ADVERTISEMENT

ಇಲ್ಲಿ ಓದಿದವರಿಗೆ ತುಂಬುತ್ತಿದೆ ಆತ್ಮವಿಶ್ವಾಸ

ಗಮನ ಸೆಳೆದಿರುವ ಕುದ್ಮುಲ್‌ ರಂಗರಾವ್‌ ವಿದ್ಯಾರ್ಥಿನಿ ನಿಲಯ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 9:49 IST
Last Updated 12 ಜನವರಿ 2017, 9:49 IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕ ಅವಕಾಶಗಳು ಹೆಚ್ಚು ಇರುವು ದರಿಂದ ರಾಜ್ಯದ ವಿವಿಧೆಡೆಯ ವಿದ್ಯಾ ರ್ಥಿಗಳು ಶಿಕ್ಷಣಕ್ಕಾಗಿ ಇಲ್ಲಿಗೆ ಬರುತ್ತಾರೆ. ವೇಗವಾಗಿ ಸಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಮೂಲಕ ಹೊರಜಿಲ್ಲೆಯ ಕಾರ್ಮಿಕರಿಗೆ ಉದ್ಯೋಗ ಅವಕಾಶ ಲಭ್ಯ ವಾದರೆ, ಅವರ ಮಕ್ಕಳು ಹಿಂದುಳಿದ ವರ್ಗಗಳ ಅಥವಾ ಪರಿಶಿಷ್ಟ ಜಾತಿ, ಪಂಗ ಡದ ವಸತಿ ನಿಲಯಗಳಲ್ಲಿದ್ದುಕೊಂಡು ಶಿಕ್ಷಣ ಮುಂದುವರಿಸುತ್ತಾರೆ. 
 
ನಗರದ ಹೃದಯ ಭಾಗದಲ್ಲಿರುವ ಕುದ್ಮುಲ್‌ ರಂಗರಾವ್‌ ವಿದ್ಯಾರ್ಥಿನಿ ನಿಲ ಯಕ್ಕೆ ಪ್ರತಿವರ್ಷ ಅರ್ಜಿಗಳ ಮಹಾಪೂ ರವೇ ಬರುತ್ತದೆ. ಸುಸಜ್ಜಿತವಾದ ಮೂರು ಮಹಡಿಗಳ ಕಟ್ಟಡ 36 ವರ್ಷ ಹಳೆಯದಾದರೂ ವಿಶಾಲವಾಗಿರುವು ದರಿಂದ ವಿದ್ಯಾರ್ಥಿನಿಯರಿಗೆ ಎಲ್ಲ ಅನುಕೂಲಗಳನ್ನೂ ಕಲ್ಪಿಸುತ್ತದೆ. ‘ಆರನೇ ತರಗತಿಯಿಂದಲೂ ಇಲ್ಲಿಯೇ ಓದುತ್ತಿದ್ದೇನೆ. ನೀರು, ವಿದ್ಯುತ್‌ ಅಥವಾ ಆಹಾರದ ಸಮಸ್ಯೆ ಎದುರಾಗಿಲ್ಲ’ ಎಂದು ಕಲಬುರ್ಗಿಯ ರೇಷ್ಮಾ ಹೇಳುತ್ತಾರೆ. ಈಗ ರೇಷ್ಮಾ ದ್ವಿತೀಯ ಪಿಯುಸಿ ಓದುತ್ತಿದ್ದು, ವಿದ್ಯಾರ್ಥಿನಿ ನಿಲಯದಲ್ಲಿ ಮನೆಮಗಳಂ ತಾಗಿದ್ದಾಳೆ. ಪದವಿಯನ್ನೂ ಇದೇ ವಿದ್ಯಾ ರ್ಥಿನಿ ನಿಲಯದಲ್ಲಿ ಮುಂದುವರಿಸುವ ಆಸೆಯಿದೆ ಎನ್ನುವ ಅವಳು ಉತ್ತಮ ಅಂಕ ಗಳಿಸುವ ಜಾಣೆ. 
 
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿ ರುವುದರಿಂದ ಉತ್ತರ ಕರ್ನಾಟಕದಿಂದ ಹಲವರು ದುಡಿಮೆಗಾಗಿ ದಕ್ಷಿಣ ಕನ್ನಡಕ್ಕೆ ವಲಸೆ ಬಂದಿದ್ದು, ಕಾಮಗಾರಿಗಳು ನಡೆ ಯುವ ಸ್ಥಳದ ಬಳಿಯೇ ಸಿಗುವ ಮನೆ ಅಥವಾ ಶೆಡ್‌ಗಳಲ್ಲಿ ಹೆಚ್ಚಿನವರು ದುಡಿ ಯುತ್ತಾರೆ. ಮಕ್ಕಳನ್ನು ಇಲ್ಲಿನ ವಿದ್ಯಾರ್ಥಿ ವಸತಿನಿಲಯಗಳಿಗೆ ಸೇರಿಸಿ ಅವರ ವಿದ್ಯಾ ಭ್ಯಾಸಕ್ಕೆ ತೊಂದರೆಯಾಗದಂತೆ ಜೋ ಪಾನ ಮಾಡುತ್ತಾರೆ.  ಕುದ್ಮುಲ್‌ ರಂಗ ರಾವ್‌ ವಿದ್ಯಾರ್ಥಿನಿ ನಿಲಯದಲ್ಲಿ ಚಿಕ್ಕ ಮಗಳೂರು, ಹಾಸನ, ಕಲಬುರ್ಗಿ, ವಿಜ ಯಪುರ, ಶಿವಮೊಗ್ಗ, ಬೆಂಗಳೂರು ಕಡೆ ಯ ವಿದ್ಯಾರ್ಥಿನಿಯರು ಕಲಿಯುತ್ತಿದ್ದಾರೆ. 
 
ಈ ವಿದ್ಯಾರ್ಥಿನಿ ನಿಲಯದ ಕಟ್ಟಡ ದಲ್ಲಿ  ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ನಿಲಯಗಳು ಪ್ರತ್ಯೇಕವಾಗಿವೆ.  ಪ್ರತಿದಿನ ಸಂಜೆ ಎಸ್ಸೆಸ್ಸೆಲ್ಸಿ ವಿದ್ಯಾ ರ್ಥಿನಿಯರಿಗೆ ಹೆಚ್ಚುವರಿ ಪಾಠ ಮಾಡಲು ಶಿಕ್ಷಕರು ಬರುತ್ತಾರೆ. ಕಂಪ್ಯೂ ಟರ್‌ ಕಲಿಕೆ ಅಭ್ಯಾಸಕ್ಕೆ ಪೂರಕವಾಗಿ ವಿಶಾಲವಾದ ಕಂಪ್ಯೂಟರ್‌ ಲ್ಯಾಬ್‌ ಇದೆ. ಜರ್ಮನ್‌ ಟೆಕ್ನಾಲಜಿ ಸಂಸ್ಥೆಯು ತರಗ ತಿಗಳನ್ನು ನಡೆಸಿ ವಿದ್ಯಾರ್ಥಿನಿಯರಿಗೆ ವಿವಿಧ ಕೋರ್ಸುಗಳನ್ನು ಕಲಿಸಿದೆ. ಟ್ಯಾಲಿ ಸರ್ಟಿಫಿಕೇಟ್‌ನೊಂದಿಗೇ ಹೆಚ್ಚಿನ ವಿದ್ಯಾರ್ಥಿನಿಯರು ಪದವಿ ಮುಗಿಸಿದ್ದಾರೆ ಎನ್ನುತ್ತಾರೆ ವಾರ್ಡನ್‌ ಅಂಬಿಕಾ.  ಭರತ ನಾಟ್ಯ, ಯಕ್ಷಗಾನ ಮತ್ತ ಸುಗಮ ಸಂಗೀತ ಕಲಿಕೆಯ ಅವಕಾಶವೂ ಇದೆ. ಸಮವಸ್ತ್ರ, ಸೋಪ್‌ ಕಿಟ್‌, ನ್ಯಾಪ್‌ಕಿನ್‌ ಗಳನ್ನೂ ಪ್ರತಿ ತಿಂಗಳೂ ವಿತರಿಸಲಾ ಗುತ್ತದೆ. ಸುರಕ್ಷೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 
 
ಕಟ್ಟಡದ ಮೇಲ್ಛಾವಣಿ ಸೋರು ತ್ತಿದ್ದು, ದುರಸ್ತಿಗಾಗಿ ತಾಲ್ಲೂಕು ಪಂಚಾ ಯಿತಿಯಿಂದ ₹ 2.5 ಲಕ್ಷ ಅನುದಾನ ತೆಗೆದಿರಿಸಲಾಗಿದೆ. ನಗರದಲ್ಲಿರುವ ಮತ್ತೊಂದು ವೃತ್ತಿಪರ ವಿದ್ಯಾರ್ಥಿನಿಯರ ನಿಲಯ ಉದ್ಘಾಟನೆಯಾದ ಬಳಿಕ ವಿದ್ಯಾ ರ್ಥಿನಿಯರನ್ನು ಅಲ್ಲಿಗೆ ಸ್ಥಳಾಂತರಿಸಿ, ದುರಸ್ತಿ ಕಾರ್ಯವನ್ನು ಸದ್ಯವೇ ಕೈಗೊಳ್ಳುವ ನಿರೀಕ್ಷೆ ಇದೆ. 
 
ಮೆಟ್ರಿಕ್‌ ಪೂರ್ವ ನಿಲಯದಲ್ಲಿ 125 ಮಂದಿ ಮಕ್ಕಳು ಮತ್ತು ಮೆಟ್ರಿಕ್‌ ನಂತ ರದ ನಿಲಯದಲ್ಲಿ 160 ವಿದ್ಯಾರ್ಥಿ ನಿಯರು ಓದುತ್ತಿದ್ದಾರೆ.
 
***
ಜಿಲ್ಲೆಯಲ್ಲಿರುವ ವಿದ್ಯಾರ್ಥಿನಿ ನಿಲಯಗಳ ಸಂಖ್ಯೆ
ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆಯಡಿ  
ಮೆಟ್ರಿಕ್‌ ಪೂರ್ವ : 2 
ಮೆಟ್ರಿಕ್‌ ನಂತರ:  2 
ಆಶ್ರಮ ಶಾಲೆ :  12
ಬಿಸಿಎಂ ಹಾಸ್ಟೆಲ್‌ 
ಮೆಟ್ರಿಕ್‌ ಪೂರ್ವ : 11  
ಮೆಟ್ರಿಕ್‌ ನಂತರ : 32   
ಸಮಾಜ ಕಲ್ಯಾಣ ಇಲಾಖೆ: 
ಮೆಟ್ರಿಕ್‌ ಪೂರ್ವ: 8 
ಮೆಟ್ರಿಕ್‌ ನಂತರ: 4
ಆಶ್ರಮ ಶಾಲೆ:  1
 
***
ಎಲ್ಲ ಅರ್ಜಿಯನ್ನೂ ಸ್ವೀಕರಿಸಬೇಕು ಎಂದು ಸರ್ಕಾರದ ಸೂಚನೆ ಇರುವುದರಿಂದ, ಅವರ ಶಿಕ್ಷಣಕ್ಕೆ ಪೂರಕವಾಗಿ ಒಂದಲ್ಲ ಒಂದು ವಸತಿ ನಿಲಯದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ.
-ಡಾ.ಸಂತೋಷ್‌ ಕುಮಾರ್‌
ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.