ADVERTISEMENT

ಬ್ರಹ್ಮಾವರ: ಸಹಿ ಸಂಗ್ರಹ ಅಭಿಯಾನಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 12:33 IST
Last Updated 19 ಏಪ್ರಿಲ್ 2015, 12:33 IST

ಬ್ರಹ್ಮಾವರ:  ತಾಲ್ಲೂಕು ರಚನಾ ಹೋರಾಟ ಸಮಿತಿಯಿಂದ ಪುರಸಭೆ ಮಾಡುವಂತೆ ಆಗ್ರಹಿಸಿ ಕಳೆದ ಎರಡು ತಿಂಗಳಿನಿಂದ ಬ್ರಹ್ಮಾವರ ವ್ಯಾಪ್ತಿಯ ನಾಗರಿಕರಿಂದ ಸಹಿ ಸಂಗ್ರಹಿಸುವ ಕಾರ್ಯ ಶನಿವಾರ ಅಂತ್ಯಗೊಂಡಿತು. ಹಲವಾರು ವರ್ಷಗಳಿಂದ ನಿರಂತರ ವಾಗಿ ಅನೇಕ ಹೋರಾಟಗಳನ್ನು ನಡೆ ಸುತ್ತಾ ಬಂದಿರುವ ಬ್ರಹ್ಮಾವರ ತಾಲ್ಲೂಕು ರಚನಾ ಹೋರಾಟ ಸಮಿತಿ ಕಳೆದ ಜ.25ರಂದು ಈ ನೂತನ ಅಭಿಯಾನ ವನ್ನು ಕೈಗೊಂಡಿತ್ತು.

ಹಂದಾಡಿ, ಹಾರಾಡಿ, ವಾರಂಬಳ್ಳಿ ಮತ್ತು ಚಾಂತಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಅಭಿಯಾನ ನಡೆಸಿ ಶನಿವಾರ ಬ್ರಹ್ಮಾವರ ಪೇಟೆಯಲ್ಲಿ ಸಹಿ ಸಂಗ್ರಹ ಮಾಡಿ ಭಾನುವಾರ  ಸಚಿವ ವಿನಯಕುಮಾರ ಸೊರಕೆ ಅವರಿಗೆ ಸಂಪೂರ್ಣ ಮಾಹಿತಿಯನ್ನು ಹಸ್ತಾಂತರಿಸಲಿದೆ.

ಸಂಚಾಲಕ ಬಾರ್ಕೂರು ಸತೀಶ್‌ ಪೂಜಾರಿ ಮಾಹಿತಿ ನೀಡಿ ಈವರೆಗೆ ಸುಮಾರು 9ಸಾವಿರ ಸಹಿಯನ್ನು ಸಂಗ್ರಹಿ  ಸಲಾಗಿದೆ. ತಾಲ್ಲೂಕು ಘೋಷಣೆಯಾಗಿ 2ವರ್ಷ ಸಂದರೂ ಸರ್ಕಾರ ಪುರಸಭೆ ರಚನೆಗೆ ಮೀನ ಮೇಷ ಎಣಿಸುತ್ತಿದೆ. ಮುಂದಿನ ಅಧಿವೇಶನದಲ್ಲಾದರೂ ಪುರಸಭೆ ರಚಿಸುವಂತೆ ಆಗ್ರಹಿಸಿ ನಮ್ಮ ಬ್ರಹ್ಮಾವರ, ನಮ್ಮ ಕನಸು ಜನರ ಬಳಿಗೆ ನಮ್ಮ ನಡಿಗೆ ಅಭಿಪ್ರಾಯ ಮತ್ತು ಸಹಿ ಸಂಗ್ರಹ ಅಭಿಯಾನ ಮಾಡಿ ಪುರಸಭೆಯ ಅಗತ್ಯತೆಯ ಬಗ್ಗೆ ಸಚಿವರ ಮೂಲಕ ಮುಖ್ಯಮಂತ್ರಿ ಅವರಿಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ಶನಿವಾರ ಬಸ್‌ ನಿಲ್ದಾಣದ ಬಳಿ ನಡೆದ ಕಾರ್ಯಕ್ರಮಕ್ಕೆ ಬಿ.ಜೆ.ಪಿ ಕಿಸಾನ್‌ ಘಟಕದ ಅಧ್ಯಕ್ಷ ಸತ್ಯರಾಜ್‌ ಚಾಲನೆ ನೀಡಿದರು. ಸದಾನಂದ ಪೂಜಾರಿ ಹೇರೂರು, ಜಯಂತಿ ವಾಸುದೇವ, ದೇವಕಿ ಬಾರ್ಕೂರು, ಸಂತೋಷ್‌ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.