ADVERTISEMENT

‘ಜಾತ್ಯತೀತ, ಪಕ್ಷಾತೀತ ಹೋರಾಟಕ್ಕೆ ಸಜ್ಜು’

ದಾಂಡೇಲಿ ತಾಲ್ಲೂಕು ರಚನೆ ಹೋರಾಟಕ್ಕೆ ಸಾಹಿತಿ, ಕಲಾವಿದರ, ವಿವಿಧ ಸಂಘಟನೆಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2017, 6:36 IST
Last Updated 3 ಫೆಬ್ರುವರಿ 2017, 6:36 IST
‘ಜಾತ್ಯತೀತ, ಪಕ್ಷಾತೀತ ಹೋರಾಟಕ್ಕೆ ಸಜ್ಜು’
‘ಜಾತ್ಯತೀತ, ಪಕ್ಷಾತೀತ ಹೋರಾಟಕ್ಕೆ ಸಜ್ಜು’   

ದಾಂಡೇಲಿ: ದಾಂಡೇಲಿ ತಾಲ್ಲೂಕು ರಚನೆಗೆ ಒತ್ತಾಯಿಸಿ ಇಲ್ಲಿ ನಡೆಯುತ್ತಿರುವ ಧರಣಿ ಗುರುವಾರ ಹದಿನಾರನೆ ದಿನಕ್ಕೆ  ಕಾಲಿಟ್ಟಿತು. ನಗರದ ಸಾಹಿತಿಗಳು, ಕಲಾವಿದರು ಹಾಗೂ ಗೆಳೆಯರ ಬಳಗದವರು ಧರಣಿ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ದಾಂಡೇಲಿ ಯಾವುದೇ ಕಾರಣಕ್ಕೂ ತಾಲ್ಲೂಕು ಆಗಲೇ ಬೇಕು. ಇದು ಎಲ್ಲರ ನೈತಿಕ ಬೆಂಬಲ. ಹೋರಾಟ ಯಾರ ವಿರುದ್ದವೂ ಅಲ್ಲ. ಯಾರ ಪರವೂ ಅಲ್ಲ. ತಾಲ್ಲೂಕಿಗಾಗಿ ನೀಡಿರುವ ಬದ್ಧತೆಯ ಬೆಂಬಲವಾಗಿದೆ ಎಂದರು.

ಸಾಹಿತಿಗಳಾದ ಅಳಗುಂಡಿ ಅಂದಾನಯ್ಯ, ದುಂಡಪ್ಪ ಗೂಳೂರ, ಮುರ್ತುಜಾ ಹುಸೇನ್ ಆನೆಹೊಸೂರ್, ಅಖಿಲ ಭಾರತ ಸಾಹಿತ್ಯ ಪರಿಷತ್ ದಾಂಡೇಲಿ ಘಟಕದ ಅಧ್ಯಕ್ಷ ರೋಷನ್ ನೇತ್ರಾವಳಿ,  ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕವಿ ಜಿ.ಸಿ. ನಾಯ್ಕ, ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಬಿ.ಎನ್. ವಾಸರೆ,  ಪತ್ರಕರ್ತ ಯು.ಎಸ್. ಪಾಟೀಲ, ಸಾಹಿತ್ಯಾಭಿಮಾನಿ ಐ.ಪಿ. ಘಟಕಾಂಬಳೆ, ಗೆಳೆಯರ ಬಳಗದ ಮೋಹನ ಹಲವಾಯಿ, ಕೀರ್ತಿ ಗಾಂವಕರ ಮುಂತಾದವರು ಮಾತನಾಡಿದರು.

ಧರಣಿಯಲ್ಲಿ  ನಿರ್ಮಲ ನಗರದ ರಮಾಬಾಯಿ ಮಹಿಳಾ ಸಂಘದ ಅಧ್ಯಕ್ಷೆ ದೇವಕಿ ಕಾಂಬಳೆ,  ಕಾರ್ಯದರ್ಶಿ ಕೋಸವ್ವ, ಖಜಾಂಚಿ ಶಾಂತಾ ಕಾತ್ರೋಟ ಉಪವಾಸ ಸತ್ಯಾಗ್ರಹ ನಡೆಸಿದರು. ದಾಂಡೇಲಿ ತಾಲ್ಲೂಕಿಗೆ ಒತ್ತಾಯಿಸಿ ಸಾಹಿತಿಗಳು, ಕಲಾವಿದರು ಸೇರಿ ಮುಖ್ಯಮಂತ್ರಿಗೆ ಬರೆದ ಮನವಿಯ ಪ್ರತಿಯನ್ನು ದಾಂಡೇಲಿ ತಾಲ್ಲೂಕು ರಚನಾ ಸಮಿತಿಯ ಅಧ್ಯಕ್ಷ ಅಜಿತ್ ನಾಯಕರಿಗೆ ನೀಡಿದರು.

ಪತ್ರಕರ್ತ ಎನ್. ಜಯಚಂದ್ರನ್, ಎಸ್.ಎಂ. ಕಾಚಾಪುರ್, ಭೀಮಾಶಂಕರ ಅಜನಾಳ, ನರೇಶ ನಾಯ್ಕ, ರಾಮಚಂದ್ರ ಮಾರ್ಕಂಡೆ, ದಾಂಡೇಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಗುರುಶಾಂತ ಜಡೆಹಿರೇಮಠ, ಸಂದೇಶ ಜೈನ್,  ನಟರಾಜ ನಾಟ್ಯ ಸಂಘದ ಕಲಾವಿದರಾದ ಶ್ರೀಮಂತ ಮದರಿ, ಹನ್ಮಂತ ಕುಂಬಾರ,  ಎಸ್.ಎಸ್. ಕುರ್ಡೇಕರ,  ದೇವೇಂದ್ರ ನವಲೆ, ಗೆಳೆಯರ ಬಳಗದ ಟಿ.ಎಸ್. ಬಾಲಮಣಿ, ಅನಿಲ ದಂಡಗಲ್,  ಡಿ. ಸ್ಯಾಮಸನ್,  ಉದಯ ಶೆಟ್ಟಿ, ದಶರಥ್ ಬಂಡಿವಡ್ಡರ್, ಇಮಾಮ್ ಸರವರ, ಕಲ್ಪನಾ ಪಾಟೀಲ, ರೇಣುಕಾ ಬಂದಂ, ಉಮೇಶ ಸಾವಳಗಿಮಠ, ದಾಂಡೇಲಿ ತಾಲ್ಲೂಕು ಹೋರಾಟ ಸಮಿತಿಯ ಕಾರ್ಯದರ್ಶಿ ಅಕ್ರಂ ಖಾನ್,  ಪ್ರಮುಖರಾದ ಡಾ. ಪಿ.ವಿ. ಶಾನಭಾಗ, ಅಬ್ದುಲ್ ವಹಾಬ್ ಬಾನ್ಸರಿ, ಬಲವಂತ ಬೊಮ್ಮನಳ್ಳಿ, ಫಿರೋಜ್ ಪಿರ್ಜಾದೆ, ಟಿ.ಎಸ್. ನಾಯ್ಕ, ರಮೇಶ ನಾಯ್ಕ, ರುದ್ರಪ್ಪ, ಎಂ.ಎಸ್. ನಾಯ್ಕ, ರವಿ ನಾಯಕ, ಆರ್.ಪಿ. ನಾಯ್ಕ, ಗೌರೀಶ ಬಾಬ್ರೇಕರ, ವಸಂತಕುಮಾರ್ ಮನ್ನೇರಿ, ಮಹೇಶ ಮೇತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.