ADVERTISEMENT

ಮಹಿಳಾ ಗೋಷ್ಠಿ- ಪುರುಷ ಕೇಳುಗರು!

ಮೂರು ಗೋಷ್ಠಿ: ಕನ್ನಡ ಸಮ್ಮೇಳನ; ಇಂಗ್ಲಿಷ್ ಮಾತು

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 10:05 IST
Last Updated 7 ಜೂನ್ 2013, 10:05 IST

ಹೆಬ್ರಿ: ಹೆಬ್ರಿಯ ಸಾಹಿತ್ಯ ಸಮ್ಮೇಳನದಲ್ಲಿ ಉದ್ಘಾಟನೆಯ ಬಳಿಕ ಮೂರು ಗೋಷ್ಠಿಗಳು ನಡೆದವು. ಮೊದಲ ಕವಿಗೋಷ್ಠಿ ವಾಚನ ಗಾಯನದಲ್ಲಿ ಕವಿಗಳಾದ ಜ್ಯೋತಿ ಗುರುಪ್ರಸಾದ್,ಉಪ್ಪಂಗಳ ರಾಮ ಭಟ್,ಅತ್ರಾಡಿ ಪೃಥ್ವಿರಾಜ್ ಹೆಗ್ಡೆ,ಅರುಣಾ ಹೆಬ್ರಿ, ಚಂದ್ರ ಹೆಮ್ಮೋಡಿ, ಶೇಷಪ್ಪಯ್ಯ ಹೆಬ್ಬಾರ್ ಅವರ ಕವನವನ್ನು ಕಲಾವಿದ ಚಂದ್ರಶೇಖರ ಕೆದ್ಲಾಯ, ಪಲ್ಲವಿ ತಂಡದವರು ಹಾಡಿದರು. ಸೀತಾನದಿ ವಿಠ್ಠಲ ಶೆಟ್ಟಿ ಸ್ವಾಗತಿಸಿ ಸ್ವಾಗತಿಸಿ ಪಿ.ವಿ.ಆನಂದ ವಂದಿಸಿದರು.

ಎರಡನೇ ಗೋಷ್ಠಿಯಲ್ಲಿ ಉದ್ಯೋಗಸ್ಥ ಮಹಿಳೆಯರ ಸಮಸ್ಯೆ ಕುರಿತು ಚರ್ಚೆ ನಡೆಯಿತು. ಉಪ ಪ್ರಾಂಶುಪಾಲರಾದ ಅಭಿಲಾಷಾ ಸೋಮಯಾಜಿ ಮಾತನಾಡಿ, ಮಹಿಳೆಯರ ಬಗ್ಗೆ ತಾತ್ಸಾರ ಇಂದೂ ಇದೆ. ಕೃಷಿ ಕೂಲಿ ಕಾರ್ಮಿಕ ಮಹಿಳೆಯರಿಗೆ ಸಂಬಳದಲ್ಲಿ ತಾರತಮ್ಯ ನಡೆಯುತ್ತಿದೆ. ಸರ್ಕಾರದ ಪ್ರವಾಸೋದ್ಯಮದ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ವಿಷಾದನಿಯ ಎಂದರು.

ಆದರೆ ಈ ಗೋಷ್ಠಿಯಲ್ಲಿ ಪುರುಷರೇ ಹೆಚ್ಚು ಇದ್ದರು. ಪ್ರಾಂಶುಪಾಲರಾದ ಮಿತ್ರ ಪ್ರಭಾ ಹೆಗ್ಡೆ ಪ್ರತಿಕ್ರಿಯೆ ನೀಡಿದರು. ಹೆಬ್ರಿ ಸ್ನೇಹಾಲತಾ ಟಿಜಿ ಆಚಾರ್ಯ ನಿರೂಪಿಸಿದರು.

ನಗೆಯ ಚಟಾಕಿ: ಮೂರನೇ ಗೋಷ್ಠಿ ಹಾಸ್ಯಕ್ಕೆ ಮೀಸಲಾಗಿತ್ತು. ಕುಂದಾಪುರದ ಸಾಹಿತಿ ಎಎಸ್‌ಎನ್ ಹೆಬ್ಬಾರ್ `ಸಮ್ಮೇಳನ ತಡವಾಗಿದೆ ನಿಮ್ಗೆ ಒಂದು ಸುತ್ತು ಕಮ್ಮಿ, ಮೊನ್ನೆ ನನ್ನ ಮದುವೆಯಾಗಿದೆ ಅಲ್ಲಿಗೆ ನನ್ನ ಕಥೆ ಮುಗಿಯಿತು' ಹೀಗೆ ಹಲವು ಹಾಸ್ಯ ಚಟಾಕಿ ಹಾರಿಸಿ ಬೆರಳೆಣಿಕೆಯಲ್ಲಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೆಲಿಸಿದರು.

ಕುಂದಾಪುರ ನಾರಾಯಣ ಖಾರ್ವಿ ನಿರೂಪಿಸಿದರು. ಕರಾವಳಿಯ ಬಹುರೂಪಿ ಸಂಸ್ಕೃತಿಯ ಕುರಿತು ತುಮಕೂರು ವಿವಿಯ ಸಹಪ್ರಾಧ್ಯಾಪಕ ಸೀತಾನದಿ ಡಾ.ನಿತ್ಯಾನಂದ ಶೆಟ್ಟಿ ನಾಲ್ಕನೇ ಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು. ಅವರ ಉಪನ್ಯಾಸದಲ್ಲಿ ಬಹುತೇಕ ಮಾತುಗಳು ಇಂಗ್ಲಿಷ್‌ನಲ್ಲಿದ್ದು, ಕನ್ನಡ ಸಾಹಿತ್ಯ ಸಮ್ಮೇಳನದ ಕಳೆ ಕುಂದಿಸಿತು. ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರಾದ ಪ್ರೊ.ಎಂ.ಎಲ್.ಸಾಮಗ ಪ್ರತಿಕ್ರಿಯೆ ನೀಡಿದರು. ಮಾತಿಬೆಟ್ಟು ಪ್ರಕಾಶ ಪೂಜಾರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.