ADVERTISEMENT

ತೇಲಿಬಂದ ಡಾಲ್ಫಿನ್‌ ಕಳೇಬರ

​ಪ್ರಜಾವಾಣಿ ವಾರ್ತೆ
Published 23 ಮೇ 2017, 9:26 IST
Last Updated 23 ಮೇ 2017, 9:26 IST

ಕಾರವಾರ: ಇಲ್ಲಿನ ರವೀಂದ್ರನಾಥ ಟ್ಯಾಗೋರ್‌ ಕಡಲತೀರದಲ್ಲಿ ಸೋಮವಾರ ಸುಮಾರು 20 ವರ್ಷ ವಯಸ್ಸಿನ ಗಂಡು ಡಾಲ್ಫಿನ್‌ನ ಕಳೇಬರ ಪತ್ತೆಯಾಗಿದೆ. ಇದು ಇಂಡಿಯನ್‌ ಹಂಪ್‌ ಬ್ಯಾಕ್‌ ಡಾಲ್ಫಿನ್‌ ಪ್ರಭೇದಕ್ಕೆ ಸೇರಿದ್ದು, ಇದರ ವೈಜ್ಞಾನಿಕ ಹೆಸರು ಸೌಸಾ ಚೈನಿಸೀಸ್‌ (sousa chinensis). ಸಮುದ್ರದ ಅಲೆಗಳ ಅಬ್ಬರಕ್ಕೆ ಸಂಜೆ ಮಕ್ಕಳ ಉದ್ಯಾನದ ಬಳಿಯ ಕಡಲತೀರಕ್ಕೆ ಈ ಕಳೇಬರ ತೇಲಿಬಂದಿದೆ.

ಸ್ಥಳಕ್ಕೆ ಆರ್‌ಎಫ್‌ಒ ಕೆ.ಡಿ.ನಾಯ್ಕ, ಕಡಲಜೀವ ವಿಜ್ಞಾನ ಅಧ್ಯಯನ ವಿಭಾಗದ ಸಹಾ ಯಕ ಪ್ರಾಧ್ಯಾಪಕ ಶಿವಕುಮಾರ್‌, ಸಂಶೋಧನಾ ಸಹಾಯಕ ರವಿ ದುರ್ಗೇ ಕರ ಭೇಟಿ ನೀಡಿ, ಕಳೆಬರವನ್ನು ಪರಿ ಶೀಲನೆ ನಡೆಸಿದರು. ಸ್ಥಳದಲ್ಲಿ ಜಮಾಯಿ ಸಿದ್ದ ನೂರಾರು ಜನರು ಕಳೇಬರವನ್ನು ಕುತೂಹಲದಿಂದ ವೀಕ್ಷಿಸಿದರು.

ಸಹಜ ಸಾವು:  ‘ಸಸ್ತನಿ ಗುಂಪಿಗೆ ಸೇರಿದ ಈ ಡಾಲ್ಫಿನ್‌ 20 ವರ್ಷಗಳು ಬದುಕುತ್ತವೆ. ಚೈನಾ ಹಾಗೂ ಭಾರತದ ಕಡಲತೀರದಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತವೆ. ಕಳೇಬರದ ಹೊರ ಭಾಗದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಹೀಗಾಗಿ ಇದು ಸಹಜ ವಾಗಿ ಸಾವಿಗೀಡಾಗಿದೆ.

ADVERTISEMENT

3 ಮೀಟರ್‌ ಉದ್ದವಿರುವ ಈ ಡಾಲ್ಫಿನ್‌ ಸತ್ತು ಒಂದು ದಿನ ಆಗಿದೆ’ ಎಂದು ಕಡಲಜೀವ ವಿಜ್ಞಾನ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.‘ಅರಣ್ಯ ಇಲಾಖೆಗೆ ಸೇರಿದ ಕೋಡಿ ಬಾಗ್‌ ನರ್ಸರಿ ಜಾಗದಲ್ಲಿ ಅದನ್ನು ಹೂಳಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಕೆ.ಡಿ.ನಾಯ್ಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.