ADVERTISEMENT

ಪಡಿತರ ಪಡೆಯಲು ತೀರದ ಪಾಡು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 8:56 IST
Last Updated 18 ಸೆಪ್ಟೆಂಬರ್ 2017, 8:56 IST

ಕೋರಾ: ಆಧಾರ್ ಜೋಡಣೆ, ಬಯೋ ಮೆಟ್ರಿಕ್ ಕಾರಣ ಅನ್ನಭಾಗ್ಯ ಯೋಜನೆಯ ಅಕ್ಕಿ ಪಡೆಯಲು ಸಮೀಪದ ಮೆಳೇಹಳ್ಳಿಯಲ್ಲಿ ಜನರು ಪಡಿತರ ವಿತರಣಾ ಕೇಂದ್ರದ ಮುಂದೆ ದಿನಗಟ್ಟಲೇ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ ಉಂಟಾಗಿದೆ.

ಶನಿವಾರ ರಾತ್ರಿ 9 ಗಂಟೆಯವರೆಗೂ ಜನರು ಪಡಿತರ ಕೇಂದ್ರದ ಮುಂದೆ ಸಾಲಿನಲ್ಲಿ ನಿಂತಿದ್ದರು. ಭಾನುವಾರ ಬೆಳಿಗ್ಗೆ 8ಗಂಟೆಗೆಯೇ ಪಡಿತರ ಕೇಂದ್ರದ ಬಳಿ ಜಮಾಯಿಸಿದ್ದರು.

ಗ್ರಾಮದ ಒಬ್ಬ ಮುಖ್ಯಸ್ಥರು ಬೆಳಿಗ್ಗೆಯೇ ಪಡಿತರ ಕೇಂದ್ರದ ಬಳಿ ಬರಬೇಕು. ತಮ್ಮ ಗ್ರಾಮದ ಪಡಿತರದಾರರು ಇವರು ಎಂದು ಗುರುತಿಸಬೇಕು. ಗ್ರಾಹಕರ ಜೊತೆ ಗ್ರಾಮದ ಮುಖ್ಯಸ್ಥರ ಹೆಬ್ಬೆಟ್ಟು ಗುರುತು ಸಹ ದಾಖಲಿಸಲಾಗುತ್ತದೆ. ಇದರಿಂದ ಸಮಸ್ಯೆ ತೀವ್ರವಾಗಿದೆ. ಕೂಲಿ ಕೆಲಸಕ್ಕೆ ತೆರಳುವ ಬಡವರು ಅಕ್ಕಿಗಾಗಿ ದಿನಗಟ್ಟಲೆ ಕಾದು ಕುಳಿತುಕೊಳ್ಳಬೇಕಾಗಿದೆ.

ADVERTISEMENT

ಜನರು ಪಡಿತರ ವಿತರಿಸುವವರ ಜತೆ ವಾಗ್ವಾದಕ್ಕಿಳಿಯುವ ದೃಶ್ಯ ಸಾಮಾನ್ಯವಾಗಿದೆ. ‘ಸರ್ಕಾರದ ಆದೇಶಗಳನ್ನು ನಾವು ಪಾಲಿಸಬೇಕು. ಪಡಿತರ ವಿತರಿಸುವ ಕೆಲಸವೇ ಸಾಕು’ ಎಂದು ಕೇಂದ್ರದ ಮಾಲೀಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.