ADVERTISEMENT

‘ಬ್ರಾಹ್ಮಣನಿಗಿಂತ ಬ್ರಾಹ್ಮಣ್ಯ ದೊಡ್ಡದು’

ಕೋಟ ವಿಷ್ಣು ಸಹಸ್ರನಾಮ ಮಹಾಯಾಗ ಸಂಪನ್ನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 6:50 IST
Last Updated 31 ಜನವರಿ 2017, 6:50 IST
‘ಬ್ರಾಹ್ಮಣನಿಗಿಂತ ಬ್ರಾಹ್ಮಣ್ಯ ದೊಡ್ಡದು’
‘ಬ್ರಾಹ್ಮಣನಿಗಿಂತ ಬ್ರಾಹ್ಮಣ್ಯ ದೊಡ್ಡದು’   

ಕೋಟ(ಬ್ರಹ್ಮಾವರ): ಬ್ರಾಹ್ಮಣನಿಗಿಂತ ಬ್ರಾಹ್ಮಣ್ಯ ದೊಡ್ಡದು. ಇದು ರಕ್ಷಿತವಾ ದರೆ ಜಗತ್ತು ರಕ್ಷಿತವಾಗುತ್ತದೆ. ಆತ್ಮ ದರ್ಶನ ಮಾಡಿಕೊಳ್ಳದೇ ಬ್ರಾಹ್ಮಣ ಬದುಕಿದರೆ ವ್ಯರ್ಥ ಎಂದು ವಿದ್ವಾಂಸ ಶತಾವಧಾನಿ ಬೆಂಗಳೂರಿನ ಡಾ.ಆರ್‌. ಗಣೇಶ್ ಹೇಳಿದರು.

ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಬ್ರಹ್ಮಾವರ ಹಂದಾಡಿಯ ಶಾಂತಿಮತಿ ಪ್ರತಿಷ್ಠಾನ ಬ್ರಾಹ್ಮಣ ಸಂಘಟನೆಗಳ ಸಹಕಾರ ದೊಂದಿಗೆ ನಡೆದ ವಿಷ್ಣು ಸಹಸ್ರನಾಮ ಪಾರಾಯಣ ಮಂಗಳದ ವಿಷ್ಣು ಸಹಸ್ರ ನಾಮ ಮಹಾಯಾಗದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಬ್ರಾಹ್ಮಣ ಎಂದು ಹೇಳಿ ಕೊಳ್ಳಲು ಮುಜುಗರ ಪಡುವ ಸ್ಥಿತಿ ಬಂದಿದೆ. ಸರ್ಕಾರಿ ಕಾಲಂಗಳಲ್ಲಿ ತುಂಬಲು ಮಾತ್ರ ಬ್ರಾಹ್ಮಣ ಎಂದು ಬೇಕಾಗಿದೆ. ಆದರೆ, ಬ್ರಾಹ್ಮಣತ್ವ ದೊಡ್ಡ ಪರಂಪರೆಯಿಂದ ಬಂದಿದೆ. ಇದಕ್ಕಾಗಿ ಬ್ರಾಹ್ಮಣರು ಮುಜುಗರ ಪಡದೆ ಹೆಮ್ಮೆ ಪಡಬೇಕು. ಮಾತ್ರವಲ್ಲ, ಆ ಮೌಲ್ಯಕ್ಕೆ ತಕ್ಕಂತೆ ಬದುಕಬೇಕು ಎಂದು ಅವರು ಹೇಳಿದರು.

ಇದೇ ಸಂದರ್ಭ ಬ್ರಹ್ಮಶ್ರೀ ಕೌಂ ಜೂರು ಚಂದ್ರಶೇಖರ ಅಡಿಗ ವಿರಚಿತ ಭಾಗವತ ಸಂಪ್ರದಾಯ ಎಂಬ ಪುಸ್ತಕ ವನ್ನು ಬಿಡುಗಡೆ ಗೊಳಿಸಲಾಯಿತು. ಮಹಾಯಾಗದ ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಮತ್ತು ಹಿರೇ ಮಹಾಲಿಂಗೇಶ್ಚರ ದೇವಳದ ಆಡಳಿತ ಧರ್ಮದರ್ಶಿ ವೇದಮೂರ್ತಿ ಜಿ.ಗಣೇಶ್ ಭಟ್‌ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಪೋಷಕ ಉದ್ಯಮಿ, ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರನ್ನು ಸನ್ಮಾನಿಸಲಾಯಿತು.

ಶೃಂಗೇರಿ ಮಠದ ಪ್ರಾಂತೀಯ ಧರ್ಮಾಧಿಕಾರಿ ಡಾ.ಎಚ್‌ವಿ ನರಸಿಂಹ ಮೂರ್ತಿ ಆಶಯ ಭಾಷಣ ಮಾಡಿದರು. ಪತ್ರಕರ್ತೆ ಡಾ.ಆರತಿ ವಿ.ಬಿ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ಮಾಜಿ ಶಾಸಕ ರಘುಪತಿ ಭಟ್, ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮತ್ತು ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಶಶಿಧರ್‌ಭಟ್ ಗುಂಡಿಬೈಲು, ಗಾಯಕ ಚಂದ್ರಶೇಖರ ಕೆದ್ಲಾಯ ಉಪಸ್ಥಿತರಿದ್ದರು.
ಶಾಂತಿಮತಿ ಪ್ರತಿಷ್ಠಾನ ಮತ್ತು ಯಾಗ ಸಮಿತಿಯ ಅಧ್ಯಕ್ಷ ಡಾ. ವಿಜಯ್ ಮಂಜರ್ ಅಧ್ಯಕ್ಷತೆ ವಹಿಸಿದ್ದರು. ಶಾಂತೀಮತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಪಿ.ವಿಜಯ ಮಂಜರ್ ಸ್ವಾಗತಿಸಿ ದರು. ಶಿಕ್ಷಕ ರಾಜಾರಾಂ ಐತಾಳ್ ವಂದಿಸಿದರು. ಮಹೇಶ ಭಟ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.