ADVERTISEMENT

ಶಾಲಾ ಮೈದಾನದಲ್ಲಿ ಹೆಲಿಪ್ಯಾಡ್‌;ತೊಂದರೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 5:48 IST
Last Updated 12 ಜುಲೈ 2017, 5:48 IST

ಮುದಗಲ್: ನಂದವಾಡಗಿ ಏತ ನೀರಾವರಿ ಉದ್ಘಾಟನೆಗೆ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಲಿಪ್ಯಾಡ್ ಮೈದಾನವನ್ನು ಪ್ರೌಢಶಾಲೆ ಮೈದಾನದಲ್ಲಿ ನಿರ್ಮಿಸುತ್ತಿರುವುದರಿಂದ ಅಭ್ಯಾಸಕ್ಕೆ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.

ಮುಖ್ಯ ಮಂತ್ರಿಗಳ ಹೆಲಿಪ್ಯಾಡ್ ಹಲ್ಕಾವಟಗಿ ಪ್ರೌಢ ಶಾಲೆ ಮೈದಾನದಲ್ಲಿ ಮಾಡಿದ್ದಾರೆ. ಒಂದು ವಾರದಿಂದ ಹೆಲಿಪ್ಯಾಡ್ ಮೈದಾನ ನಿರ್ಮಾಣಕ್ಕೆ ಬಳಸುವ ಯಂತ್ರಗಳ ಶಬ್ದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆ ಉಂಟಾಗುತ್ತಿದೆ. ನಿತ್ಯ ಅಧಿಕಾರಿಗಳು ವೀಕ್ಷಣೆಗೆ ಬರುತ್ತಿರುವುದರಿಂದ ಅಭ್ಯಾಸದ ಕಡೆ ಗಮನ ಹರಿಸಲು ಆಗುತ್ತಿಲ್ಲ. ಅನೇಕ ವರ್ಷಗಳಿಂದ ಬಣ್ಣ ಕಾಣದ ಶಾಲೆಗೆ ವಿದ್ಯಾರ್ಥಿಗಳಿಂದ ಬಣ್ಣ ಬಳಿಸುತ್ತಿದ್ದಾರೆ.

ಹೆಲಿಪ್ಯಾಡ್‌ ನಿರ್ಮಾಣಕ್ಕೆ ಶಾಲೆಯ ಮೈದಾನದಲ್ಲಿ ನೆರಳು ನೀಡುತ್ತಿದ್ದ ಮರಗಳನ್ನು ಕಡಿಯಲಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ವಿದ್ಯಾರ್ಥಿ ಹೇಳಿದರು. ರಸ್ತೆಗಳು ಅಭಿವೃದ್ಧಿ ಕಾಣುತ್ತಿವೆ. ರಸ್ತೆ ಪಕ್ಕದಲ್ಲಿ ಬೆಳೆದ ಮರಗಳಿಗೆ ಸುಣ್ಣ, ಬಣ್ಣ ಹಾಕಿ ಮರಗಳನ್ನು ಗುರುತಿಸಿದ್ದಾರೆ. ಮಾರ್ಗ ಸೂಚಿಯ ನಾಮಫಲಕಗಳು ನವೀಕರಣಗೊಂಡಿವೆ.

ADVERTISEMENT

ಶಾಸಕ, ಜಿಲ್ಲಾಧಿಕಾರಿಯಿಂದ ಸ್ಥಳ ಪರಿಶೀಲನೆ:  ಇಲ್ಲಿನ ನಂದವಾಡಗಿ ಏತ ನೀರಾವರಿ ಕಾಮಗಾರಿಗೆ ಚಾಲನೆ ನೀಡಲು ಜುಲೈ 13ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್  ಮಂಗಳವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು.

ಉಪವಿಭಾಗ ಅಧಿಕಾರಿ ದಿವ್ಯಾಪ್ರಭು,  ಪೊಲೀಸ್ ಉಪವಿಭಾಗ ಅಧಿಕಾರಿ ಶರಣಪ್ಪ ಸುಭೇದಾರ, ತಹಶೀಲ್ದಾರ್ ಶಿವಾನಂದ ಸಾಗರ್, ರಾಜೇಂದ್ರ ಕುಮಾರ, ವೀರನಗೌಡ ಪಾಟೀಲ ಲಕ್ಕಿಹಾಳ, ಬಸನಗೌಡ ಕಂಬಳಿ, ಸಂಗಣ್ಣ ದೇಸಾಯಿ, ಶೇಖ ರಸೂಲ, ಗಿರಿಮಲ್ಲನಗೌಡ, ವೆಂಕನಗೌಡ ಐದನಾಳ, ಇಒ ಬಾಬು ರಾಠೋಡ್, ಬಿಇಒ ಚಂದ್ರಶೇಖರ ಬಂಡಾರಿ, ನಂದಕುಮಾರ, ಸತ್ಯನಾಯರಾಯಣ, ವೀರಭದ್ರಯ್ಯ, ಸುಶೀಲ ಕುಮಾರ, ಜಿ. ದೊಡ್ಡಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.