ADVERTISEMENT

ಅಧಿಸೂಚನೆ ರದ್ದುಪಡಿಸದಿದ್ದರೆ ಪ್ರತಿಭಟನೆ

ಎಂಆರ್‌ಪಿಎಲ್‌ 4ನೇ ಹಂತದ ವಿಸ್ತರಣೆ– ಸಂರಕ್ಷಣಾ ಸಮಿತಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 8:33 IST
Last Updated 17 ಜನವರಿ 2017, 8:33 IST
ಅಧಿಸೂಚನೆ ರದ್ದುಪಡಿಸದಿದ್ದರೆ ಪ್ರತಿಭಟನೆ
ಅಧಿಸೂಚನೆ ರದ್ದುಪಡಿಸದಿದ್ದರೆ ಪ್ರತಿಭಟನೆ   

ಮಂಗಳೂರು: ರಾಜ್ಯ ಸರ್ಕಾರ ಎಂಆರ್‌ಪಿಎಲ್‌ ಕಂಪೆನಿಯ 4ನೇ ಹಂತದ ವಿಸ್ತರಣೆಗಾಗಿ ಪೆರ್ಮುದೆ, ಕುತ್ತೆತ್ತೂರು, ತೆಂಕ ಎಕ್ಕಾರು ಮುಂತಾದ ಗ್ರಾಮಗಳಲ್ಲಿ 1011.7719 ಎಕರೆ ಭೂಮಿಯನ್ನು ಭೂಮಾಲೀಕರ, ಗ್ರಾಮಸ್ಥರ ವಿರೋಧದ ನಡುವೆಯೂ ಬಲಾತ್ಕಾರದ ಸ್ವಾಧೀನಕ್ಕೆ ಮುಂದಾಗಿದೆ ಎಂದು ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಮಧುಕರ್ ಅಮೀನ್ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದಿಂದ LARR Act 2013 ಮತ್ತು 2015ರ ಕಾನೂನು ಅಂಗೀಕ ರಿಸಲ್ಪಟ್ಟ ನಂತರ, ಸರ್ಕಾರ ಅಥವಾ ಕೆಐಎಡಿಬಿಯು ಯಾವುದೇ ಭೂ ಸ್ವಾಧೀ ನವನ್ನು ಸದ್ರಿ ಕಾಯಿದೆ ಕಾನೂನುಗಳನ್ನು ಅನುಸರಿಸಿ ಮಾಡಬೇಕಲ್ಲದೆ, ಇದಕ್ಕೆ ಭಿನ್ನವಾಗಿ ಮಾಡುವಂತಿಲ್ಲ.

ಆದರೆ, ಸರ್ಕಾರ ಕಳೆದ ಡಿಸೆಂಬರ್ 29ರಂದು ಹೊರಡಿಸಿರುವ ಪ್ರಾಥಮಿಕ ಅಧಿಸೂ ಚನೆ, ಪ್ರಸ್ತುತ ಚಾಲ್ತಿಯಲ್ಲಿರಬೇಕಾದ LARR Act 2013 ಮತ್ತು 2015ರ ಕಾನೂನಿಗಿಂತ ಭಿನ್ನವಾಗಿರುವ 1966ರ ಕೆಐಎಡಿಬಿ ಕಾಯಿದೆ ಕಲಂ28(1)ನಂತೆ ಆಗಿದ್ದು, ಆ ಮೂಲಕ ಭೂಮಾ ಲೀಕರನ್ನು ವಂಚಿಸಲು ಕೆಐಎಡಿಬಿಯು ಎಂಆರ್‌ಪಿಎಲ್ ಕಂಪೆನಿಯೊಂದಿಗೆ ಶಾಮೀಲಾಗಿರುವುದು ಬಹಳ ಸ್ಪಷ್ಟ ಎಂದು ಹೇಳಿದರು.

ಎಂಆರ್‌ಪಿಎಲ್/ಎಂಎಸ್‌ಇಜೆಡ್ ಕಂಪೆನಿ ವಿಸ್ತರಣೆ ಸುತ್ತಲಿನ ಜನ ಜೀವನದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ಆದರೆ ಕೆಲ ಪೆಟ್ರೋಲಿಯಂ ಘಟಕಗಳು ನಿರಂತರ ಪರಿಸರ ಮಾಲಿನ್ಯದ ಮೂಲಕ ಈ ಭಾಗವನ್ನು ಅತ್ಯಂತ ಪರಿಸರ ದೂಷಿತ ಪ್ರದೇಶವನ್ನಾಗಿ ಮಾಡಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಹಾಗೂ ಅದರ ಪ್ರತಿನಿಧಿಗಳು ಭೂಸ್ವಾಧೀನ ಅಧಿಸೂಚ ನೆಯನ್ನು ತಕ್ಷಣ ಹಿಂತೆಗೆಯಬೇಕು. ಇಲ್ಲದಿದ್ದಲ್ಲಿ ಈ ಜನವಿರೋಧಿ ಧೋರಣೆ ವಿರುದ್ಧ, ಲಭ್ಯವಿರುವ ಎಲ್ಲ ಪ್ರಜಾತಾಂತ್ರಿಕ ವಿಧಾನಗಳ ಮೂಲಕ, ಅಧಿಸೂಚನೆ ರದ್ದುಪಡಿಸಿ ಭೂಮಿಯನ್ನು ನಮಗೆ ಹಿಂದಕ್ಕೆ ನೀಡುವವರೆಗೂ ತೀವ್ರತರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ಉಪಾಧ್ಯಕ್ಷೆ ಹೇಮಲತಾ ಭಟ್ ಮಾತನಾಡಿ, ಎಂಆರ್‌ಪಿಎಲ್‌ನ 3ನೇ ಹಂತದ ಯೋಜನೆಗೆ 251 ಎಕರೆ ಭೂಮಿ ಸಾಕಾಗಿದೆ. 4ನೇ ಹಂತದ ಯೋಜನೆಗೆ ಎಸ್‌ಇಜೆಡ್ ಒಳಗೆ ಬಾಕಿ ಉಳಿದಿರುವ 350 ಎಕರೆಗೂ ಮಿಕ್ಕಿ ಭೂಮಿ ಇರುವಾಗ, ಬಡ ರೈತರ ಭೂಮಿ ಕಿತ್ತುಕೊಂಡು ಅವರ ಬದುಕಿಗೆ ಕೊಳ್ಳಿ ಇಡುವ ಕೆಲಸ ಯಾಕೆ ಎಂದು  ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಲೋರೆನ್ಸ್ ಡಿಕುನ್ನ, ವಿದ್ಯಾ ದಿನಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.