ADVERTISEMENT

ನಿವೇಶನ ರಹಿತರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 6:11 IST
Last Updated 2 ಮಾರ್ಚ್ 2017, 6:11 IST

ಗಂಗೊಳ್ಳಿ (ಬೈಂದೂರು) : ಗಂಗೊಳ್ಳಿ ಪರಿಸರದ ನಿವೇಶನ ರಹಿತರ ಸಮಾ ವೇಶ ಇಲ್ಲಿನ ವೀರೇಶ್ವರ ಮಾಂಗಲ್ಯ ಮಂಟಪದಲ್ಲಿ ಮಂಗಳವಾರ ನಡೆಯಿತು.

ಅದರಲ್ಲಿ ಮಾತನಾಡಿದ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲ್ಲೂಕು ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗರತ್ನ ನಾಡ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳು ದಶಕ ಸಮೀಪಿಸುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಮೂಲ ಸೌಲಭ್ಯ ಕಲ್ಪಿಸಲು ಕೋಟ್ಯಂತರ ರೂಪಾಯಿ ವ್ಯಯಿಸಿವೆ. ಆದರೆ ಬಡತನ, ನಿರು ದ್ಯೋಗ, ಹಸಿವು, ಮಹಿಳಾ ದೌರ್ಜನ್ಯ, ಜಾತಿ ತಾರತಮ್ಯ, ಅಸ್ಪ್ರಶ್ಯತೆ ದೂರಾಗುವ ಬದಲು ಹೆಚ್ಚಾಗುತ್ತಿವೆ ಎಂದರು.

ದೇಶದಲ್ಲಿ 20 ಕೋಟಿ, ರಾಜ್ಯದಲ್ಲಿ 1 ಕೋಟಿ ಕೃಷಿಕೂಲಿ ಕಾರ್ಮಿಕರಿದ್ದಾರೆ. ವಾಸಿಸಲು ಸೂರು ಹೊಂದುವುದು  ಪ್ರತಿಯೊಬ್ಬನ ಹಕ್ಕು. ಅದನ್ನು ಪಡೆ ಯಲು ಹೋರಾಡಬೇಕಾದ ಅನಿವಾ ರ್ಯತೆ ಎದುರಾಗಿದೆ. ಅದರ ಭಾಗವಾಗಿ ಕುಂದಾಪುರ ತಾಲ್ಲೂಕಿನ ಇಬ್ಬರು ಶಾಸಕರ ಮನೆಮುಂದೆ ಭೂಮಿಹಕ್ಕಿಗಾಗಿ ಧರಣಿ ನಡೆಸಲಾ ಗುವುದು ಎಂದು ಅವರು ಹೇಳಿದರು. ಸಂಘದ ಗ್ರಾಮ ಸಮಿತಿ ಕಾರ್ಯದರ್ಶಿ ಅರುಣ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. 

ಸಂಘದ ಜಿಲ್ಲಾಧ್ಯಕ್ಷ ಯು. ದಾಸ ಭಂಡಾರಿ, ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರು ನಿವೇಶನ ಕೋರಿ ಅರ್ಜಿ ಸಲ್ಲಿಸಿ ಮೂರು ವರ್ಷ ಕಳೆದರೂ ಫಲ ನೀಡದಿರುವುದರ ವಿರುದ್ಧ ಖಂಡನೆ ವ್ಯಕ್ತಪಡಿಸಿದರು. ಕೃಷಿ ಕೂಲಿಕಾರರ ಸಂಘದ ಮುಖಂಡರಾದ ರಾಜೀವ್‌ ಪಡು ಕೋಣೆ, ಪದ್ಮಾವತಿ ಶೆಟ್ಟಿ, ಕುಶಲ, ಶೀಲಾವತಿ, ಆನಂದ ಗಂಗೊಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.