶ್ರಿತ ಕಲುಷಿತ ನೀರನ್ನು 50ಕ್ಕೂ ಹೆಚ್ಚು ಬ್ಯಾರೆಲ್‌ಗಳಲ್ಲಿ ತುಂಬಿ ಸಾಗಿಸುತ್ತಿದ್ದಾರೆ. 10 ಕಿ.ಮೀ.ವರೆಗೆ ಕೆಲಸ ನಡೆಯುತ್ತಿದ್ದು, ಮೂರು ಕ್ರೇನ್‌ಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

ಸ್ಥಳಕ್ಕೆ ಭೇಟಿ ನೀಡಿದ್ದ ಆರ್‌ಟಿಪಿಎಸ್‌ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಸಿ.ವೇಣುಗೋಪಾಲ ಮಾತನಾಡಿ, ‘ಸೆ. 12ರಂದು ತಡರಾತ್ರಿ ಆರ್‌ಟಿಪಿಎಸ್‌ 5ನೇ ವಿದ್ಯುತ್ ಘಟಕದ ಸೇಫ್ಟಿ ವಾಲ್‌ನಿಂದ ರಾಸಾಯನಿಕ ಸೋರಿಕೆಯಾಗಿದೆ. ಆ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು, ಸಿಬ್ಬಂದಿಗೆ ಘಟನೆ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್‌ ಜಾರಿ ಮಾಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.