ADVERTISEMENT

ಎಟಿಎಂ ಕೇಂದ್ರದಲ್ಲಿ ಸಿಕ್ಕಿದ ಹಣ ವಾರೀಸುದಾರರಿಗೆ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 10:52 IST
Last Updated 30 ನವೆಂಬರ್ 2017, 10:52 IST
ಕಾಪುವಿನ ಎಟಿಎಂನಲ್ಲಿ ಹಣ ಕಳೆದುಕೊಂಡಿದ್ದ ತಾರನಾಥ್ ವಿ.ಕೋಟ್ಯಾನ್ ಅವರಿಗೆ ಕಾಪು ಪಿಎಸ್ಐ ನಿತ್ಯಾನಂದ ಗೌಡ ಹಣ ನೀಡಿದರು.
ಕಾಪುವಿನ ಎಟಿಎಂನಲ್ಲಿ ಹಣ ಕಳೆದುಕೊಂಡಿದ್ದ ತಾರನಾಥ್ ವಿ.ಕೋಟ್ಯಾನ್ ಅವರಿಗೆ ಕಾಪು ಪಿಎಸ್ಐ ನಿತ್ಯಾನಂದ ಗೌಡ ಹಣ ನೀಡಿದರು.   

ಕಾಪು (ಪಡುಬಿದ್ರಿ): ಎಟಿಎಂನಲ್ಲಿ ಹಣ ನಗದೀಕರಿಸಲು ಬಂದಿದ್ದ ವ್ಯಕ್ತಿಯೊಬ್ಬರು ಕಳೆದುಕೊಂಡ ಹಣವನ್ನು ಕಾಪು ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಅವರ ಪುತ್ರ ಮಾನವೀಯತೆ ಮೆರೆದು ಠಾಣೆಯ ಎಸ್ಐ ಅವರಿಗೆ ನೀಡಿದ್ದಾರೆ.

ತಾರನಾಥ್ ವಿ.ಕೋಟ್ಯಾನ್ ಅವರು ಶನಿವಾರ ಸಿಂಡಿಕೇಟ್ ಬ್ಯಾಂಕ್‌ನ ಕಾಪು ಎಟಿಎಂ ಕೇಂದ್ರದಿಂದ ₹ 10 ಸಾವಿರ ನಗದೀಕರಣಕ್ಕೆ ಯತ್ನಿಸಿದ್ದರು. ಆದರೆ, ಹಣ ಕೈಗೆ ಸಿಗದಿದ್ದಾಗ ಅಲ್ಲಿಂದ ಹೊರಟು ಎಸ್‌ಬಿಎಂನ ಎಟಿಎಂ ಕೇಂದ್ರದಿಂದ ₹ 10 ಸಾವಿರ ನಗದೀಕರಿಸಿ ಮನೆಗೆ ತೆರಳಿದ್ದರು. ಮೊದಲು ಡ್ರಾ ಆಗಿರುವ ಬಗ್ಗೆ ಅವರಿಗೆ ತಿಳಿದಿರಲಿಲ್ಲ.

ಇದೇ ಎಟಿಎಂಗೆ ಹಣ ನಗದೀಕರಿಸಲು ಕಾಪು ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಲಕ್ಷ್ಮಣ್ ಅವರ ಪುತ್ರ ಕೆ.ಮನೀಷ್ ಕುಮಾರ್ ತೆರಳಿದ್ದರು. ಈ ವೇಳೆ ₹ 10,000 ಅವರಿಗೆ ಸಿಕ್ಕಿತ್ತು. ಅದನ್ನು ಮನೀಷ್ ಕಾಪು ಪಿಎಸ್ಐ ನಿತ್ಯಾನಂದ ಗೌಡ ಅವರ ಬಳಿ ತಂದು ಕೊಟ್ಟಿದ್ದರು. ಹಣ ಕಳೆದು ಕೊಂಡವರ ವಿವರವನ್ನು ಬ್ಯಾಂಕಿಗೆ ಹೋಗಿ ಪಡೆದುಕೊಂಡ ಎಸ್‌ಐ ಅವರು, ತಾರನಾಥ್ ಕೋಟ್ಯಾನ್‌ ಅವರಿಗೆ ಸೋಮವಾರ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.