ADVERTISEMENT

‘ಹಸಿರಿನಿಂದ ಸಮೃದ್ಧ ಜೀವನ’

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 6:19 IST
Last Updated 4 ಮಾರ್ಚ್ 2017, 6:19 IST

ಬ್ರಹ್ಮಾವರ: ಅರಣ್ಯ ಹಚ್ಚ ಹಸಿರಾದ ಪ್ರದೇಶ. ಅಲ್ಲಿನ ಪ್ರಾಣಿ, ಪಕ್ಷಿ ಮತ್ತು  ಮರಗಿಡಗಳಿಂದ ಹೆಚ್ಚಿನ ಅನಂದ ಸಿಗುತ್ತದೆಯಲ್ಲದೇ, ಸುತ್ತಮುತ್ತ ಕಾಡಿದ್ದು ಅಲ್ಲಿ ಕೃಷಿಕರು, ಜನರು ವಾಸಿಸಿದರೆ ಅವರಿಗೆ ಯಾವುದೇ ರೋಗ– ರುಜಿನಗಳು ಬರುವುದಿಲ್ಲ. ಅಂತಹ ವಾತಾವರಣ ಇಲ್ಲಿನ ಗಿಡಮರಗಳಿಂದ ಸಿಗುತ್ತದೆ ಎಂದು ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹವಿಸ್ತರಣಾ ನಿರ್ದೇಶಕ ಡಾ. ಯು.ಎಸ್. ಪಾಟೀಲ್ ಹೇಳಿದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಮಚ್ಚೆಟ್ಟು ಮತ್ತು ಅಮಾಸೆಬೈಲು ಗ್ರಾಮ ಅರಣ್ಯ ಸಮಿತಿ ಸದಸ್ಯರಿಗೆ ಸಮಗ್ರ ಕೃಷಿ ಪದ್ಧತಿ ಹಾಗೂ ಲಾಭದಾಯಕ ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.

ಅಮಾಸೆಬೈಲಿನ ಪಶ್ಚಿಮಘಟ್ಟದ ಗಿಡ ಮರಗಳ ಬಗ್ಗೆ ಪರಿಚಯವಿದೆ. ಆದರೆ ಸಂಶೋಧನೆಯಾಗಿಲ್ಲ. ಅದುದ ರಿಂದ ಅರಣ್ಯವನ್ನು ಉಳಿಸುವುದು, ಪ್ರಾಣಿ ಪಕ್ಷಿಗಳನ್ನು ರಕ್ಷಿಸುವುದು ನಮ್ಮ ಕೃಷಿಕರ ಕರ್ತವ್ಯವಾಗಿದೆ ಎಂದು ತಿಳಿಸಿದರು. 

ಕೃಷಿ ವಿಜ್ಞಾನ ಕೇಂದ್ರದ ಕಾರ್ಯ ಕ್ರಮ ಸಂಯೋಜಕ ಡಾ.ಧನಂಜಯ ಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಅರಣ್ಯ ಪ್ರದೇಶದ ಸಮೀಪವಿರುವ ಗ್ರಾಮ ಗಳಲ್ಲಿ ಗ್ರಾಮಸ್ಥರು ಜೇನು ಸಾಕಾಣಿಕೆ ಪದ್ದತಿಯನ್ನು ಕೈಗೊಂಡರೆ ಉತ್ತಮವಾದ ಜೇನುಕೃಷಿಕರಾಗ ಬಹುದು ಎಂದರು.

ಅಮಾಸೆಬೈಲು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ವಿಠ್ಠಲ್ ಶೆಟ್ಟಿ, ಸದಸ್ಯೆ ಶಕುಂತಲಾ ಪಿ. ನಾಯಕ್ ಇದ್ದರು. ಚೈತನ್ಯ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಸಂಜೀವ್ ಕ್ಯಾತಪ್ಪನವರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.