ADVERTISEMENT

ನಿವೇಶನಕ್ಕೆ 124 ಎಕರೆ ಹಂಚಿಕೆ

ಉಡುಪಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2015, 5:14 IST
Last Updated 3 ಜುಲೈ 2015, 5:14 IST

ಉಡುಪಿ: ಮನೆ ನಿವೇಶನಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 124 ಎಕರೆ ಭೂಮಿಯನ್ನು ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮೂಲಕ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಉಡುಪಿ ತಹಶೀಲ್ದಾರ್‌ ಟಿ.ಜಿ. ಗುರುಪ್ರಸಾದ್‌ ತಿಳಿಸಿದರು.

ಉಡುಪಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ 27ನೇ ಸಾಮಾನ್ಯ ಸಭೆಯಲ್ಲಿ ಮಾತನಾ ಡಿದ ಅವರು, ಸಂಪೂರ್ಣವಾಗಿ ಹಾನಿಗೀಡಾದ ಕಚ್ಚಾ ಮತ್ತು ಪಕ್ಕಾ ಮನೆಗಳಿಗೆ 24ಗಂಟೆಯೊಳಗೆ ಪ್ರಾಥಮಿಕ ಪರಿಹಾರವನ್ನು ನೀಡಲಾಗುತ್ತದೆ. ಉಳಿದ ಪರಿಹಾರವನ್ನು 15 ದಿನಗಳೊಳಗೆ ವಿತರಿ ಸಲಾಗುವುದು ಎಂದರು.

ಸರ್ಕಾರಿ ಕಟ್ಟಡಗಳಿಗೆ ಆರ್‌ಟಿಸಿ ನೀಡಲು ಜಿಲ್ಲೆಯ ನಾಲ್ಕು ಹೋಬಳಿ ಗಳಲ್ಲಿ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಕಂದಾಯ ಅದಾಲತ್‌ಗಳನ್ನು ನಡೆಸಲಾ ಗುತ್ತಿದ್ದು, ಸರ್ಕಾರಿ ಜಾಗದಲ್ಲಿರುವ ಎಲ್ಲಾ ಸರ್ಕಾರಿ ಕಟ್ಟಡಗಳ ಅಧಿಕಾರಿಗಳು ಅರ್ಜಿ ಸಲ್ಲಿಸಬಹುದು. ಜುಲೈ 3ನೇ ವಾರದಿಂದ ಪಿಂಚಣಿ ಅದಲಾತ್‌ ನಡೆಯಲಿದೆ. ಎಂಡೋ ಪೀಡಿತ ಬೊಮ್ಮರಬೆಟ್ಟಿನ 9,  ಪೆರ್ಡೂರಿನ 10 ಮಂದಿ ಫಲಾನು ಭವಿಗಳಿಗೆ ತಲಾ ₹ 1,500 ಮಾಸಾಶ ನವನ್ನು ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದರು.
 
ಪಡಿತರ ಚೀಟಿಗೆ ಆಧಾರ್‌ ಕಾರ್ಡ್‌ ಮತ್ತು ಎಪಿಕ್‌(ಗುರುತಿನ ಚೀಟಿ) ಕಡ್ಡಾಯ ಮಾಡಲಾಗಿದೆ. ಈ ಹಿಂದೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರು ಆಧಾರ್‌, ಎಪಿಕ್‌ ಕಾರ್ಡ್‌ ನೀಡದಿದ್ದಲ್ಲಿ ಮತ್ತು ಮಾಹಿತಿ ಸರಿಯಾಗಿಲ್ಲದ ಅರ್ಜಿ ಗಳನ್ನು ರದ್ದು ಪಡಿಸಲಾಗಿದೆ. ಅಂತವರಿಗೆ ಪುನಃ ಮೇ ತಿಂಗಳಿಂದ ಆನ್‌ಲೈನ್‌ನಲ್ಲಿ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕ ಸದಾಶಿವ ಶೆಟ್ಟಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಜಿಲ್ಲೆಯಲ್ಲಿ ಮರಳುಗಾರಿಕೆಗೆ ನಿಷೇಧ ದಿಂದ ಮರಳು ಸಾಗಾಟ ಮತ್ತು ಕಟ್ಟಡ ಕಾರ್ಮಿಕರು  ತೀವ್ರ ಸಂಕಷ್ಟಕ್ಕೆ ಒಳಗಾಗಿ ದ್ದಾರೆ. ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ರೂಪಿಸುವಂತೆ ಜಿಲ್ಲಾಧಿಕಾರಿಗೆ ಮನವ ರಿಕೆ ಮಾಡಬೇಕು ಎಂದು ರಾಮ ಕುಲಾಲ್‌ ಮತ್ತಿತರರು ಒತ್ತಾಯಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಪಟ್ಲ ಬಾಲಕಿಯರ ವಿದ್ಯಾರ್ಥಿನಿಲಯ ಸಂಪೂ ರ್ಣವಾಗಿ ಶಿಥಿಲವಾಗಿದ್ದು, ಮೂಲ ಸೌಕರ್ಯಗಳು ಸರಿಯಾಗಿಲ್ಲ. ಬಾಲಕಿ ಯರಿಗೆ ಸೂಕ್ತ ರಕ್ಷಣೆಯ ವ್ಯವಸ್ಥೆಯು ಇಲ್ಲ. ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಉಪಾಧ್ಯಕ್ಷ ಗಣೇಶ್‌ ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗದಲ್ಲಿ  ಮನೆ ಗಳನ್ನು ಕಟ್ಟಿಕೊಂಡಿರುವವರಿಗೆ 94ಸಿಸಿ ಅಡಿಯಲ್ಲಿ ಜುಲೈ 1ರಿಂದ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ. 
- ಟಿ.ಜಿ. ಗುರುಪ್ರಸಾದ್‌, ತಹಶೀಲ್ದಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.