ADVERTISEMENT

ಶಿರಿಯಾರ ಗ್ರಾ.ಪಂ: ಅಮಾನತಿಗೆ ನಿರ್ಣಯ

ಉಡುಪಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2016, 9:33 IST
Last Updated 25 ಅಕ್ಟೋಬರ್ 2016, 9:33 IST

ಉಡುಪಿ: ಸಮರ್ಪಕವಾಗಿ ಆಡಳಿತ ನಡೆ ಸದ ಕಾರಣ ನೀಡಿ ಶಿರಿಯಾರ ಗ್ರಾಮ ಪಂಚಾಯಿತಿ ಆಡಳಿತವನ್ನು ಅಮಾನ ತ್‌ನಲ್ಲಿ ಇಡುವಂತೆ ಜಿಲ್ಲಾ ಪಂಚಾಯಿತಿಗೆ ಶಿಫಾರಸು ಮಾಡಲು ಉಡುಪಿ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಶಿರಿಯಾರ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಈಚೆಗೆ ಗ್ರಾಮ ಸಭೆ, ಸಾಮಾನ್ಯ ಸಭೆ ನಡೆದಿಲ್ಲ. ಗ್ರಾಮದ ಯಾವುದೇ ಅಭಿವೃದ್ಧಿ ಕೆಲಸ ನಡೆಯು ತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪ್ರತಾಪ್‌ ಹೆಗ್ಡೆ ಆರೋಪಿಸಿದರು.

ಒಂಬತ್ತು ತಿಂಗಳಿನಿಂದ ಅಂಬೇ ಡ್ಕರ್‌ ಆಶ್ರಯ ಮನೆ ಸೇರಿದಂತೆ ಯಾವುದೇ ನಿವೇಶನ, ಮನೆ ಸೌಲಭ್ಯ ಫಲಾನುಭವಿಗಳಿಗೆ ಸಿಕ್ಕಿಲ್ಲ. ಗ್ರಾಮದ ಅಭಿವೃದ್ಧಿಗೆ ಪೂರಕವಾದ ಕ್ರಿಯಾ ಯೋಜನೆ ಪಟ್ಟಿಯನ್ನೇ ತಯಾರಿಸಿಲ್ಲ. ಸಾರ್ವಜನಿಕರ ಯಾವುದೇ ಸಮಸ್ಯೆಗಳಿಗೆ ಸ್ಪಂದನೆ ಇಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಎರಡೂವರೆ ಎಕರೆ ಜಾಗವಿ ದ್ದರೂ, ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡಿಲ್ಲ. ಅಲ್ಲದೆ, ತಮ್ಮ ಸ್ವಂತ ಜಾಗದಲ್ಲಿಯೇ ಹೊಸ ಮನೆ ನಿರ್ಮಿಸಲು, ಮನೆ ನವೀಕರಣ ಮಾಡಲು ಎನ್‌ಒಸಿ ನೀಡುತ್ತಿಲ್ಲ ಎಂದು ಅವರು ಆರೋಪ ಮಾಡಿದರು.

ಇದಕ್ಕೆ ಉತ್ತರಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ, ಸಿಇಒ ಹಾಗೂ ಜಿಲ್ಲೆಯ ಹಿರಿಯ ಅಧಿಕಾರಗಳ ನಿಯೋಗವು ಈಗಾಗಲೇ ಶಿರಿಯಾರ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿತ್ತು. ಕಳೆದ ತಿಂಗಳ 18ರಂದು ಗ್ರಾಮ ಸಭೆ ನಡೆಸುವಂತೆ ಸೂಚಿಸಲಾಗಿತ್ತು. ಆದರೆ, ಪಂಚಾಯಿತಿ ಸಭೆಯನ್ನು ನಡೆಸಲಿಲ್ಲ. ಇದೇ ತಿಂಗಳ 27ರಂದು ಗ್ರಾಮ ಸಭೆಯನ್ನು ನಡೆಸುತ್ತೇವೆ ಎಂದು ತಿಳಿಸಿದೆ ಎಂದು ಹೇಳಿದರು.

ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರತಾಪ್‌ ಹೆಗ್ಡೆ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಿರ್ಮಲಾ ಎನ್‌. ಶೆಟ್ಟಿ, ಗುಂಡು ಶೆಟ್ಟಿ ಅವರು, 4ನೇ ಗ್ರಾಮ ಸಭೆಯನ್ನು ಇದೇ 27ರಂದು ನಡೆಸು ತ್ತಿರುವುದು ಸರಿಯಲ್ಲ. ಆ ಸಭೆಯೂ ನಡೆಯುವುದು ಅನುಮಾನ. ಆದ್ದರಿಂದ ಗ್ರಾಮದ ಅಭಿವೃದ್ಧಿ ಹಾಗೂ ಜನರ ಹಿತದೃಷ್ಟಿಯಿಂದ ಗ್ರಾಮ ಪಂಚಾಯಿ ತಿಯ ಆಡಳಿತ ವ್ಯವಸ್ಥೆಯನ್ನು ಬರ್ಖಾಸ್ತುಗೊಳಿಸಿ, ಆಡಳಿತಾ ಧಿಕಾರಿಯನ್ನು ನೇಮಕ ಮಾಡಬೇ ಕೆಂದು ಒತ್ತಾಯಿಸಿದರು.

ಪಂಚಾಯಿತಿ ಕಾಯ್ದೆ ಸೆಕ್ಷನ್ 258ರ ಪ್ರಕಾರ ಗ್ರಾಮ ಪಂಚಾಯಿತಿ ತನ್ನ ಅಧಿಕಾರವನ್ನು ಅಸಮರ್ಪಕವಾಗಿ ನಿರ್ವಹಿಸಿದಾಗ, ಕರ್ತವ್ಯ ನಿರ್ವಹ ಣೆಯಲ್ಲಿ ಲೋಪದೋಷ ಕಂಡುಬಂ ದಂತಹ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿಯ ಶಿಫಾರಸಿನಂತೆ ಜಿಲ್ಲಾ ಪಂಚಾಯಿತಿಗೆ ಬರ್ಖಾಸ್ತುಗೊಳಿಸುವ ಅಧಿಕಾರವಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಸ್ವಲ್ಪ ಕಾಲವಕಾಶ ನೀಡುವ ಬಗ್ಗೆ ಅಭಿಪ್ರಾಯ ಮಂಡಿಸಿದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸದಸ್ಯರು ಗ್ರಾಮ ಪಂಚಾಯಿತಿಯನ್ನು ಕೂಡಲೇ ಬರ್ಖಾಸ್ತುಗೊಳಿಸಲು ನಿರ್ಣಯ ಮಾಡಬೇಕೆಂದು ಪಟ್ಟು ಹಿಡಿದ ಕಾರಣ ನಿರ್ಣಯ ಮಾಡಲಾಯಿತು.

ಫಲಿಮಾರು ಪಂಚಾಯಿತಿ ವ್ಯಾಪ್ತಿ ಯಲ್ಲಿ 29 ಎಕರೆ ಸರ್ಕಾರಿ ಜಾಗವಿದೆ. ನಂದಿಕೂರು ಅಡ್ವೆಯಲ್ಲಿ ಮನೆ ನಿವೇಶ ನಕ್ಕಾಗಿ 10 ಎಕರೆ ಜಾಗವನ್ನು ಗುರುತಿ ಸಲಾಗಿದ್ದು, ಕುಮ್ಕಿ ಭೂಮಿ ಸಮಸ್ಯೆ ಇದೆ. ಇದಕ್ಕೆ ಅರಣ್ಯ ಇಲಾಖೆ ನಿರಪೇಕ್ಷಣಾ ಪತ್ರ ಕೇಳುತ್ತಿದ್ದು, ಈ ಜಾಗ ಅರಣ್ಯ ಇಲಾಖೆಗೆ ಸೇರಿಲ್ಲ ಎಂಬ ಬಗ್ಗೆ ಕಂದಾ ಯ ಇಲಾಖೆಯಿಂದ ನಿರಪೇಕ್ಷಣಾ ಪತ್ರ ಕೊಡಿಸುವಂತೆ ಸದಸ್ಯ ದಿನೇಶ್‌ ಕೋ ಟ್ಯಾನ್‌ ಆಗ್ರಹಿಸಿದರು.

ಈ ಸಮಸ್ಯೆಯನ್ನು ಕೂಡಲೇ ನಿವಾರಿಸುವಂತೆ ಈಗಾಗಲೇ ಜಿಲ್ಲಾಧಿ ಕಾರಿಗಳಿಗೆ ಮನವಿ ಮಾಡ ಲಾಗಿದೆ ಎಂದು ತಹಶೀಲ್ದಾರ್‌ ಮಹೇಶ್ಚಂದ್ರ ತಿಳಿಸಿದರು. 
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.