ADVERTISEMENT

ಕನ್ನಡ ನಾಟಕ ರಚನಾ ಸ್ಪರ್ಧೆ ‘ವಿಶಾಂಕೇ’ ನಾಟಕ ಪ್ರಥಮ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2016, 6:44 IST
Last Updated 3 ಡಿಸೆಂಬರ್ 2016, 6:44 IST

ಉಡುಪಿ: ರಂಗಭೂಮಿ ಉಡುಪಿ ಸಂ ಸ್ಥೆಯ ಸುವರ್ಣ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ‘ಡಾ. ಎಚ್‌. ಶಾಂತಾ ರಾಮ್‌ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆ–2015’ರಲ್ಲಿ ಬೆಂಗಳೂರಿನ ಮೌನೇಶ್‌ ಬಡಿಗೇರ್‌ ಅವರ ‘ವಿಶಾಂಕೇ’ (ವಿಧ್ವಂಸಕ ಶಾಂತಿ ಕೇಂದ್ರ) ನಾಟಕ ಪ್ರಥಮ ಸ್ಥಾನ ಗಳಿಸಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಪಿ. ವಾಸುದೇವ ರಾವ್‌ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನ ಡಾ. ನಟರಾಜ ತಲ ಘಟ್ಟಪುರ ಅವರ ‘ಸಾವಿರದ ರಾತ್ರಿ’ ಹಾಗೂ ಮಂಗಳೂರಿನ ಶಶಿರಾಜ್‌ರಾವ್‌ ಕಾವೂರ್‌ ಅವರ ಏಪ್ರಿಲ್‌18’ ನಾಟಕ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿದೆ.

ನಾಟಕ ಸ್ಪರ್ಧೆಗೆ ಬೆಂಗಳೂರು ಹಾಗೂ ಉಡುಪಿ ಜಿಲ್ಲೆಯಿಂದ ತಲಾ 8, ದಕ್ಷಿಣ ಕನ್ನಡ ಜಿಲ್ಲೆಯಿಂದ 6 ಹಾಗೂ ವಿಜಯಪುರ, ಬಾಗಲಕೋಟೆ, ಕಾಸರ ಗೋಡು, ಮೈಸೂರು, ಶಿವಮೊಗ್ಗ ಜಿಲ್ಲೆ ಯಿಂದ ತಲಾ ಒಂದು ನಾಟಕ ಬಂದಿದೆ. ಎರಡು ಹಂತದಲ್ಲಿ ಆಯ್ಕೆ ಪ್ರಕ್ರಿಯೆ ಯನ್ನು ಪೂರೈಸಿದ ಬಳಿಕ ಈ ಮೂರು ಶ್ರೇಷ್ಠ ನಾಟಕಕ್ಕೆ ಮೊದಲ ಮೂರು ಪ್ರಶಸ್ತಿ ಯನ್ನು ನೀಡಲಾಗಿದೆ. ಪ್ರಥಮ, ದ್ವಿತೀ ಯ ಮತ್ತು ತೃತೀಯ ಬಹುಮಾನವು ಕ್ರಮವಾಗಿ ₹30 ಸಾವಿರ, ₹20 ಸಾವಿರ, ₹10 ಸಾವಿರ ನಗದು ಪುರಸ್ಕಾರದೊಂ ದಿಗೆ ಶ್ವಾಶತ ಫಲಕವನ್ನು ಒಳಗೊಂಡಿದೆ ಎಂದು ಮಾಹಿತಿ ನೀಡಿದರು.

ಡಾ. ಬಸವರಾಜ ಸಬರ ಅವರ ‘ಮತ್ತೊಬ್ಬ ರಾಧೆ’, ಪ್ರಸನ್ನ ಕುಮಾರ್‌ ಅವರ ‘ಕಾಲಚಕ್ರ’, ವಸುಮತಿ ಉಡುಪ ಅವರ ‘ಕುರುಡು ಕಾಂಚಣ’ ಮತ್ತು ಪ್ರೊ. ಜಿ.ಎಚ್‌. ಹನ್ನೆರಡು ಮಠ ಅವರ ‘ಬಹು ರೂಪಿ ಚೌಡಯ್ಯ’ ನಾಟಕಗಳು ತಲಾ ₹3 ಸಾವಿರ ನಗದು ಪುರಸ್ಕಾರದೊಂದಿಗೆ ಸಮಾಧಾನಕರ ಬಹುಮಾನ ಪಡೆದಿದೆ.  ಆರಂಭಿಕ ಹಂತದ ನಿರ್ಣಾಯಕರಾಗಿ ಡಾ.ಮಾಧವಿ ಎಸ್‌. ಭಂಡಾರಿ ಮತ್ತು ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಹಾಗೂ ಅಂತಿಮ ಹಂತದ ಮೌಲ್ಯಮಾಪಕರಾಗಿ ಸಾಹಿತಿ ವೈದೇಹಿ, ಕವಿ ಡಾ.ಎಚ್‌.ಎಸ್‌. ವೆಂಕಟೇಶಮೂರ್ತಿ ಹಾಗೂ ನಾಟಕ ಕಾರ ಸಿ. ಬಸವಲಿಂಗಯ್ಯ ಸಹಕರಿಸಿದ್ದರು ಎಂದು ತಿಳಿಸಿದರು.

ಇದೇ 10ರಂದು ಸಂಜೆ 5.30ಕ್ಕೆ ಎಂ ಜಿಎಂ ಕಾಲೇಜಿನ ಮುದ್ದಣ ಮಂಟಪ ದಲ್ಲಿ ನಡೆಯುವ ಸುವರ್ಣ ಮಹೋತ್ಸ ವದ ಸಮಾರೋಪ ಸಮಾರಂಭದಲ್ಲಿ ಮಣಿಪಾಲ ವಿಶ್ವವಿದ್ಯಾ ಲಯದ ಕುಲಪತಿ ಡಾ. ಎಚ್‌.ಎಸ್‌. ಬಲ್ಲಾಳ್‌ ಮತ್ತು ವಿದ್ಯಾ ವಾಚಸ್ಪತಿ ಬನ್ನಂಜೆ ಗೋವಿಂದಾ ಚಾರ್ಯ ಅವರು ವಿಜೇತರಿಗೆ ಬಹು ಮಾನ ವಿತರಿಸುವರು ಎಂದರು.

ಸಂಸ್ಥೆಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಜಂಟಿ ಕಾರ್ಯದರ್ಶಿ ಗಳಾದ ಎಚ್‌.ಪಿ. ರವಿರಾಜ್‌, ಎಂ. ನಂದಕುಮಾರ್‌, ಸದಸ್ಯ ಡಾ. ಅರವಿಂದ ನಾಯಕ್‌ ಅಮ್ಮುಂಜೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.