ADVERTISEMENT

ಒಳಕೋಟಮ್ಮ ಅಗ್ನಿಕೊಂಡದ ಎಳವಾರ

​ಪ್ರಜಾವಾಣಿ ವಾರ್ತೆ
Published 2 ಮೇ 2024, 6:14 IST
Last Updated 2 ಮೇ 2024, 6:14 IST
ಕನಕಪುರ ನಗರದ ಹಲಸಿನಮರದೊಡ್ಡಿ ಗ್ರಾಮದಲ್ಲಿ ಒಳಕೋಟಮ್ಮ ಅಗ್ನಿಕೊಂಡದ ಎತ್ತಿನಗಾಡಿಯ ಎಳವಾರಕ್ಕೆ ಪೂಜೆ ಸಲ್ಲಿಸಿದರು
ಕನಕಪುರ ನಗರದ ಹಲಸಿನಮರದೊಡ್ಡಿ ಗ್ರಾಮದಲ್ಲಿ ಒಳಕೋಟಮ್ಮ ಅಗ್ನಿಕೊಂಡದ ಎತ್ತಿನಗಾಡಿಯ ಎಳವಾರಕ್ಕೆ ಪೂಜೆ ಸಲ್ಲಿಸಿದರು   

ಕನಕಪುರ: ನಗರದ ಕೋಟೆಯಲ್ಲಿರುವ ಒಳಕೋಟಮ್ಮ ದೇವಾಲಯದಲ್ಲಿ ಗುರುವಾರ ಬೆಳಿಗ್ಗೆ ನಡೆಯುವ ಒಳಕೋಟಮ್ಮ ದೇವಿಯ ಅಗ್ನಿಕೊಂಡೋತ್ಸವ ಮತ್ತು ಜಾತ್ರೆ ಅಂಗವಾಗಿ ಗ್ರಾಮದಲ್ಲಿ ಬುಧವಾರ ರಾತ್ರಿ ಸೌದೆ ಬಂಡಿಯ ಎಳವಾರ ಕಾರ್ಯಕ್ರಮ ನಡೆಯಿತು.

ಒಳಕೋಟಮ್ಮ ದೇವಿಯ ಅಗ್ನಿಕೊಂಡೋತ್ಸವವನ್ನು ಕೋಟೆ ಮತ್ತು ಹಲಸಿನಮರದೊಡ್ಡಿ ಗ್ರಾಮಗಳ ಜನರು ಆಚರಿಸುತ್ತಾರೆ. ಸೌದೆ ಬಂಡಿಯ ಎತ್ತಿನಗಾಡಿಯ ಎಳವಾರ ಬುಧವಾರ ರಾತ್ರಿ ಹಲಸಿನಮರದೊಡ್ಡಿ ಮತ್ತು ಕೋಟೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಎತ್ತಿನಗಾಡಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.

ಗ್ರಾಮದ ಜನರು ಸೌದೆ ಬಂಡಿಯ ಎತ್ತಿನಗಾಡಿಯ ಎಳವಾರಕ್ಕೆ ಪೂಜೆ ಸಲ್ಲಿಸಿದರು. ಹಲಸಿನಮರದೊಡ್ಡಿ ಮತ್ತು ಕೋಟೆ ಗ್ರಾಮದಲ್ಲಿ ಮೆರವಣಿಗೆಯನ್ನು ನಡೆಸಿ ನಂತರದಲ್ಲಿ ಕೊಂಡಕ್ಕೆ ಸೌದೆಯನ್ನು ಹಾಕಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.