ADVERTISEMENT

‘ಜೇನು ಕೃಷಿ ಉದ್ಯಮದ ಸ್ವರೂಪ ಪಡೆಯಲಿ’

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 7:12 IST
Last Updated 17 ಜುಲೈ 2017, 7:12 IST

ಶಿರಸಿ: ಸಂಘಟನೆಗಳ ಮೂಲಕ ಜೇನು ಕೃಷಿ ಕೈಗೊಂಡು ಅದಕ್ಕೆ ಉದ್ಯಮ ಸ್ವರೂಪ ನೀಡಬೇಕು ಎಂದು ತೋಟಗಾರಿಕಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಘುನಾಥ ಆರ್. ಸಲಹೆ ಮಾಡಿದರು. ತೋಟಗಾರಿಕಾ ಕಾಲೇಜು, ತೋಟ ಗಾರಿಕಾ ವಿಸ್ತರಣಾ ಶಿಕ್ಷಣ ಘಟಕ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಆಶ್ರಯ ದಲ್ಲಿ ಶುಕ್ರವಾರ ಇಲ್ಲಿ ನಡೆದ ಉತ್ತರ ಕನ್ನಡ ಜಿಲ್ಲೆಯ ಜೇನು ಬೆಳೆಗಾರರ ಸಂಘ ಪರಿವಾರ ರಚನೆ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಜೇನು ಕುಟುಂಬಗಳ ಸಂಖ್ಯೆ ಕಡಿಮೆ ಇದೆ. ಆದರೆ ಇಲ್ಲಿನ ಸಸ್ಯ ಸಂಪತ್ತನ್ನು ಪರಿಗಣನೆಗೆ ತೆಗೆದು ಕೊಂಡಾಗ ಜೇನುಗೂಡುಗಳನ್ನು ಹೆಚ್ಚಿ ಸಲು ಅವಕಾಶಗಳಿವೆ. ರೈತರು ಈ ಅವ ಕಾಶದ ಸದುಪಯೋಗ ಪಡೆದು ಕೊಳ್ಳಬೇಕು’ ಎಂದು ಹೇಳಿದರು. ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿವಿ ಕುಲಪತಿ ಡಿ.ಎಲ್.ಮಹೇಶ್ವರ ಮಾತನಾಡಿ, ‘ಜೇನು ಬೆಳೆಗಾರರ ಸಂಘ ರಚಿಸಲು ವಿಶ್ವವಿದ್ಯಾಲಯ ಉತ್ಸುಕ ವಾಗಿದೆ. ಜೇನು ಕೃಷಿಕರು ಇದಕ್ಕೆ ಸಹಕಾರ ನೀಡಬೇಕು’ ಎಂದರು.

ಪ್ರಕೃತಿ ಸಂಸ್ಥೆಯ ಮುಖ್ಯಸ್ಥ ಪಾಂಡು ರಂಗ ಹೆಗಡೆ ಕಾರ್ಯಾಗಾರ ಉದ್ಘಾಟಿಸಿದರು. ರೈತ ಸಂಘಗಳ ರಚನೆ ಮತ್ತು ಕಾರ್ಯವಿಧಾನಗಳ ಕುರಿತು ಚನ್ನಬಸಪ್ಪ ಯಾದವ್ ಮಾಹಿತಿ ನೀಡಿದರು. ತೋಟಗಾರಿಕಾ ಇಲಾಖೆ ಅಧಿಕಾರಿ ಗಳಾದ ನಾಗಾರ್ಜುನ ಗೌಡ, ಸತೀಶ ಹೆಗಡೆ ಅವರು ತೋಟಗಾರಿಕೆ ಇಲಾಖೆಯಿಂದ ಜೇನು ಕೃಷಿಗೆ ಸರ್ಕಾರದಿಂದ ದೊರೆ ಯುವ ಸೌಲಭ್ಯಗಳ ಕುರಿತು ತಿಳಿಸಿದರು.

ADVERTISEMENT

ಜೇನು ಕೃಷಿಕರಾದ ಧರ್ಮೇಂದ್ರ ಹೆಗಡೆ ಮತ್ತು ಮಧುಕೇಶ್ವರ ಹೆಗಡೆ ಜೇನು ಕೃಷಿ ಕುರಿತು ಮಾಹಿತಿ ನೀಡಿದರು. ಶಿವಾನಂದ ಹೊಂಗಲ ಸ್ವಾಗತಿಸಿದರು. ಪ್ರಶಾಂತ ಎ ವಂದಿಸಿದರು. ಕಾರ್ಯಾಗಾರದಲ್ಲಿ 40ಕ್ಕೂ ಹೆಚ್ಚು ಜೇನು ಕೃಷಿಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.