ADVERTISEMENT

ಬೆಲೆ ಏರಿಕೆ ನಿಯಂತ್ರಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 5:43 IST
Last Updated 3 ಸೆಪ್ಟೆಂಬರ್ 2015, 5:43 IST

ಕುಂದಾಪುರ: ಅಧಿಕಾರಕ್ಕೆ ಬರುವ ಮೊದಲು ದೇಶವಾಸಿಗಳಿಗೆ ನೀಡಿದ ಭರ ವಸೆಗಳನ್ನು ಮರೆತಿರುವ ಪ್ರಧಾನಿ ಮೋದಿ ಅವರ ನೇತೃತ್ವದ ಸರ್ಕಾರ ದೇಶದ ಒಟ್ಟಾರೆ ವ್ಯವಸ್ಥೆಯನ್ನೆ ಖಾಸಗೀಕರಣ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಕಾರ್ಮಿಕ ಸಂಘಟನೆಯ ಮುಖಂಡ ಸುರೇಶ್ ಕಲ್ಲಾಗಾರ್ ಆರೋಪಿಸಿದರು.

ಹೊಸ ಕಾರ್ಮಿಕ ನೀತಿ, ರಸ್ತೆ ಸುರಕ್ಷತಾ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರೆ ನೀಡಿದ್ದ ಮುಷ್ಕರಕ್ಕೆ ಬೆಂಬಲ ಸೂಚಿಸಿ ಕುಂದಾಪುರದಲ್ಲಿ ಸಿಐ ಟಿಯು ಹಾಗೂ ಇಂಟಕ್‌ನ ಒಟ್ಟು 10 ಕಾರ್ಮಿಕ ಸಂಘಟನೆಗಳು ಜತೆಯಾಗಿ ನಡೆಸಿದ್ದ ಮುಷ್ಕರದ ಸಂದರ್ಭದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.

ಸಾರ್ವಜನಿಕ ವಿತರಣಾ ವ್ಯವಸ್ಥೆ ಯನ್ನು ಬಲ ಪಡಿಸದೆ ಇದ್ದಲ್ಲಿ ಬೆಲೆ ಏರಿಕೆ ನಿಯಂತ್ರಣ ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಆಡಳಿತರೂಢರು ಮನಗಾಣಬೇಕು. ಅಗತ್ಯ ವಸ್ತುಗಳನ್ನು ಪಡಿತರ ವ್ಯವಸ್ಥೆಯಲ್ಲಿ ನೀಡಲು ಕ್ರಮ ಕೈಗೊಳ್ಳಬೇಕು. ಕಾರ್ಮಿ ಕರ ಹಿತಾಸಕ್ತಿಯನ್ನು ಬಲಿಕೊಡಲು ಮುಂದಾಗುತ್ತಿರುವ ಕೇಂದ್ರ ಸರ್ಕಾರ ತನ್ನ ಕಾರ್ಮಿಕ ವಿರೋಧಿ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು ಎಂದರು.

ವಿದೇಶದ ಹಾಗೂ ದೇಶದ ಬಂಡ ವಾಳಶಾಹಿಗಳಿಗೆ ರತ್ನಕಂಬಳಿ ಸ್ವಾಗತ ವನ್ನು ನೀಡುತ್ತಿರುವ ಮೋದಿ ಸರ್ಕಾರ, ಸರ್ಕಾರಿ ವ್ಯವಸ್ಥೆಗಳನ್ನು ಖಾಸಗಿಕರಣ ಮಾಡುವ ಮೂಲಕ ಕಾರ್ಮಿಕರ ಊಟದ ತಟ್ಟೆಯನ್ನ ಕಸಿದುಕೊಳ್ಳುತ್ತಿದೆ. ಪ್ರಸ್ತುತ ಇರುವ ಮೋಟಾರು ವಾಹನ ಕಾಯಿದೆಯನ್ನು ಅ ವೈಜ್ಞಾನಿಕವಾಗಿ ಬದ ಲಾಯಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಮೊದಲು ದೇಶದ ಗ್ರಾಮೀಣ ಭಾಗದಲ್ಲಿನ ರಸ್ತೆಗಳನ್ನು ದುರಸ್ತಿ ಮಾಡಲಿ. ವಿದೇಶದಲ್ಲಿನ ರಸ್ತೆಗಳ ಗುಣ ಮಟ್ಟ ಹಾಗೂ ಸಾರಿಗೆ ನಿಯಮಗಳ ಅನು ಷ್ಠಾನದ ಬಳಿಕ ಹೊಸ ಮಸೂದೆಯ ಪ್ರಸ್ತಾಪವನ್ನು ಮಾಡಲಿ ಎಂದು ಒತ್ತಾಯಿಸಿದರು.

ಸಿಐಟಿಯು ಸಂಘಟನೆಯ ಪ್ರಮುಖ ರಾದ ಎಚ್. ನರಸಿಂಹ, ಮಹಾಬಲ ವಡೇರಹೋಬಳಿ, ವಿ.ನರಸಿಂಹ, ರಾಜು ಪಡುಕೋಣೆ, ಇಂಟಕ್ ಸಂಘಟನೆಯ ಅಧ್ಯಕ್ಷ  ಲಕ್ಷಣ ಶೆಟ್ಟಿ, ಗ್ರಾಮ ಪಂಚಾಯಿತಿ ನೌಕರರ ಸಂಘಟನೆಯ ಅಧ್ಯಕ್ಷ ನಾರಾ ಯಣ ಬೀಜಾಡಿ, ಎಸ್ಎಫ್ಐ ಸಂಘಟ ನೆಯ ಶ್ರೀಕಾಂತ ಹೆಮ್ಮಾಡಿ, ಅಕ್ಷಯ್ ವಡೇರಹೋಬಳಿ, ಡಿವೈಎಫ್ಐ ಸಂಘ ಟನೆಯ ಸಂತೋಷ್ ಹೆಮ್ಮಾಡಿ, ರಾಜೇಶ್ ವಡೇರಹೋಬಳಿ ಹಾಗೂ ವಿವಿಧ ಕಾರ್ಮಿಕ ಸಂಘಟನೆಯ ಲಕ್ಷಣ ಬರೆ ಕಟ್ಟು, ವಿ.ರಮೇಶ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.