ADVERTISEMENT

ಹೊಸ ತಾಲ್ಲೂಕು ರಚನೆ: ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 6:19 IST
Last Updated 15 ಜುಲೈ 2017, 6:19 IST

ಉಡುಪಿ: ಈಗಾಗಲೇ ಘೋಷಣೆ ಆಗಿರುವ ಬ್ರಹ್ಮಾವರ, ಬೈಂದೂರು ಹಾಗೂ ಕಾಪು ಹೊಸ ತಾಲ್ಲೂಕು ರಚನೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಯಿತು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಚಂದ್ರ ಶೆಟ್ಟಿ, ಕೋಟಾ ಶ್ರೀನಿವಾಸ ಪೂಜಾರಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
‘ತಾಲ್ಲೂಕುಗಳಿಗೆ ಗ್ರಾಮಗಳನ್ನು ಸೇರ್ಪಡೆ ಮಾಡಿಕೊಳ್ಳುವ ಮೊದಲು ಗ್ರಾಮಸಭೆ ನಡೆಸಿ, ತಾಲ್ಲೂಕು  ರಚನೆ ಸಂಬಂಧ ಹೊರಡಿಸಿರುವ ಎಲ್ಲ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿ’ ಎಂದು ಅವರು ಸಲಹೆ ನೀಡಿದರು. ‘ಗ್ರಾಮಗಳ ಸೇರ್ಪಡೆ ವೇಳೆ ಗಡಿ ಗ್ರಾಮಗಳ ಜನರ ಅಭಿಪ್ರಾಯಕ್ಕೂ ಪ್ರಾಮ್ಯುಖ ನೀಡಿ’ ಎಂದು ಅವರು ಒತ್ತಾಯಿಸಿದರು.

ವಿಶೇಷ ಗ್ರಾಮಸಭೆ ನಡೆಸಿ ನಡಾವಳಿ ಕಳುಹಿಸಲು ಜಿಲ್ಲಾಧಿಕಾರಿ ಸೂಚಿಸಿದರು. ತಾಲ್ಲೂಕು  ಕಚೇರಿಗಳನ್ನು ಒಳಗೊಂಡಂತೆ ಅಗತ್ಯವಾಗಿ ಬೇಕಾಗುವ ಮೂಲ ಸೌಕರ್ಯ ಕಲ್ಪಿಸಲು ಜಾಗ ಮತ್ತು ಸಿಬ್ಬಂದಿ ಮಾಹಿತಿ ನೀಡಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಅನುರಾಧ, ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.