ADVERTISEMENT

ಸಂತೆಮೈದಾನ ಸ್ಥಳಾಂತರಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 9:21 IST
Last Updated 6 ಡಿಸೆಂಬರ್ 2017, 9:21 IST

ಶಿಕಾರಿಪುರ: ಸಂತೆ ಮೈದಾನ ಸ್ಥಳಾಂತರ ವಿರೋಧಿಸಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಯಲ್ಲಪ್ಪ ಮಾತನಾಡಿ, ‘ನೂತನ ಸಂತೆಮೈದಾನ ಪಟ್ಟಣದ ಹೃದಯ ಭಾಗದಿಂದ ದೂರವಿದೆ. ಸಾರ್ವಜನಿಕರು ಅಲ್ಲಿಗೆ ಹೋಗಿ ತೆರಳಿ ವಾರದ ಸಂತೆ ಮಾಡಲು ಕಷ್ಟ’ ಎಂದು ಹೇಳಿದರು.

ನೂತನ ಸಂತೆಮೈದಾನ ಬಸ್‌ನಿಲ್ದಾಣದಿಂದ ಕೂಡ ದೂರ ಇದೆ. ಗ್ರಾಮೀಣ ಭಾಗದ ಜನರಿಗೆ ಇದರಿಂದ ತೊಂದರೆ ಆಗಲಿದೆ. ನೂತನ ಸಂತೆ ಮೈದಾನದಲ್ಲಿ ಮೂಲ ಸೌಕರ್ಯ ಒದಗಿಸಿಲ್ಲ. ಹೀಗಾಗಿ ಬಸ್‌ನಿಲ್ದಾಣದ ಸಮೀಪ ಈಗ ಇರುವ ಹಳೇ ಸಂತೆ ಮೈದಾನದಲ್ಲಿಯೇ ವಾರದ ಸಂತೆ ನಡೆಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಬಿ.ಶಿವಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು. ಪದಾಧಿಕಾರಿಕಾರಿಗಳಾದ ಭಂಡಾರಿ ರವಿ, ಮಾರ್ತಾಂಡಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಶಿಕಾರಿಪುರ: ಸಂತೆ ಮೈದಾನ ಸ್ಥಳಾಂತರ ವಿರೋಧಿಸಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಯಲ್ಲಪ್ಪ ಮಾತನಾಡಿ, ‘ನೂತನ ಸಂತೆಮೈದಾನ ಪಟ್ಟಣದ ಹೃದಯ ಭಾಗದಿಂದ ದೂರವಿದೆ. ಸಾರ್ವಜನಿಕರು ಅಲ್ಲಿಗೆ ಹೋಗಿ ವಾರದ ಸಂತೆ ಮಾಡುವುದು ಕಷ್ಟ’ ಎಂದು ಹೇಳಿದರು.

ನೂತನ ಸಂತೆಮೈದಾನ ಬಸ್‌ನಿಲ್ದಾಣದಿಂದ ದೂರ ಇದೆ. ಗ್ರಾಮೀಣ ಭಾಗದ ಜನರಿಗೆ ಇದರಿಂದ ತೊಂದರೆ ಆಗಲಿದೆ. ನೂತನ ಸಂತೆ ಮೈದಾನದಲ್ಲಿ ಮೂಲ ಸೌಕರ್ಯ ಒದಗಿಸಿಲ್ಲ. ಹೀಗಾಗಿ ಬಸ್‌ನಿಲ್ದಾಣದ ಸಮೀಪ ಈಗ ಇರುವ ಹಳೇ ಸಂತೆ ಮೈದಾನದಲ್ಲಿಯೇ ವಾರದ ಸಂತೆ ನಡೆಸಬೇಕು ಎಂದು ಒತ್ತಾಯಿಸಿದರು.

ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಬಿ.ಶಿವಕುಮಾರ್‌ ಅವರಿಗೆ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಭಂಡಾರಿ ರವಿ, ಮಾರ್ತಾಂಡಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.