ADVERTISEMENT

ಬ್ರಹ್ಮಾವರ: ‘ಗಾನ ತ್ರಿವಳಿ’ ಧ್ವನಿಸುರುಳಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2013, 7:50 IST
Last Updated 27 ನವೆಂಬರ್ 2013, 7:50 IST

ಬ್ರಹ್ಮಾವರ: ಹೆರೆಂಜಾಲು ಯಕ್ಷಗಾನ ಪ್ರತಿಷ್ಠಾನ ಯಕ್ಷಬಳಗ ನಾಗೂರು ವತಿಯಿಂದ, ರಾಜ್ಯ ಪ್ರಶಸ್ತಿ ಪುರಸ್ಕೃತ ಹೆರೆಂಜಾಲು ವೆಂಕಟರಮಣ ಗಾಣಿಗ ಸ್ಮರಣಾರ್ಥವಾಗಿ, ಬಡಗು ತಿಟ್ಟಿನ ಸಂಪ್ರದಾಯ ಶೈಲಿಯ ಭಾಗವತ ಹೆರೆಂಜಾಲು ಗೋಪಾಲ ಗಾಣಿಗ ಹಾಗೂ ಅವರ ಪುತ್ರ ಹೆರೆಂಜಾಲು ಪಲ್ಲವ ಗಾಣಿಗ ಜಂಟಿ ಹಾಡುಗಾರಿಕೆ­ಯ ಹಾಗೂ ಹಿಲ್ಲೂರು ರಾಮಕೃಷ್ಣ ಹೆಗಡೆ ಅವರ ಕಂಠಸಿರಿಯ ಸಾಂಪ್ರ­ದಾಯಿಕ ಯಕ್ಷಗಾನ ಪದ್ಯಗಳ ಧ್ವನಿಸು­ರುಳಿ ‘ಗಾನ ತ್ರಿವಳಿ’ಯ ಬಿಡುಗಡೆ ಕಾರ್ಯಕ್ರಮ ಅಮೃತೇಶ್ವರೀ ಮೇಳದ ಯಕ್ಷಗಾನ ವೇದಿಕೆಯಲ್ಲಿ ಮೂಡುಗಿಳಿ­ಯಾರಿನಲ್ಲಿ ಇತ್ತೀಚೆಗೆ ನೆರವೇರಿತು.

ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಆನಂದ ಸಿ, ಕುಂದರ್ ಧ್ವನಿ ಸುರುಳಿ ಬಿಡುಗಡೆಗೊಳಿಸಿ ಮಾತನಾಡಿ ಹೆರೆಂಜಾ­ಲು ಗೋಪಾಲ ಗಾಣಿಗ­ರಂತಹ ಬಡಗು ತಿಟ್ಟಿನ ಶ್ರೇಷ್ಠ ಭಾಗವತ ಅಮೃತೇಶ್ವರೀ ಮೇಳದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಮೇಳಕ್ಕೆ ಹೆಮ್ಮೆಯಾಗಿದ್ದು ಅವರು ಹೊರತಂದ ಧ್ವನಿಸುರುಳಿಗೆ ಶುಭವಾಗಲಿ ಎಂದರು.
ಮಣಿಪಾಲ ಎಂ.ಐ.ಟಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಎಸ್.ವಿ.ಉದಯ್ ಕುಮಾರ್ ಶೆಟ್ಟಿ ಮಾತನಾಡಿ ಯಕ್ಷಗಾನದ ಧ್ವನಿಸುರುಳಿಗಳು ಕೇವಲ ಮನೋರಂಜನೆಗೆ ಸೀಮಿತವಾಗಿರದೆ ಯಕ್ಷಗಾನ ಭಾಗವತಿಕೆ ಅಭ್ಯಾಸಕ್ಕೂ ಸಹಕಾರಿಯಾಗುತ್ತದೆ ಎಂದರು.

ತಾ.ಪಂ ಸದಸ್ಯ ರತ್ ಕುಮಾರ್ ಶೆಟ್ಟಿ, ಪಂಚಾಯಿತಿ ಸದಸ್ಯ ರಾಜ­ರಾಮ್ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಸುಬ್ರಾಯ ಆಚಾರ್, ಪಲ್ಲವಿ ಗಾಣಿಗ, ಹೆರೆಂಜಾಲು ಗೋಪಾಲ ಗಾಣಿಗ ಮತ್ತಿತರರು ಉಪಸ್ಥಿತರಿದ್ದರು.
ರಾಜು ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.