ADVERTISEMENT

ರಾಜಗೋಪುರಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2015, 9:00 IST
Last Updated 29 ಆಗಸ್ಟ್ 2015, 9:00 IST

ಮಾಗಡಿ: ಮನುಷ್ಯನಾಗಿ ಹುಟ್ಟಿದ ಮೇಲೆ ಭಗವಂತನನ್ನು ನೆನೆಯುವ ಮೂಲಕ ನಮ್ಮ ಜೀವನ ಪರಿಪೂರ್ಣ ಮಾಡಿಕೊಳ್ಳಬೇಕು ಎಂದು ಆದಿ ಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟಿರು.

ತಾಲ್ಲೂಕಿನ ಮಾದಿಗೊಂಡನಹಳ್ಳಿ ಗುಡ್ಡದ ಶ್ರೀರಂಗನಾಥಸ್ವಾಮಿ ದೇವಸ್ಥಾನದ ರಾಜ ಗೋಪುರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ದೇವರು ಕಷ್ಟ ಕೊಡುವುದಿಲ್ಲ ನಮ್ಮೊಳಗಿರುವ ಅಹಂಕಾರದಿಂದ ನಾವೇ ಕಷ್ಟವನ್ನು ತಂದು ಕೊಳ್ಳುತ್ತೇವೆ ಎಂದರು. ಗುಡ್ಡದ ರಂಗನಾಥಸ್ವಾಮಿ ಅಭಿವೃದ್ದಿ ಸೇವಾನ್ಯಾಸದ ಅಧ್ಯಕ್ಷ ವೀರಪ್ಪ ಮಾತನಾಡಿದರು.

ಇದೇ ವೇಳೆ ಆದಿಚುಂಚನಗಿರಿ ಮಠಕ್ಕೆ ₨1 ಲಕ್ಷ ದೇಣಿಗೆ ನೀಡಿದ ವೀರಪ್ಪ, ಅಂಗವಿಕಲ ಬಾಲಕಿ ವಿಜಯಲಕ್ಷ್ಮಿಗೆ ₨50 ಸಾವಿರ ಚೆಕ್‌ ನೀಡಿದರು.

ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎನ್. ಅಶೋಕ್, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಹಂಸಕುಮಾರಿ, ಜಿ.ಪಂ.ಸದಸ್ಯ ವಿಜಯಕುಮಾರ್, ಮಾದಿಗೊಂಡನಹಳ್ಳಿ ಗ್ರಾ.ಪಂ.ಅಧ್ಯಕ್ಷ ಕೆಂಚೇಗೌಡ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.