ADVERTISEMENT

ಧರ್ಮ ಸಂಸ್ಕೃತಿ ಸಮಾಜದ ಆಧಾರ ಸ್ತಂಭ

ಬಾರ್ಕೂರು ಮಹಾಸಂಸ್ಥಾನ: ಸಚಿವ ಸದಾನಂದ ಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 6:09 IST
Last Updated 22 ಏಪ್ರಿಲ್ 2017, 6:09 IST
ಬಾರ್ಕೂರು(ಬ್ರಹ್ಮಾವರ) : ‘ಸಮಾಜವು ಪ್ರೀತಿ ವಿಶ್ವಾಸ, ಧರ್ಮ ಸಂಸ್ಕೃತಿ ಮೇಲೆ ನಿಂತಿದೆ’ ಎಂದು  ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.
 
ಭಾರ್ಗವ ಬೀಡು ಬಾರ್ಕೂರು ಮಹಾ ಸಂಸ್ಥಾನದಲ್ಲಿ ವಿಶ್ವ ಸಂತೋಷ ಭಾರತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ನಾಗದೇವರ ಮತ್ತು ಮೂಲ ದೈವಗಳ ಪುನರ್ ಪ್ರತಿಷ್ಠಾಪನೆ ಮತ್ತು ಪರಮ ಪವಿತ್ರ ಮಹಾ ನಾಗಮಂಡಲೋತ್ಸವ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
 
‘ಜಗತ್ತು ಬದಲಾಗುತ್ತಿದೆ. ಆದರೆ ನಾವು, ನಮ್ಮ ಧರ್ಮ, ಸಂಸ್ಕೃತಿಯನ್ನು ಇನ್ನೂ ಮರೆತಿಲ್ಲ. ಇವೆಲ್ಲವೂ ನಮ್ಮೊಂ ದಿಗೆ ಇದ್ದಾಗ ಮಾತ್ರ ನಾವು ಮತ್ತು ಸಮಾಜ ಆರೋಗ್ಯದಿಂದಿರಲು ಸಾಧ್ಯ’ ಎಂದು ಅವರು ಹೇಳಿದರು.
 
ಸಭೆಯಲ್ಲಿ ಆಶೀರ್ವಚನ ನೀಡಿದ ಬಾರ್ಕೂರು ಮಹಾಸಂಸ್ಥಾನದ ವಿಶ್ವ ಸಂತೋಷ ಭಾರತಿ ಸ್ವಾಮೀಜಿ, ‘ಬಾರ್ಕೂರು ಮಹಾಸಂಸ್ಥಾನದಲ್ಲಿ ಮಠದ ಪರಂಪರೆ ಇರುವುದಿಲ್ಲ. ಇಲ್ಲಿ ಟ್ರಸ್ಟ್‌ ಮೂಲಕ ಸಮಾಜದ ಒಳಿತಿಗೆ ಉಳ್ಳವರಿಂದ ಪಡೆದು ಇಲ್ಲದವರಿಗೆ ನೀಡುವ ಉದ್ದೇಶ ಹೊಂದಿದೆ’ ಎಂದು ಹೇಳಿದರು.
 
ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ಉದ್ಯಮಿಗಳಾದ ಡಾ.ಬಿ.ಆರ್‌.ಶೆಟ್ಟಿ, ಕೆ.ಪ್ರಕಾಶ್‌ ಶೆಟ್ಟಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಅಧ್ಯಕ್ಷ ಎಲ್.ಪ್ರಭಾಕರ ಶೆಟ್ಟಿ, ಮುಂಬಯಿ ಬಂಟ್ಸ್ ಅಸೋಸಿ ಯೇಶನ್ ಅಧ್ಯಕ್ಷ ಉಪ್ಪೂರು ಶೇಖರ ಶೆಟ್ಟಿ, ವಿಶ್ವ ಬಂಟರ ಒಕ್ಕೂಟದ ಉಪಾ ಧ್ಯಕ್ಷ ಐಕಳ ಹರೀಶ ಶೆಟ್ಟಿ, ಮುಂಬಯಿಯ ಉದ್ಯಮಿಗಳಾದ ಕುಸುಮೋದರ ಡಿ. ಶೆಟ್ಟಿ, ಬಿ.ವಿವೇಕ್ ಶೆಟ್ಟಿ, ಕಚ್ಚೂರು ನಾಗೇ ಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಕಡಂದಲೆ ಸುರೇಶ್ ಭಂಡಾರಿ,  ಸಚ್ಚಿ ದಾನಂದ ಶೆಟ್ಟಿ, ಜಯರಾಮ ಶೆಟ್ಟಿ, ರಾಜ ಶೇಖರ್,  ಟ್ರಸ್ಟ್‌ನ ಎಲ್ಲ ಪದಾಧಿಕಾ ರಿಗಳು  ಇದ್ದರು.
 
ಕಾರ್ಯದರ್ಶಿ ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಅಶೋಕ್ ಪರ್ಕಳ ಮತ್ತು ಅಕ್ಷಯ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.