ADVERTISEMENT

ವಿಜೃಂಭಣೆಯ ಮೇರಿ ಮಾತೆ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 7:32 IST
Last Updated 15 ಸೆಪ್ಟೆಂಬರ್ 2017, 7:32 IST
ಮಾನ್ವಿ ಸೇಂಟ್‌ ಮೇರಿಸ್‌ ಚರ್ಚ್‌ನಲ್ಲಿ ಮಂಗಳವಾರ ಮೇರಿ ಮಾತೆ ಮಹೋತ್ಸವದ ಅಂಗವಾಗಿ ತೇರಿನ ಮೆರವಣಿಗೆ ನಡೆಯಿತು
ಮಾನ್ವಿ ಸೇಂಟ್‌ ಮೇರಿಸ್‌ ಚರ್ಚ್‌ನಲ್ಲಿ ಮಂಗಳವಾರ ಮೇರಿ ಮಾತೆ ಮಹೋತ್ಸವದ ಅಂಗವಾಗಿ ತೇರಿನ ಮೆರವಣಿಗೆ ನಡೆಯಿತು   

ಮಾನ್ವಿ: ಪಟ್ಟಣದ ಕೋನಾಪುರ ಪೇಟೆಯ ಸೇಂಟ್‌ ಮೇರಿಸ್‌ ಚರ್ಚ್‌ನಲ್ಲಿ ಮಂಗಳವಾರ ಮೇರಿ ಮಾತೆಯ ಮಹೋತ್ಸವದ ಅಂಗವಾಗಿ ತೇರಿನ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.

ಮಹೋತ್ಸವದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಹಗರಿಬೊಮ್ಮನ ಹಳ್ಳಿಯ ಫಾದ್ರಿ ವಿಜಯಕುಮಾರ ದಿವ್ಯ ಪೂಜೆಯ ಪ್ರಭೋದನೆ ನೆರವೇರಿಸಿದರು. ನಂತರ ಕೋನಾಪುರ ಪೇಟೆಯ ಪ್ರಮುಖ ರಸ್ತೆಗಳಲ್ಲಿ ಮೇರಿ ಮಾತೆಯ ತೇರಿನ ಮೆರವಣಿಗೆ ನಡೆಯಿತು. ಕವಿತಾಳದ ಫಾದ್ರಿ ಐವನ್‌ ಮತ್ತು ಲೊಯೋಲಾ ಕಾಲೇಜಿನ ಪ್ರಾಂಶುಪಾಲ ಫಾದರ್‌ ರಾಯ್‌ಸ್ಟನ್‌ ಆಶೀರ್ವಚನ ನೀಡಿದರು.

ಬುಧವಾರ ಚರ್ಚ್‌ನಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬೆಳಗಾವಿಯ ಫಾದ್ರಿ ಪ್ರಕಾಶ ಮೋರಸ್‌, ಸೇಂಟ್‌ ಮೇರಿಸ್‌ ಚರ್ಚ್‌ನ ಮುಖ್ಯ ಗುರು ಫಾದರ್‌ ಪೌಲ್‌ ಮೋರಸ್‌ ಭಾಗವಹಿಸಿದ್ದರು. ಭಕ್ತಾದಿಗಳಿಗೆ ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.