ADVERTISEMENT

ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ಆದ್ಯತೆ

ಐದನೇ ಪರ್ಯಾಯ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಪೇಜಾವರ ಶ್ರೀ ಪ್ರಕಟ

​ಪ್ರಜಾವಾಣಿ ವಾರ್ತೆ
Published 19 ಜುಲೈ 2015, 6:43 IST
Last Updated 19 ಜುಲೈ 2015, 6:43 IST

ಉಡುಪಿ: ‘ಐದನೇ ಪರ್ಯಾಯದ ಎರಡು ವರ್ಷದ ಅವಧಿಯಲ್ಲಿ ಸಾಮಾ ಜಿಕ, ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗು ವುದು’ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಉಡುಪಿ ನಗರದಲ್ಲಿ ಶನಿವಾರ ನಡೆದ ಪರ್ಯಾಯ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಮಾತನಾ ಡಿದ ಅವರು, ಪರ್ಯಾಯದ ಬಗ್ಗೆ ಜನರು ಅಪಾರ ನಿರೀಕ್ಷೆ  ಹೊಂದಿರು ವುದ ರಿಂದ ಸ್ವಲ್ಪ ಭಯ ಇದೆ. ಆದರೆ ಕೃಷ್ಣನ ಅನುಗ್ರಹ ಹಾಗೂ ಎಲ್ಲರ ಸಹ ಕಾರ ದಿಂದ ಒಳ್ಳೆಯ ಕೆಲಸ ಮಾಡುವ ಧೈರ್ಯ ಇದೆ. ಸಮಾಜ ಕಲ್ಯಾಣ ಕಾರ್ಯಕ್ರಮಗ ಳನ್ನು ಜಾರಿಗೊಳಿಸಲಾ ಗುವುದು. ಧರ್ಮ ಮತ್ತು ಆಧ್ಯಾತ್ಮಿಕತೆಯ ಪ್ರಚಾರ ಕಾರ್ಯ ಹೆಚ್ಚಾಗಿ ನಡೆಯಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

ಉಡುಪಿಗೆ ಭೇಟಿ ನೀಡುವ ಯಾತ್ರಿಕ ರಿಗೆ ಯಾವುದೇ ರೀತಿಯಿಂದಲೂ ತೊಂದರೆ ಆಗದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುವುದು. ವಸತಿ, ಭೋಜನ, ಸ್ನಾನಕ್ಕೆ ಸೌಕರ್ಯ ಒದಗಿಸಿ ಕೊಡಲಾಗುವುದು. ಅಲ್ಲದೆ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗುವುದು. ಪಾಜಕ ಕ್ಷೇತ್ರದಲ್ಲಿರುವ 45 ಎಕರೆ ಜಮೀ ನಿನಲ್ಲಿ ವಸತಿ ಸಹಿತ ದೊಡ್ಡ ವಿದ್ಯಾಕೇಂದ್ರ ವನ್ನು ಆರಂಭಿಸಲಾಗುತ್ತದೆ. ಅಲ್ಲಿ ಪ್ರಾಥ ಮಿಕ ಶಿಕ್ಷಣದಿಂದ ಆರಂಭಿಸಿ ಉನ್ನತ ಶಿಕ್ಷಣವನ್ನೂ ನೀಡಲಾಗುವುದು. ಲೌಕಿಕ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ಧಾರ್ಮಿಕ ಶಿಕ್ಷಣ ನೀಡುವ ಯೋಚನೆ ಇದೆ ಎಂದು ಹೇಳಿದರು.

ಪರ್ಯಾಯ ದರ್ಬಾರ್‌ ಸ್ಥಳ ಬದಲಾವಣೆಗೆ ಸಂಬಂಧಿಸಿದಂತೆ ಹಲವ ರಿಂದ ಸಲಹೆ ಬಂದ ಕಾರಣ ಪ್ರತಿಕ್ರಿ ಯಿಸಿದ ಸ್ವಾಮೀಜಿ, ಅಷ್ಟಮಠಾ ಧೀಶ ರೊಂದಿಗೆ ಸಮಾಲೋಚನೆ ನಡೆಸಿ ಪರ್ಯಾಯ ದರ್ಬಾರ್‌ ಸ್ಥಳ ಬದಲಾವಣೆ ಮಾಡುವ ಕುರಿತು ತೀರ್ಮಾನ ಮಾಡಲಾ ಗುವುದು ಎಂದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಪೇಜಾವರ ಶ್ರೀಗಳ ಪರ್ಯಾಯ ಯಶಸ್ವಿ ಯಾಗಿ ನಡೆಯಲು ತನು, ಮನ, ಧನದ ಸಹಕಾರ ನೀಡಲಾಗುವುದು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜ ನೆಯ ಸದಸ್ಯರು ಸಹ ಸೇವಾ ಕಾರ್ಯದಲ್ಲಿ ತೊಡಗುವರು. 2 ವರ್ಷದ ಪರ್ಯಾಯ ಸಾಮರಸ್ಯ, ಸಹ ಭಾಳ್ವೆಯ ಸಂದೇಶ ವನ್ನು ನೀಡಲಿ ಎಂದು ಹಾರೈಸಿದರು. ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಪರ್ಯಾಯ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸರ್ಕಾರದ ವತಿಯಿಂದ ಎಲ್ಲ ರೀತಿ ಸಹಕಾರ ನೀಡಲಾಗುವುದು. ಎಲ್ಲ ಇಲಾಖೆಗಳ ಸಹಭಾಗಿತ್ವದಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

‘ಹಿಂದಿನ ಪರ್ಯಾಯಕ್ಕೆ ಸರ್ಕಾರ ದಾಖಲೆಯ ₨3 ಕೋಟಿ  ಹಣ ಬಿಡುಗಡೆ ಮಾಡಿತ್ತು. ಈ ಬಾರಿ ₨10 ಕೋಟಿ ನೀಡುವಂತೆ ಉಸ್ತುವಾರಿ ಸಚಿವರ ನೇತೃ ತ್ವದಲ್ಲಿ ಮನವಿ ಮಾಡಲಾಗುವುದು’ ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದರು. ಸಂಸದೆ ಶೋಭಾ ಕರಂದ್ಲಾಜೆ, ವಿಧಾನಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಇದ್ದರು.

ಜನರ ಸೇವೆ ಮಾಡಲು ಕೃಷ್ಣನೇ ನನಗೆ ಪ್ರೇರಣೆ. ಕೃಷ್ಣನ ಪೂಜೆ ಮಾತ್ರವಲ್ಲ. ಭಕ್ತರ ಹೃದಯದಲ್ಲಿಯೂ ಶ್ರೀಕೃಷ್ಣನನ್ನು ಕಂಡು ಅವರ ಸೇವೆಯನ್ನು ಮಾಡಲಾಗುವುದು.  -ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT