ADVERTISEMENT

ವಿವಿಧ ಕಾಮಗಾರಿಗಳಿಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 6:16 IST
Last Updated 21 ಮೇ 2017, 6:16 IST

ಶಕ್ತಿನಗರ: 14ನೇ ಹಣಕಾಸು ಆಯೋಗದ ಅಡಿ ಕೈಗೊಳ್ಳುವ ಕಾಮಗಾರಿಗಳಿಗೆ ಸಗಮಕುಂಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

2017–18ನೇ ಸಾಲಿನಲ್ಲಿ  ಒಟ್ಟು ₹15.67 ಲಕ್ಷ ಅನುದಾನದಲ್ಲಿ ಕುಡಿಯುವ ನೀರು ಸರಬರಾಜು ,ಸೆಪ್ಟಿಕ್ ಟ್ಯಾಂಕ್ ನಿರ್ವಹಣೆ  ನೈರ್ಮಲ್ಯ ಕಾಮಗಾರಿ, ತ್ಯಾಜ್ಯ ನಿರ್ವಹಣೆ , ಸಮುದಾಯ ಆಸ್ತಿಗಳ ನಿರ್ವಹಣೆ ,  ರಸ್ತೆಗಳ ನಿರ್ವಹಣೆ ,  ಮಳೆ ನೀರಿನ ಚರಂಡಿಗಳ ನಿರ್ಮಾಣ , ಬೀದಿ ದೀಪಗಳ ನಿರ್ವಹಣೆ , ಜೀವ ವೈವಿದ್ಯತೆ ರಕ್ಷಣೆ ನಿರ್ವಹಣೆ ಸೇರಿದಂತೆ ಸ್ಮಶಾನಗಳ ಅಭಿವೃದ್ಧಿ ಹಾಗೂ ಇನ್ನಿತರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ ಸಭೆಯನ್ನು ಕೋರಿದರು.

2016–17ನೇ ಸಾಲಿನಲ್ಲಿ ನರೇಗಾ ಅಡಿ ಒಟ್ಟು ₹ 13 ಲಕ್ಷ  ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಪ್ರಸಕ್ತ ವರ್ಷ ಹೊಸ ಜಾರ್ಬ್ ಕಾರ್ಡ್‌ಗಳನ್ನು ತೋರಿಸಿ ಬ್ಯಾಂಕ್ ಖಾತೆ ಪಡೆದುಕೊಳ್ಳಬೇಕು. 313 ಜನ ಕೂಲಿಕಾರರು ಆಧಾರ್‌ಕಾರ್ಡ್‌ ಸಂಖ್ಯೆ ನೀಡಿಲ್ಲ. ತಕ್ಷಣವೇ ಆಧಾರ್‌ ಕಾರ್ಡ್‌ ಸಂಖ್ಯೆಗಳನ್ನು ನೀಡಿದರೆ ಕೂಲಿ ಹಣ ಬ್ಯಾಂಕ್‌ ಖಾತೆಗಳಿಗೆ ಪಾವತಿಯಾಗುತ್ತದೆ ಎಂದು ಪಿಡಿಒ ವಿವರಿಸಿದರು.

ADVERTISEMENT

ಪ್ರಧಾನಿ ಆವಾಜ್ ಯೋಜನೆಯಡಿಯಲ್ಲಿ ಹೆಚ್ಚುವರಿಯಾಗಿ 54 ಮನೆಗಳಲ್ಲಿ ಪರಿಶಿಷ್ಟ ಪಂಗಡ–8 ಮತ್ತು ಪರಿಶಿಷ್ಟ ಜಾತಿ –36 ಮತ್ತು ಸಾಮಾನ್ಯ ವರ್ಗ–10 ಮನೆಗಳು ಮಂಜೂರಾಗಿದೆ. ಕಡು ಬಡವ ಫಲಾನುಭವಿಗಳನ್ನು ಗುರುತಿಸಿ ಹಂಚಿಕೆ ಮಾಡಬೇಕು ಎಂದು ಅವರು ಸಭೆಗೆ ತಿಳಿಸಿದರು.

ಸೋಲಾರ ದೀಪ ಅಳವಡಿಸಬೇಕು. ಬಾವಿಗಳು ಹೂಳೆತ್ತುವುದು, ಅಂಗನವಾಡಿ ಕೇಂದ್ರ ನಿರ್ಮಾಣದ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರಾದ ದೇವಪ್ಪ, ಪಾಲಪ್ಪ, ತಿಮ್ಮಪ್ಪ, ಬಾಬಣ್ಣ, ಜಿಂದಪ್ಪ ಸಭೆಯ ಗಮನಕ್ಕೆ ತಂದರು.ಕೃಷಿ ಇಲಾಖೆಯ ಅಧಿಕಾರಿ ಶ್ರೀರಾಮುಲು, ಗ್ರಾ. ಪಂ. ಉಪಾಧ್ಯಕ್ಷೆ ರಂಗಪ್ಪ, ಬಿಲ್‌ಕಲೆಕ್ಟರ್ ಲಿಂಗಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.