ADVERTISEMENT

16 ಎಂಡೋಸಲ್ಫಾನ್ ಪ್ರಕರಣ

ಶಿವಪುರ ಗ್ರಾಮಸಭೆಯಲ್ಲಿ ಮಾಹಿತಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 7:29 IST
Last Updated 17 ಜುಲೈ 2017, 7:29 IST

ಶಿವಪುರ(ಉಡುಪಿ ಜಿಲ್ಲೆ): ‘ಶಿವಪುರ ಗ್ರಾಮದ 16 ಮಕ್ಕಳು ಎಂಡೋ ಸಲ್ಫಾನ್ ಸಮಸ್ಯೆಯಿಂದ ಬಳಲುತ್ತಿದ್ದು, ವಾಟರ್‍ಬೆಡ್ ವಿತರಣೆ ಮಾಡಲಾಗಿದೆ’ ಎಂದು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಚಿದಾನಂದ ಸ್ವಾಮಿ ತಿಳಿಸಿದರು.

ಶನಿವಾರ ನಡೆದ ಶಿವಪುರ ಗ್ರಾಮ ಪಂಚಾಯಿತಿಯ ಗ್ರಾಮಸಭೆಯಲ್ಲಿ ಅವರು ಈ ಮಾಹಿತಿ ನೀಡಿ, ಈಚೆಗೆ ಡೆಂಗಿ ಜ್ವರದ ಪ್ರಕರಣಗಳು ಕಂಡು ಬರುತ್ತಿದ್ದು ಸ್ವಚ್ಛತೆ ಕಾಪಾಡಿ’ ಎಂದರು.

‘ಕಾರ್ಕಳ ತಾಲ್ಲೂಕಿನಲ್ಲಿರುವ ಸುಮಾರು 7800 ಎಕರೆ ಡೀಮ್ಡ್ ಫಾರೆಸ್ಟ್ ಪ್ರದೇಶವನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸುವ ನಿಟ್ಟಿ ನಲ್ಲಿ ಅಫಿದವಿತ್ ಸಲ್ಲಿಸಲಾಗಿದೆ’ ಕಾರ್ಕಳ ತಹಶೀಲ್ದಾರ್ ಟಿ.ಜೆ.ಗುರುಪ್ರಸಾದ್ ತಿಳಿಸಿದರು. ‘ಶಿವಪುರದಲ್ಲಿ ಘನತ್ಯಾಜ್ಯ ವಿಲೇವಾರಿಗೆ 1 ಎಕರೆ ಸ್ಥಳ ಮೀಸಲಿರಿ ಸಿದ್ದು, ಗ್ರಾಮದ ಸಮಸ್ಯೆಗಳನ್ನು ಸ್ಥಳದಲ್ಲಿ ನಿವಾರಿಸಲು ಕಂದಾಯ ಅದಾಲತ್ನಡೆ ಸಲಾಗುವುದು’ ಎಂದು ಸಭೆಗೆ ತಿಳಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಂಧಿ ಎಸ್. ನಾಯ್ಕ್  ಗ್ರಾಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೋಡೆಲ್ ಅಧಿಕಾರಿಯಾಗಿ ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಚಂದ್ರಕಾಂತ್ ಇದ್ದರು. ಕೃಷಿ ಇಲಾಖೆ, ತೋಟಗಾರಿಕಾ, ಪೊಲೀಸ್, ಕಂದಾಯ, ಮೆಸ್ಕಾಂ, ಶಿಕ್ಷಣ, ಆರೋಗ್ಯ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆಯ ಅಧಿ ಕಾರಿಗಳು ಇಲಾಖಾ ಮಾಹಿತಿ ನೀಡಿ ದರು.

ಅಧಿಕಾರಿ ಕೆ. ಪಾಂಡುರಂಗ ರಾಜೀವಗಾಂಧಿ ಚೈತನ್ಯ ಯೋಜನೆ ಕುರಿತು ಮಾತನಾಡಿ, ‘ನಿರುದ್ಯೋಗಿ ಯುವಕರಿಗೆ ಕೌಶಲ ತರಬೇತಿ ಮೂಲಕ ಉದ್ಯೋಗ ತರಬೇತಿ ನೀಡಲಾಗು ವುದು’ ಎಂದರು.

ಶಿವಪುರ ಗ್ರಾಮದ ಖಜಾನೆ ಪರಿಸರದಲ್ಲಿ ಮಿನಿ ಅಂಗನವಾಡಿ ಕೇಂದ್ರದ ಬೇಡಿಕೆಯನ್ನು ಪ್ರಸ್ತಾಪಿ ಸಲಾಯಿತು. 

ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ್ ಪೂಜಾರಿ, ಉಪಾಧ್ಯಕ್ಷ ಸಾಧು ಪೂಜಾರಿ, ತಾಲ್ಲೂಕು ಪಂಚಾ ಯಿತಿ ಸದಸ್ಯ ರಮೇಶ್ ಕುಮಾರ್, ಅಭಿವೃದ್ಧಿ ಅಧಿಕಾರಿ ಶೋಭಾವತಿ ಶೆಟ್ಟಿ, ಪಂಚಾಯಿತಿ ಸದಸ್ಯ ಹುಣ್ಸೆದಡಿ ಸುರೇಶ್ ಶೆಟ್ಟಿ, ಸಿಬ್ಬಂದಿ ಲತಾ ಎಸ್.  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.