ADVERTISEMENT

ರಾಹುಲ್ ಭೇಟಿ: ಎಸ್‌ಪಿಜಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 6:48 IST
Last Updated 9 ಫೆಬ್ರುವರಿ 2018, 6:48 IST

ದೇವದುರ್ಗ: ಫೆ. 12ರಂದು ಪಟ್ಟಣಕ್ಕೆ ಬರಲಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭದ್ರತೆ ಸಂಬಂಧ ಕೇಂದ್ರದ ವಿಶೇಷ ರಕ್ಷಣಾ ತಂಡ ((ಎಸ್‌ಪಿಜಿ) ಗುರುವಾರ ಇಲ್ಲಿಗೆ ಭೇಟಿ ಭೇಟಿ ನೀಡಿ ಪರಿಶೀಲಿಸಿತು. ಕೇಂದ್ರ ತಂಡವು ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿತು. ತಂಡದ ಎಐಜಿ ಸಂಸದ ಬಿ.ವಿ.ನಾಯಕ ಅವರಿಂದ ಕಾರ್ಯಕ್ರಮ ಕುರಿತು ಮಾಹಿತಿ ಪಡೆದುಕೊಂಡರು.

ಭದ್ರತೆ ದೃಷ್ಟಿಯಿಂದ ವಿಶೇಷ ತಂಡಗಳನ್ನು ರಚಿಸಲಾಗುತ್ತಿದೆ. ಅವರ ಸೂಚನೆ ಮೇರೆಗೆ ವೇದಿಕೆ ನಿರ್ಮಾಣ, ಮುಖಂಡರ ಮತ್ತು ಕಾರ್ಯಕರ್ತರ ಗ್ಯಾಲರಿ ನಿರ್ಮಾಣ, ವಿದ್ಯುತ್‌, ರಸ್ತೆ ಸುರಕ್ಷತೆ ಕಲ್ಪಿಸಲಾಗುತ್ತಿದೆ. ಪಟ್ಟಣದ ಎಪಿಎಂಸಿ ಹಿಂದುಗಡೆ ಫೆ.12ರಂದು ಬೆಳಿಗ್ಗೆ 11.30ಕ್ಕೆ ಹಮ್ಮಿಕೊಂಡಿರುವ ಬಹಿರಂಗ ಸಭೆಯನ್ನು ಉದ್ದೇಶಿ ರಾಹುಲ್‌ ಗಾಂಧಿ ಮಾತನಾಡಲಿದ್ದಾರೆ.

ಸಂಸದ ಬಿ.ವಿ. ನಾಯಕ ಅವರ ನೇತೃತ್ವದಲ್ಲಿ ಭರದ ಸಿದ್ಧತೆಗಳು ನಡೆದಿವೆ. ‘ನಾವು ಹೇಳಿದಂತೆ ಸಿದ್ಧತೆ ನಡೆಯಬೇಕು. ಕಾರ್ಯಕ್ರಮಕ್ಕೆ ಬರುವ ಮುಖಂಡರು ಮತ್ತು ಕಾರ್ಯಕರ್ತರನ್ನು ಭದ್ರತಾ ತಂಡದಿಂದ ಪರಿಶೀಲನೆ ಮಾಡಿದ ನಂತರವೇ ಒಳಗೆ ಬಿಡಲಾಗುವುದು. ಇದಕ್ಕೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಭದ್ರತಾ ಅಧಿಕಾರಿಗಳು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ಸಿದ್ಧತಾ ಕಾರ್ಯವನ್ನು ಫೆ.10ರ ಒಳಗೆ ಮುಗಿಸಲು ಸೂಚಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಿಶೋರ್‌ ಬಾಬು, ಜಿಲ್ಲಾ ಎಪಿಎಂಸಿ ಅಧ್ಯಕ್ಷ ಅಮರೇಗೌಡ ಹಂಚಿನಾಳ, ಪಕ್ಷದ ವಕ್ತಾರ್‌ ರಂಗಪ್ಪ ಗೋಸಲ, ವಿಎಸ್‌ಎಸ್‌ಎನ್‌ ಅಧ್ಯಕ್ಷ ನಾಗರಾಜ ಪಾಟೀಲ, ರಾಮಣ್ಣ ಕರಡಿಗುಡ್ಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.