ADVERTISEMENT

ಚಾಲಕರು ಸಂಯಮ ರೂಢಿಸಿಕೊಳ್ಳಬೇಕು: ವಿಜಯ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 9:00 IST
Last Updated 22 ಸೆಪ್ಟೆಂಬರ್ 2017, 9:00 IST
ಖಂಬದಕೋಣೆಯ ರಿಕ್ಷಾ ಮತ್ತು ಟೂರಿಸ್ಟ್ ವಾಹನಗಳ ಚಾಲಕರ ಸಂಘವನ್ನು ಎಚ್. ವಿಜಯ ಶೆಟ್ಟಿ ಗುರುವಾರ ಉದ್ಘಾಟಿಸಿದರು. (ಬೈಂದೂರು ಚಿತ್ರ)
ಖಂಬದಕೋಣೆಯ ರಿಕ್ಷಾ ಮತ್ತು ಟೂರಿಸ್ಟ್ ವಾಹನಗಳ ಚಾಲಕರ ಸಂಘವನ್ನು ಎಚ್. ವಿಜಯ ಶೆಟ್ಟಿ ಗುರುವಾರ ಉದ್ಘಾಟಿಸಿದರು. (ಬೈಂದೂರು ಚಿತ್ರ)   

ಬೈಂದೂರು: ಜನರಿಗೆ ಟ್ಯಾಕ್ಸಿ, ರಿಕ್ಷಾ ಚಾಲಕರ ಸೇವೆ ಈಗ ಅನಿವಾರ್ಯವೆನಿಸಿದೆ. ಅವರು ತಮ್ಮ ವೃತ್ತಿಯ ಭದ್ರತೆಗಾಗಿ ಸಂಘಟನೆ ಕಟ್ಟಿಕೊಳ್ಳುವುದು ಅಗತ್ಯ. ಅದರೊಂದಿಗೆ ಅವರು ತಮ್ಮ ಆರ್ಥಿಕ ಬಲವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸುವುದು ಒಳ್ಳೆಯದು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಹಾಗೂ ಸಂಘದ ಅಧ್ಯಕ್ಷ ಎಚ್. ವಿಜಯ್ ಶೆಟ್ಟಿ ಹೇಳಿದರು.

ಹೊಸದಾಗಿ ಅಸ್ತಿತ್ವಕ್ಕೆ ಬಂದ ಖಂಬದಕೋಣೆ ಆಟೋರಿಕ್ಷಾ, ಗೂಡ್ಸ್ ರಿಕ್ಷಾ ಮತ್ತು ಟೂರಿಸ್ಟ್ ವಾಹನ ಚಾಲಕ-, ಮಾಲೀಕರ ಸಂಘವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಸಂಘದ ಗೌರವ ಸಲಹೆಗಾರ ಉದ್ಯಮಿ ವಿಜಯ್ ಶೆಟ್ಟಿ ಸ್ಫೂರ್ತಿ ಮಾತನಾಡಿ, ಆಟೊ ಚಾಲಕರು ಸಾಮಾಜಿಕ ಕಳಕಳಿಯನ್ನು ಹೊಂದಿರುವುದರ ಜತೆಗೆ ಊರಿನ ಅಭಿವೃದ್ಧಿಯಲ್ಲಿಯೂ ತೊಡಗಿಸಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಅವರು ಮಾನವೀಯತೆ ಜತೆಗೆ ಸಂಯಮ, ತಾಳ್ಮೆಯನ್ನೂ ರೂಢಿಸಿಕೊಳ್ಳಬೇಕು ಎಂದರು.

ADVERTISEMENT

ಸಂಘದ ಗೌರವಾಧ್ಯಕ್ಷ ರವಿ ಗಾಣಿಗ ಅಧ್ಯಕ್ಷತೆ ವಹಿಸಿದ್ದರು. ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸದಸ್ಯರನ್ನು ಗೌರವಿಸಲಾಯಿತು. ಉಪಾಧ್ಯಕ್ಷ ರಾಮ ದೇವಾಡಿಗ ಇದ್ದರು. ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.