ADVERTISEMENT

‘ಸಂಘ– ಸಂಸ್ಥೆಗಳಿಗೆ ಮೂಲ ಸಿದ್ಧಾಂತ ಅಗತ್ಯ’

​ಪ್ರಜಾವಾಣಿ ವಾರ್ತೆ
Published 6 ಜುಲೈ 2017, 7:43 IST
Last Updated 6 ಜುಲೈ 2017, 7:43 IST

ಬೈಂದೂರು: ಸಂಘ ಸಂಸ್ಥೆಗಳು ತಮ್ಮ ಮೂಲ ಸಿದ್ಧಾಂತಕ್ಕೆ ಬದ್ಧವಾಗಿದ್ದು ಕೊಂಡು ಕಾಲಕ್ಕೆ ತಕ್ಕಂತೆ ಕಾರ್ಯ ಚಟುವಟಿಕೆಗಳಲ್ಲಿ ಅಗತ್ಯ ಮಾರ್ಪಾಡು ಮಾಡಿಕೊಂಡು ಸಾಗಬೇಕು. ಹಾಗಾದಾಗ ಸಂಸ್ಥೆ ಬೆಳೆಯಲು ಸಾಧ್ಯ ಎಂದು ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಭಾಸ್ಕರ್ ಖಾರ್ವಿ ಅಭಿಪ್ರಾಯಪಟ್ಟರು.

ಇಲ್ಲಿನ ಶಾರದಾ ಮಂಟಪದಲ್ಲಿ ನಡೆದ ಗಂಗೊಳ್ಳಿ ಸಮುದಾಯ ಹಿತರ ಕ್ಷಣಾ ಸಮಿತಿ ದ್ವಿತೀಯ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಿತಿಯ ಕಳೆದ ವರ್ಷದ ಆಯವ್ಯಯ ಪಟ್ಟಿಯನ್ನು ಮಂಡಿಸಿ, ಅನುಮೋದನೆ ಪಡೆಯಲಾಯಿತು.

ಮುಂದಿನ ಎರಡು ವರುಷಗಳ ಅವಧಿಗೆ ನಡೆದ ಪದಾಧಿಕಾರಿಗಳ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಭಾಸ್ಕರ್ ಖಾರ್ವಿ ಅವಿರೋಧವಾಗಿ ಮರು ಆಯ್ಕೆ ಯಾದರು. ಸಮಿತಿ ಉಪಾಧ್ಯಕ್ಷರಾಗಿ ರಾಮಚಂದ್ರ ಖಾರ್ವಿ, ಪ್ರಧಾನ ಕಾರ್ಯ ದರ್ಶಿ ಜಯರಾಮ ದೇವಾಡಿಗ, ಕೋಶಾ ಧಿಕಾರಿ ರಾಘವೇಂದ್ರ ದೇವಾಡಿಗ ಎಸ್,  ಕಾರ್ಯದರ್ಶಿ ಗುರುರಾಜ್ ದೇವಾ ಡಿಗ, ಜತೆ ಕಾರ್ಯ ದರ್ಶಿ ಸಂತೋಷ ಖಾರ್ವಿ ಮತ್ತು ಜತೆ ಕೋಶಾಧಿಕಾರಿ ಜಗದೀಶ ಖಾರ್ವಿ, ಸಾಂಸ್ಕೃತಿಕ ಕಾರ್ಯದರ್ಶಿ ಸತೀಶ್ ಖಾರ್ವಿ, ಕ್ರೀಡಾ ಕಾರ್ಯದರ್ಶಿ ಯಾಗಿ ಲಕ್ಷ್ಮಣ  ಡಿ. ಆಯ್ಕೆಯಾದರು.

ADVERTISEMENT

ಸಮಿತಿ ಗೌರವಾಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ನೂತನ ಪದಾಧಿ ಕಾರಿಗಳಿಗೆ ಶುಭ ಹಾರೈಸಿದರು. ರಾಮ ದಾಸ ಖಾರ್ವಿ ಪ್ರಾಸ್ತಾವಿಕ  ಮಾತನಾಡಿ ದರು. ಜಯರಾಮ ದೇವಾ ಡಿಗ ನಿರೂಪಿ ಸಿದರು. ರಾಘವೇಂದ್ರ ದೇವಾಡಿಗ ವಂದಿಸಿದರು. ವೆಂಕಟೇಶ ಖಾರ್ವಿ, ನರೇಂದ್ರ ಎಸ್. ಗಂಗೊಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.