ADVERTISEMENT

‘ಜಾಗೃತಿ ಮೂಡಿಸುವ ಧಾರಾವಾಹಿಗಳು ಬರಲಿ’

ಕಾಲ ಕನ್ನಡ ಮೆಗಾ ಧಾರಾವಾಹಿಗೆ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 11:28 IST
Last Updated 5 ಮಾರ್ಚ್ 2015, 11:28 IST

ಶಿರ್ವ: ಮಾಧ್ಯಮಗಳು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು ಜೊತೆಗೆ ಸಮಾಜದ ಜನರಲ್ಲಿ ಸಾಮಾಜಿಕ ಜಾಗೃತಿಯನ್ನು ಮೂಡಿಸುವಂತಹ ಕಥಾಹಂದರವನ್ನು ಹೊಂದಿರುವ ಧಾರಾವಾಹಿಗಳನ್ನು ದೂರದರ್ಶನ ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಪ್ರಸಾರ ಮಾಡುವಂತಾಗಬೇಕು ಎಂದು ಕುಂತಳ ನಗರ ಚರ್ಚ್ ಧರ್ಮಗುರು ರೆ.ಫಾ. ಡೆನಿಸ್ ಡೆಸಾ ತಿಳಿಸಿದ್ದಾರೆ.

ದಿಶಾ ಕಮ್ಯೂನಿಕೇಶನ್ಸ್ ಮತ್ತು ಕೆ.ಕೆ. ಪ್ರೊಡಕ್ಷನ್ಸ್ ನಿರ್ಮಾಣದ ‘ಕಾಲ’ ಕನ್ನಡ ಮೆಗಾ ಧಾರಾವಾಹಿಯ ಮುಹೂರ್ತ ಸಮಾರಂಭವನ್ನು ಮೂಡುಬೆಳ್ಳೆ  ನೆಲ್ಲಿಕಟ್ಟೆ ಜ್ಞಾನ ಗಂಗಾ ಪದವಿಪೂರ್ವ ಕಾಲೇಜಿನ ಸಭಾಂಗಣ ದಲ್ಲಿ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ನೆಲ್ಲಿಕಟ್ಟೆ ಜ್ಞಾನ ಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಯು.ಎಲ್.ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ಪರಿಸ್ಥಿತಿಯಲ್ಲಿ ಬದುಕುವ ಜನ ಸಾಮಾನ್ಯರ ಬದುಕನ್ನು ಪ್ರತಿಬಿಂಬಿಸುವ ಕಾಲ ಧಾರಾವಾಹಿಯಲ್ಲಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಪ್ರಯತ್ನ ಮಾಡಲಾಗಿದೆ ಎಂದರು. ಛಾಯಾ ಗ್ರಾಹಕ ಪ್ರಸಾದ್ ಜತ್ತನ್ ಕೆಮರಾ ಚಾಲನೆ ಮಾಡಿದರು.

ಉಡುಪಿ ಜನರಲ್ ಇನ್ಸೂರೆನ್ಸ್ ಎಂಪ್ಲಾಯಿಸ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಸುರೇಶ್ ಶೆಟ್ಟಿ, ಆಡಳಿತ ನಿರ್ದೇಶಕ ಪ್ರಭಾಕರ್ ಕೆ.ಎಸ್., ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಪ್ರಸಾದ್ ಜತ್ತನ್, ಉಡುಪಿ ಪ್ರೈಮ್ ಟಿ.ವಿ. ಮುಖ್ಯಸ್ಥ ದಿನೇಶ್ ಕಿಣಿ, ನಿರ್ದೇಶಕ ರೂಪೇಶ್ ವಿ.ಕಲ್ಮಾಡಿ, ಮೂಡುಬೆಳ್ಳೆ ಕೆ.ಕೆ.ಪ್ರೊಡಕ್ಷನ್ಸ್ ನಿರ್ಮಾಪಕ ಅನಿಲ್ ಆಲ್ವ, ಸಹನಿರ್ಮಾಪಕಿ ಅನಿತಾ ಆಳ್ವ, ನೆಲ್ಲಿಕಟ್ಟೆ ಜ್ಞಾನ ಗಂಗಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ, ಧಾರಾ ವಾಹಿಯ ಕತೆಗಾರ್ತಿ ಲೀನಾ ನಾಯ್ಕ್, ಛಾಯಾಗ್ರಾಹಕ ಜೇಸನ್ ಡಿಸೋಜ, ಸಹನಿರ್ದೇಶಕ ದೀಪಕ್ ಬೀರ ಪಡುಬಿದ್ರಿ, ಸಂಗೀತ ನಿರ್ದೇಶಕ ರೋಹಿತ್ ಮಲ್ಪೆ ಉಪಸ್ಥಿತರಿದ್ದರು.

ಧಾರಾವಾಹಿಯ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿ ದರು. ಲೀನಾ ನಾಯ್ಕ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ರಾಘವೇಂದ್ರ ಸೇರಿ ಗಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರಭಾಕರ್ ಆಚಾರ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.