ADVERTISEMENT

ಉಡಚಮ್ಮ, ದೇಮವ್ವ ಜಾತ್ರಾ ಉತ್ಸವ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 9:01 IST
Last Updated 21 ಏಪ್ರಿಲ್ 2017, 9:01 IST

ಹಳಿಯಾಳ: 24 ವರ್ಷಗಳ ನಂತರ ಪಟ್ಟಣದಲ್ಲಿ ನಡೆಯುತ್ತಿರುವ ಗ್ರಾಮ ದೇವಿ ಉಡಚಮ್ಮ ಹಾಗೂ ಲಕ್ಷ್ಮೀ ದೇಮವ್ವ ದೇವಿಯ ಜಾತ್ರಾ ಉತ್ಸವ ಶುಕ್ರವಾರ ಸಂಜೆ 9 ಗಂಟೆಯವರೆಗೆ ನಡೆದು, ನಂತರ ದೇಮವ್ವ ದೇವಿಯನ್ನು ಸೀಮೆಗೆ ಕಳುಹಿಸಲಾಗುವುದು.ಏಪ್ರಿಲ್ 7 ರಿಂದ ಪ್ರಾರಂಭವಾದ ಗ್ರಾಮದೇವಿ ಜಾತ್ರಾ ಉತ್ಸವ 12 ರಿಂದ 16ರ ವರೆಗೆ ಪಟ್ಟಣದ ವಿವಿಧ ಬಡಾವ ಣೆಗಳಲ್ಲಿ  ದೇವಿಯ  ಹೊನ್ನಾಟ ನಡೆದು, 17 ರಂದು ಅದ್ಧೂರಿಯಾಗಿ ರಥೋತ್ಸವ ನಡೆಯಿತು.

ಜಾತ್ರಾ ಗದ್ದುಗೆಯಲ್ಲಿ ಕೂಡ್ರಿಸ ಲಾಗಿರುವ ದೇವಿಗೆ ದಿನಂಪ್ರತಿ  ಸಹ ಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬಂದು ಉಡಿ ತುಂಬುವುದು ನಿರಂತರವಾಗಿ ಸಾಗಿದೆ. ಹಲವಾರು ವಾದ್ಯ ಮೇಳ ದೊಂದಿಗೆ ತಂಡೋಪ ತಂಡವಾಗಿ ಉಡಿ ಅರ್ಪಿಸುತ್ತಿದ್ದು, ಜಾತ್ರಾ ಮಹೋ ತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಪ್ರತಿನಿತ್ಯ ನಡೆಯುತ್ತಿವೆ.

ಏಪ್ರಿಲ್ 18 ರಂದು ಆಕಾಶವಾಣಿ ಕಲಾವಿದೆ ಅರ್ಚನಾ ಮುಳೆ ಅವರಿಂದ ಭಕ್ತಿ ಸಂಗೀತ ಹಾಗೂ ಶ್ರೇಯಾ ಹಳ್ಳಿಕೇರಿ ಅವರಿಂದ ಸುಗಮ ಸಂಗೀತ, ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂದದಿಂದ ಸಾಂಸ್ಕೃತಿಕ ಕಾರ್ಯಕ್ರಮ, ರೋಣದ ಬಸವನ ಬಳಗದಿಂದ ಶ್ರೀಯಲ್ಲಮ್ಮನ ಪವಾಡ ನಡೆಯಿತು.ಏಪ್ರಿಲ್ 19 ರಂದು ಶಿವಪುರದ ಬಸ್ಸಪ್ಪ ಮಾಯನ್ನವರ ಅವರಿಂದ ಡೊಳ್ಳು ಕುಣಿತ, ಹೊನ್ನಾವರದ ಜಯದೀಪ ಪ್ರಭು ಅವರಿಂದ ಮಿಮಿಕ್ರಿ, ಕಾಶಿ ಮಂಜುನಾಥ ಮಹಾರಾಜ ಹಾಗೂ ಸುಮಾ ಹಡಪದರಿಂದ ಸುಗಮ ಸಂಗೀತ, ದುರ್ಗಾ ನಾಟ್ಯ ಕಲಾ ಸಂಘ ದಿಂದ ಶಿವ ತಾಂಡವ ನೃತ್ಯ ರೂಪಕ, ಗಣೇಶ ಬೆಳಗಾಂವಕರ ಅವರಿಂದ ಸಂಗೀತ ಕಾರ್ಯಕ್ರಮ, ದೇಮಣ್ಣಾ ಮೇತ್ರಿ ಅವರಿಂದ ಕರಡಿ ಮಜಲು, ಯಲ್ಲಪ್ಪಾ ಧಕ್ಕಣ್ಣವರ ಅವರಿಂದ ಸಿದ್ದಯನ ಆಟ, ಗುರುವಾರದಂದು ಸಿದ್ದಪ್ಪ ಬಿರಾದಾರ ಅವರಿಂದ ಗೊಂಬೆ ಯಾಟ, ಬೆಳವಟಗಿ ನಾಗರಾಜ ಕಲ್ಲಪ್ಪ ಗೌಡ ಅವರಿಂದ ಮಿಮಿಕ್ರಿ ನಡೆಯಿತು.

ADVERTISEMENT

21 ರಂದು ಡಾ.ಚಂದ್ರಶೇಖರ ಓಶಿಮಠ ತಂಡದಿಂದ ಸಂಗೀತ ಕಾರ್ಯಕ್ರಮ, ಅಕ್ಕನ ಬಳಗ ಹಳಿಯಾಳದಿಂದ ಜನಪದ ಸಂಗೀತ, ಅಕ್ಷತಾ ಬಳ್ಳಾರಿ ಭರತ ನಾಟ್ಯ, ಸಿದ್ದ ಹಂಡಿಬಡಂಗನಾಥದ ಸಾಗರನಾಥಜೀ ರವರಿಂದ ಪ್ರವಚನ, ಸುನೀಲ ಯರಗಟ್ಟಿ ತಂಡದಿಂದ ನೃತ್ಯ ರೂಪ ನಡೆಯಲಿದೆ. 24 ರಂದು ದೇವಿಯನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.