ADVERTISEMENT

ವಿಜ್ಞಾನ ಪ್ರಯೋಗಾಲಯವಾದ ಪ್ರೌಢಶಾಲೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 9:19 IST
Last Updated 15 ಸೆಪ್ಟೆಂಬರ್ 2017, 9:19 IST

ಅರಸೀಕೆರೆ (ಪಾವಗಡ): ಕಡಿಮೆ ವೆಚ್ಚದಲಿ ತಯಾರಿಸಲಾದ ರಾಕೆಟ್, ತಾಜ್ಯದಿಂದ ವಿದ್ಯುತ್ ಉತ್ಪಾದನೆ, ವ್ಯಾಕ್ಯೂಮ್ ಕ್ಲೀನರ್. ತಾಲ್ಲೂಕಿನ ಅರಸೀಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ಮೇಳದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ತಯಾರಿಸಿದ ವಿಜ್ಞಾನ ಮಾದರಿಗಳು ನೋಡುಗರ ಗಮನ ಸೆಳೆದವು.

ಎರೆ ಹುಳುವಿನಿಂದ ಗೊಬ್ಬರ ತಯಾರಿಕಾ ಘಟಕದ ಮಾದರಿ, ಸಾವಯವ ಗೊಬ್ಬರ ತಯಾರಿಕಾ ವಿಧಾನ, ಪವನ ವಿದ್ಯುತ್ ತಯಾರಿಕಾ ಮಾದರಿಗಳು ವಿಶೇಷ ಎನಿಸಿದವು.
ತಾಲ್ಲೂಕಿನ ಎಸ್.ಆರ್.ಪಾಳ್ಯ ನಿಡಗಲ್ ಗ್ರಾಮಾಂತರ ಪ್ರೌಢಶಾಲೆ ವಿದ್ಯಾರ್ಥಿ ಸತೀಶ್ ತಯಾರಿಸಿದ ರಾಕೆಟ್ ಉಡಾವಣೆ ಯಂತ್ರದ ಮಾದರಿ ಪ್ರಥಮ ಸ್ಥಾನ, ಗುಮ್ಮಘಟ್ಟ ಜಲದುರ್ಗಾಂಬ ಶಾಲೆಯ ವಿದ್ಯಾರ್ಥಿ ಅನಿಲ್‌ಕುಮಾರ್ ತಯಾರಿಸಿದ ಡಿ.ಸಿ.ಮೋಟಾರ್ ಮಾದರಿಗೆ ದ್ವಿತೀಯ ಸ್ಥಾನ, ಶಿರಾ ತಾಲ್ಲೂಕು ಕುರುಬರಹಳ್ಳಿ ಎಸ್.ಟಿ.ಎಂ.ಎಚ್.ಎಸ್ ಶಾಲೆಯ ವಿದ್ಯಾರ್ಥಿ ರಾಕೇಶ್ ತಯಾರಿಸಿದ ಮಾನವನ ಜೀರ್ಣಾಂಗ ವ್ಯೂಹ ವ್ಯವಸ್ಥೆ ತೃತೀಯ ಸ್ಥಾನ ಪಡೆಯಿತು.

ಚಿತ್ರಕಲಾ ವಿಭಾಗದಲ್ಲಿ ಗುಮ್ಮಘಟ್ಟ ಜಲದುರ್ಗಾಂಬ ಶಾಲೆಯ ವಿದ್ಯಾರ್ಥಿ ಅಭಿಲಾಶ್‌ಗೆ ಪ್ರಥಮ, ಲಿಂಗದಹಳ್ಳಿ ಎಂ.ಜಿ.ಎಂ. ಶಾಲೆಯ ಜೀವನ್ ಕುಮಾರ್‌ಗೆ ದ್ವಿತೀಯ, ಗಂಗಸಾಗರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವೇಣುಗೋಪಾಲ ಅವರು ರಚಿಸಿದ ಚಿತ್ರಕ್ಕೆ ತೃತೀಯ ಬಹುಮಾನ ‍ಪಡೆಯಿತು.

ADVERTISEMENT

\ಉಪ ನಿರ್ದೇಶಕ ಕೆ.ಜಿ.ರಾಜೇಂದ್ರ ಮಾತನಾಡಿ, ‘ಶಿಕ್ಷಕರು ಮಕ್ಕಳಲ್ಲಿ ಶಿಸ್ತು ಬದ್ಧತೆ, ಮೌಲ್ಯಗಳನ್ನು ಕಲಿಸಬೇಕು. ಪ್ರಬುದ್ಧ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ರಾಷ್ಟ್ರ ಪ್ರೇಮ, ಸಂಸ್ಕೃತಿ ಸದ್ಗುಣಗಳನ್ನು ಬೋಧಿಸಬೇಕು. ವಿಜ್ಞಾನ ವಿಷಯದ ಶಿಕ್ಷಕರು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ, ವಿಚಾರಗಳ ಬಗ್ಗೆ ಚಿಂತನೆ ಮಾಡುವ ಶೈಲಿಯನ್ನು ರೂಪಿಸಬೇಕು’ ಎಂದರು.

 ಪ್ರಶ್ನೆ ಮಾಡುವ ಕೌಶಲ ರೂಪಿಸಿಕೊಳ್ಳಬೇಕು’ ಎಂದರು. ಡಯಟ್ ಪ್ರಾಂಶುಪಾಲೆ ಷಮೀಮ್ ತಾಜ್ ಮಾತನಾಡಿ, ‘ಶಿಕ್ಷಕರಿಗೆ ಸಮಾಜದಲ್ಲಿ ಗೌರವ ಸ್ಥಾನವಿದೆ, ಹಾಗಾಗಿ ಸದಾ ವೈಜ್ಞಾನಿಕ ಚಿಂತನೆ ವಸ್ತುನಿಷ್ಠತೆಯತ್ತ ಹೆಚ್ಚು ಒತ್ತು ನೀಡಬೇಕು’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕುಮಾರಸ್ವಾಮಿ, ವಿಜ್ಞಾನ ಶಿಕ್ಷಕ ರೇಣುಕಾರಾಧ್ಯ, ಮುಖ್ಯ ಶಿಕ್ಷಕ ಜಿ.ತಿಮ್ಮಪ್ಪ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟರಾಮು, ತಾಲ್ಲೂಕು ಘಟಕದ ಅಧ್ಯಕ್ಷ ರಾಮಚಂದ್ರಪ್ಪ, ಉಪಾಧ್ಯಕ್ಷ ಯತಿಕುಮಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜು, ಬಿಆರ್‌ಸಿ ಪವನಕುಮಾರರೆಡ್ಡಿ ಮಾತನಾಡಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ನೋಡಲ್ ಅಧಿಕಾರಿ ಚೇತನ, ಅಂತ್ಯೋದಯ ಪ್ರಾಂಶುಪಾಲ ಮುನಿಸ್ವಾಮಿ, ಬಿಆರ್‌ಪಿ ಉಷಾರಾಣಿ, ಶಿಕ್ಷಕರಾದ ಎನ್.ಮಂಜುನಾಥ್, ಶ್ರೀನಿವಾಸ್, ಈರಣ್ಣ, ಹನುಮೇಶ್, ರಷ್ಮಿ, ಆರ್.ವಿಮಲಾ, ಮೋಹನ್, ರತ್ನಮ್ಮ, ರವಿ, ಅಭಿಷೇಕ್, ಶಿವಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.