ADVERTISEMENT

ಮಾದಕ ವಸ್ತುಗಳಿಂದ ದೂರವಿರಿ: ಸಲಹೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 5:21 IST
Last Updated 29 ಜೂನ್ 2016, 5:21 IST

ಬ್ರಹ್ಮಾವರ: ಇಂದಿನ ಯುವಕರ ಯೋಚ ನಾ ಲಹರಿಯೇ ವಿಭಿನ್ನ. ದಿನದಿಂದ ದಿನಕ್ಕೆ ಭೌತಿಕ ಬೆಳವಣಿಗೆಯಾಗುತ್ತಾ ಬಂದರೂ ನಾನಾ ಕಾರಣಗಳಿಗಾಗಿ ವ್ಯಸನಗಳಿಗೆ ದಾಸರಾಗುತ್ತಿದ್ದಾರೆ ಎಂದು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹೇಶ್ ಐತಾಳ ಹೇಳಿದರು.

ಬ್ರಹ್ಮಾವರ ಸರ್ಕಾರಿ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಸೋಮವಾರ ನಡೆದ ಅಂತರರಾಷ್ಟ್ರೀಯ ಮಾದಕ ವ್ಯಸನ ವಿರೋಧಿ ಜಾಗೃತಿ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ವಿಶೇಷ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಬೆಳೆದ ಪರಿಸರ, ಸಹವಾಸ ದೋಷ, ಕೀಳರಿಮೆ ಹೀಗೆ ಅನೇಕ ಕಾರಣಗಳಿಂದ ಬೇರೆ ಬೇರೆ ಮಾದಕ ವಸ್ತುಗಳು ಅಥವಾ ಮದ್ಯದ ವ್ಯಸನಿಗಳಾಗುತ್ತಿರುವುದು ದುರಾ ದೃಷ್ಟಕರ. ರೋಗ ಬಂದ ಮೇಲೆ ವ್ಯಥೆ ಪಡುವುದಕ್ಕಿಂತ ರೋಗ ಬರದಂತೆ ಎಚ್ಚರ ವಹಿಸುವುದು ಜಾಣತನ ಎಂದು ಹೇಳಿದರು.

ಬ್ರಹ್ಮಾವರ ಸರ್ಕಲ್‌ ಇನ್‌ಸ್ಪೆಕ್ಟರ್‌ ಅರುಣ್ ಕುಮಾರ್ ನಾಯಕ್, ಪಿಎಸ್‌ಐ ಮಧು ಟಿ.ಎಸ್, ಉಪಪ್ರಾಂಶುಪಾಲ ಬಿ.ಟಿ.ನಾಯಕ್, ಉಪನ್ಯಾಸಕರು, ಸಿಬ್ಬಂದಿ ಉಪಸ್ಥಿತರಿದ್ದರು. ಪ್ರಭಾರ ಪ್ರಾಂಶುಪಾಲ ಮಂಜುನಾಥ ಭಟ್, ಎನ್.ಎಸ್.ಎಸ್ ನ ಕಾರ್ಯಕ್ರಮಾ ಧಿಕಾರಿ ಸವಿತಾ ಎರ್ಮಾಳ್ ಇದ್ದರು. ಸಂಗೀತ ಸ್ವಾಗತಿಸಿದರು. ಅಮಿತಾ ಶೆಣೈ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.