ADVERTISEMENT

ಉಡುಪಿ ವಕೀಲರ ವೃತ್ತಿಪರತೆಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 27 ಮೇ 2017, 6:47 IST
Last Updated 27 ಮೇ 2017, 6:47 IST
ಉಡುಪಿ ಜಿಲ್ಲಾ ವಕೀಲರ ಸಂಘ ಶುಕ್ರವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಕರ್ಣಂ ಅವರನ್ನು ಸನ್ಮಾನಿಸಲಾಯಿತು. 	ಪ್ರಜಾವಾಣಿ ಚಿತ್ರ
ಉಡುಪಿ ಜಿಲ್ಲಾ ವಕೀಲರ ಸಂಘ ಶುಕ್ರವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಕರ್ಣಂ ಅವರನ್ನು ಸನ್ಮಾನಿಸಲಾಯಿತು. ಪ್ರಜಾವಾಣಿ ಚಿತ್ರ   

ಉಡುಪಿ: ವೃತ್ತಿಪರತೆ ಮತ್ತು ಶಿಸ್ತಿನಿಂದ ಕೆಲಸ ಮಾಡುವ ವಕೀಲರು ಇಲ್ಲಿದ್ದಾರೆ. ಇಂತಹ ವಕೀಲರೊಂದಿಗೆ ನಾಲ್ಕು ವರ್ಷ ಗಳು ಕೆಲಸ ಮಾಡಿದ್ದು ಸಂತಸ ತಂದಿದೆ ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಕರ್ಣಂ ಹೇಳಿದರು.

ಜಿಲ್ಲಾ ವಕೀಲರ ಸಂಘ ಶುಕ್ರವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭ ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತ ನಾಡಿದರು. ಯಾವುದೇ ವ್ಯಕ್ತಿ ಅಚ್ಚು ಕಟ್ಟಾಗಿ ಕೆಲಸ ಮಾಡಬೇಕೆಂದರೆ ಸ್ಫೂರ್ತಿ ಮುಖ್ಯವಾಗುತ್ತದೆ. ಹಿರಿಯ ಮತ್ತು ಕಿರಿಯ ವಕೀಲರು ಸಹಕಾರ ನೀಡಿದ್ದರಿಂದ ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.

‘ಉಡುಪಿಯಲ್ಲಿ ಕೆಲಸ ಮಾಡಿ ಒಳ್ಳೆಯ ಅನುಭವ ಪಡೆದುಕೊಂಡಿ ದ್ದೇನೆ. ಮುಖ್ಯವಾಗಿ ಇಲ್ಲಿನ ಹಿರಿಯ ವಕೀಲರಿಂದ ವಿನಯವನ್ನು ಕಲಿತು ಕೊಂಡಿದ್ದೇನೆ. ಮುಂದಿನ ವೃತ್ತಿ ಜೀವನ ದಲ್ಲಿ ಸಹ ಉತ್ತಮವಾಗಿ ಕೆಲಸ ಮಾಡುವ ಆತ್ಮವಿಶ್ವಾಸ ಮೂಡಿದೆ’ ಎಂದು ವರ್ಗಾವಣೆಯಾಗಿರುವ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಂಜುನಾಥ್ ಹೇಳಿದರು.

ADVERTISEMENT

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ವೆಂಕಟೇಶ ನಾಯ್ಕ್ ಮಾತನಾಡಿ, ನ್ಯಾಯಾಧೀಶರಿಗೆ ವರ್ಗಾ ವಣೆ ಎಂಬುದು ಸಹಜ. ಆದರೆ ಕರ್ತ ವ್ಯದ ಅವಧಿಯಲ್ಲಿ ಹೇಗೆ ತಮ್ಮ ಜವಾ ಬ್ದಾರಿ ನಿಭಾಯಿಸಿ ನ್ಯಾಯದಾನ ಮಾಡಿ ದ್ದಾರೆ ಎಂಬುದು ಮುಖ್ಯವಾಗುತ್ತದೆ. ಈಗ ವರ್ಗಾವಣೆಯಾಗಿರುವ ನ್ಯಾಯಾ ಧೀಶರು ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿರಿಯ ವಕೀಲ ಎನ್‌.ಕೆ. ಆಚಾರ್ಯ ಮಾತನಾಡಿ, ವಕೀಲರು ಮತ್ತು ನ್ಯಾಯಾ ಧೀಶರು ಯಾವಾಗಲೂ ವಿದ್ಯಾರ್ಥಿಗಳಾ ಗಿರಬೇಕು. ತಾಳ್ಮೆಯಿಂದ ಹೊಸ ವಿಷಯ ಗಳನ್ನು ಕಲಿತುಕೊಳ್ಳಲು ಪ್ರಯತ್ನಿಸ ಬೇಕು. ವಕೀಲರು ಮತ್ತು ನ್ಯಾಯಾ ಧೀಶರ ಮಧ್ಯೆ ಉತ್ತಮ ಸಂಬಂಧ ಇರಬೇಕು ಮತ್ತು ನ್ಯಾಯಾಲಯದಲ್ಲಿ ಸಹ ಕಲಿಕೆಗೆ ಉತ್ತಮ ವಾತಾವರಣ ಇರಬೇಕು ಎಂದು ಹೇಳಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವರಾಮ್‌, ಕಿರಿಯ ಸಿವಿಲ್ ನ್ಯಾಯಾಧೀಶ ರಾಮ್‌ ಪ್ರಶಾಂತ್ ಇದ್ದರು.

* * 

ನ್ಯಾಯಾಧೀಶರು ತಾಳ್ಮೆ ವಹಿಸಿ ಪ್ರಕರಣವನ್ನು ಸರಿಯಾದ ರೀತಿಯಲ್ಲಿ ಪರಾಮರ್ಶಿಸಿ ತೀರ್ಪು ನೀಡಬೇಕಾಗುತ್ತದೆ. ಆದ್ದರಿಂದ ಅದೊಂದು ಜವಾಬ್ದಾರಿಯುತ ಸ್ಥಾನ. ಎಚ್‌. ರತ್ನಾಕರ ಶೆಟ್ಟಿ
ವಕೀಲರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.