ADVERTISEMENT

‘ಕಾಪು ಕ್ಷೇತ್ರಕ್ಕೆ ಗರಿಷ್ಠ ಮೂಲಸೌಕರ್ಯ’

​ಪ್ರಜಾವಾಣಿ ವಾರ್ತೆ
Published 24 ಮೇ 2017, 8:30 IST
Last Updated 24 ಮೇ 2017, 8:30 IST

ಉಡುಪಿ: ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅನುದಾನ ಕಾಪು ಕ್ಷೇತ್ರಕ್ಕೆ ಲಭಿಸಿದೆ. ಒಟ್ಟು ₹47 ಕೋಟಿ ಮಂಜೂರಾಗಿದ್ದು ಎಲ್ಲ ಕಾಮಗಾರಿಗಳು ಆರಂಭವಾಗಲಿವೆ ಎಂದು ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು.

ಗಾಂಧಿ ಪಥ ಗ್ರಾಮ ಪಥ ಯೋಜನೆಯಲ್ಲಿ (ನಮ್ಮ ಗ್ರಾಮ ನಮ್ಮ ರಸ್ತೆ 5ನೇ ಹಂತದ ಯೋಜನೆ) ಮಂಜೂರಾದ ಪಿತ್ರೋಡಿ– ಜಾರುಕುದ್ರು ಸೇತುವೆಗೆ ಶಿಲಾನ್ಯಾಸ ಮಾಡಿ ಅವರು ಮಾತನಾಡಿದರು. ಶಾಸಕನಾಗಿ ಆಯ್ಕೆಯಾದ ಆರಂಭದಲ್ಲಿ ಸೇತುವೆ ನಿರ್ಮಾಣ ಮಾಡುವ ಭರವಸೆ ನೀಡಿದ್ದೆ. ಈಗ ಅದು ಈಡೇರುತ್ತಿದ್ದು, ಕೊಟ್ಟ ಮಾತು ಉಳಿಸಿಕೊಂಡಿದ್ದಕ್ಕೆ ತೃಪ್ತಿ ಯಾಗಿದೆ.

ಈ ಯೋಜನೆ 210 ಮೀಟರ್ ಉದ್ದದ ಸೇತುವೆಯೊಂದಿಗೆ 510 ಮೀಟರ್ ರಸ್ತೆಯನ್ನು ಹೊಂದಿದ್ದು, ₹10 ಕೋಟಿ ಯೋಜನಾ ವೆಚ್ಚವಾಗಿದೆ. ಈ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣ ವಾದರೆ ಜಾರುಕುದ್ರು ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಯಲಿದೆ ಎಂದು ಅವರು ಹೇಳಿದರು.

ADVERTISEMENT

ಕೇಂದ್ರ ರಸ್ತೆ ನಿಧಿಯಿಂದ ಸಹ ₹49 ಕೋಟಿ ಅನುದಾನ ಕಾಪು ಕ್ಷೇತ್ರಕ್ಕೆ ಮಂಜೂರಾಗಿದೆ. ನನ್ನ ಶಾಸಕತ್ವದ ಅವಧಿ ಪೂರ್ಣಗೊಳ್ಳುವಷ್ಟರಲ್ಲಿ ಅತ್ಯ ಧಿಕ ಮೂಲ ಸೌಕರ್ಯ ಕ್ಷೇತ್ರಕ್ಕೆ ಲಭ್ಯವಾ ಗಲಿದೆ. ಜನರು ಸಹ ನನಗೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಅವರು ಮನವಿ ಮಾಡಿದರು. ಜಾರು ಕುದ್ರು ನಿವಾಸಿಗಳ ಪರವಾಗಿ ಸಂಜೀವ ಪೂಜಾರಿ ಅವರು ಸೊರಕೆ ಅವರನ್ನು ಗೌರವಿಸಿದರು.

ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಮತ್ತು ಶಾಸಕರ ಅನುದಾ ನದಿಂದ ಮಂಜೂರಾದ ಸುಮಾರು ₹1 ಕೋಟಿ ವೆಚ್ಚದ ಕೆಲ ಕಾಮಗಾರಿಗಳ ಉದ್ಘಾಟನೆ ಮತ್ತು ಕೆಲವು ಕಾಮಗಾರಿ ಗಳಿಗೆ ಭೂಮಿ ಪೂಜೆ ಸಹ ಮಾಡಲಾಯಿತು.

ಉದ್ಯಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಂಧಿ ಶೇಖರ್‌, ಉಪಾಧ್ಯಕ್ಷ ರಿಯಾಜ್ ಪಳ್ಳಿ, ಮುಖಂಡರಾದ ಗಿರೀಶ್ ಸುವರ್ಣ, ಗ್ಲಾಡಿಸ್ ಮೆಂ ಡೋನ್ಸಾ, ರಾಜೀವಿ, ಸರಸು ಡಿ ಬಂಗೇರ, ಗಿರೀಶ್ ಕುಮಾರ್, ಪಿಎಂಜಿಎಸ್‌ವೈ ಯೋಜನಾ ವಿಭಾಗದ ಎಂಜಿನಿಯರ್ ಸತೀಶ್ ಕುಮಾರ್ ಇದ್ದರು. ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು, ಅಬಿದ್ ಆಲಿ ಕಾರ್ಯಕ್ರಮ ನಿರೂಪಿಸಿದರು. ಲಾರೆನ್ಸ್ ಡಿಸೋಜಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.