ADVERTISEMENT

‘ಇತಿಹಾಸದಿಂದ ಬದುಕಿಗೆ ತಿಳಿವಳಿಕೆ’

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 8:58 IST
Last Updated 21 ಏಪ್ರಿಲ್ 2017, 8:58 IST

ಸಿದ್ದಾಪುರ: ನಾವು ಇತಿಹಾಸವನ್ನು ತಿಳಿದುಕೊಳ್ಳುವುದರ ಜೊತೆಗೆ ನಮ್ಮ  ಬದುಕಿಗೆ ಬೇಕಾಗುವ ಅಂಶಗಳನ್ನು ಅದರಿಂದ ಅಳವಡಿಸಿಕೊಳ್ಳಬೇಕು ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಚಾರ್ಟರ್ಡ್ ಅಕೌಂಟೆಂಟ್ ಹಾಗೂ ಕಂಪೆನಿ ಸೆಕ್ರೆಟರಿಯ ರಾಷ್ಟ್ರೀಯ ಪರಿಷತ್ತಿನ ಸದಸ್ಯ ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ಅವರ ಷಷ್ಟ್ಯಬ್ದಿಯ ಅಂಗವಾಗಿ  ಹುಕ್ಲಮಕ್ಕಿಯ ರಂಗವೈಭವದ ಆಶ್ರಯದಲ್ಲಿ ತಾಲ್ಲೂಕಿನ ಗಾಳೀಜಡ್ಡಿ ಶಾಲೆಯ ಆವರಣದಲ್ಲಿ ಬುಧವಾರ ರಾತ್ರಿ ಏರ್ಪಡಿಸಿದ್ದ ‘ಗೋಪಣ್ಣಯ್ಯ ಬದುಕು-ಬೆಳಕು’ ಪುಸ್ತಕ ಬಿಡುಗಡೆ ಕಾರ್ಯಕ್ರಮದ  ಸಾನ್ನಿಧ್ಯವಹಿಸಿ  ಮಾತನಾಡಿದರು.

ದೇಶದ ಸ್ವಾತಂತ್ರ್ಯ ಪೂರ್ವದ ಇತಿಹಾಸಕ್ಕಿಂತ  ಸ್ವಾತಂತ್ರ್ಯಾನಂತರದ ಇತಿಹಾಸ  ಭಯಾನಕವಾಗಿದೆ ಎಂದರು.ಸಂಸದ ಅನಂತಕುಮಾರ್ ಹೆಗಡೆ ಮಾತನಾಡಿ, ಹಳ್ಳಿಯ ಬದುಕು ಮಹತ್ವ ಹೊಂದಿದೆ. ಹಳ್ಳಿಯ ಬದುಕಿನಲ್ಲಿ ಸಾತ್ವಿಕ ಆಚರಣೆ ಇದ್ದು, ಅವುಗಳು ಇಂದು ಮರೆಯಾಗುತ್ತಿವೆ ಎಂದರು.ಸ್ಥಳೀಯ ಗಣ್ಯರಾದ ಕಮಲಾಕರ ಹೆಗಡೆ ಹುಕ್ಲಮಕ್ಕಿ ಅಧ್ಯಕ್ಷತೆ ವಹಿಸಿದ್ದರು. ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ಮಾತನಾಡಿದರು. ಕೃತಿಕಾರ ಡಾ. ಶ್ರೀಪಾದ  ಹೆಗಡೆ ಹುಕ್ಲಮಕ್ಕಿ ಪುಸ್ತಕದ ಕುರಿತು ವಿವರಣೆ ನೀಡಿದರು. ವಿದ್ವಾಂಸ ಚಂದ್ರಶೇಖರ ಭಟ್ಟ ಗಾಳೀಮನೆ, ಹಿರಿಯ ಸಾಹಿತಿ ಆರ್.ಪಿ.ಹೆಗಡೆ, ಗೋಪಾಲಕೃಷ್ಣ ಹೆಗಡೆ ಕುಮಟಾ, ಶ್ರೀನಿವಾಸ ಬೆಂಗಳೂರು  ಇದ್ದರು.

ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರಮನೆ ಅವರನ್ನು ಸನ್ಮಾನಿಸಲಾಯಿತು. ಎಂ.ಸಿ.ಭಟ್ಟ ಹಿರೇಕೈ ಸ್ವಾಗತಿಸಿದರು.ಮಂಜುನಾಥ ಹೆಗಡೆ ಕಾನಸೂರು ವಂದಿಸಿದರು. ವಿನಾಯಕ ಭಟ್ಟ ಗಾಳೀಮನೆ ನಿರೂಪಿಸಿದರು.  ನಂತರ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಲಾವಿದರಿಂದ ‘ಸುಧನ್ವ ಕಾಳಗ’ ಯಕ್ಷಗಾನ                       ಪ್ರದರ್ಶನಗೊಂಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.