ADVERTISEMENT

ದೇವರು, ಕಾರ್ಯಕರ್ತರೇ ನನ್ನ ಶ್ರೀರಕ್ಷೆ: ಅನಂತಕುಮಾರ್

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 6:37 IST
Last Updated 14 ಸೆಪ್ಟೆಂಬರ್ 2017, 6:37 IST
ಹೊನ್ನಾವರದಲ್ಲಿ  ಬಿಜೆಪಿ ಮಂಡಲ ಏರ್ಪಡಿಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮ ಖಾತೆ ರಾಜ್ಯ ಸಚಿವ ಅನಂತಕುಮಾರ್‌ ಹೆಗಡೆ ಮಾತನಾಡಿದರು
ಹೊನ್ನಾವರದಲ್ಲಿ ಬಿಜೆಪಿ ಮಂಡಲ ಏರ್ಪಡಿಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮ ಖಾತೆ ರಾಜ್ಯ ಸಚಿವ ಅನಂತಕುಮಾರ್‌ ಹೆಗಡೆ ಮಾತನಾಡಿದರು   

ಹೊನ್ನಾವರ: ‘ದೇವರು ಹಾಗೂ ಕಾರ್ಯ ಕರ್ತರ ಆಶೀರ್ವಾದದಿಂದ ನನಗೆ ಸಚಿವ ಸ್ಥಾನಮಾನ ಲಭಿಸಿದೆ’ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಹೇಳಿದರು.
ತಾಲ್ಲೂಕು ಬಿಜೆಪಿ ಮಂಡಲದ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ  ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು,‘ಯಾವುದೇ ಹುದ್ದೆಗೆ ಹೋದರೂ ಜನರ ಋಣ ಹಾಗೂ ಕಾರ್ಯಕರ್ತರು ತಲೆ ತಗ್ಗಿಸುವ ಕೆಲಸ ಎಂದಿಗೂ ಮಾಡುವುದಿಲ್ಲ’ ಎಂದು ಭರವಸೆ ನೀಡಿದರು.

‘ಅಧಿಕಾರಿಗಳ ಸಭೆಯಲ್ಲಿ ಇಲಾಖೆಯ ಹೊಸ ಯೋಜನೆ ತ್ವರಿತ ಅನುಷ್ಠಾನಕ್ಕೆ ಸೂಚಿಸಿದ್ದೇನೆ. ಅಗತ್ಯ ಕೌಶಲ ನೀಡಿ ಲಕ್ಷಾಂತರ ದುಡಿಯುವ ಕೈಗಳಿಗೆ ಕೆಲಸ ಒದಗಿಸುವ ಗುರಿಯಿದೆ’ ಎಂದು ತಿಳಿಸಿದರು.

ಹೇಳಿಕೆಗಳನ್ನು ವಿವಾದಾತ್ಮಕವಾಗಿಸುವ ಕೆಲ ಮಾಧ್ಯಮದ ಪ್ರವೃತ್ತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು,‘ಎಡಬಿಡಂಗಿ ಮಾಧ್ಯಮಗಳು ಏನು ಬೇಕಾದರೂ ಬರೆಯಲಿ’ ಎಂದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ ಸಚಿವರನ್ನು ಅಭಿನಂದಿದರು.

ADVERTISEMENT

ಮಾಜಿ ಸಚಿವ ಶಿವಾನಂದ ನಾಯ್ಕ,ಮಾಜಿ ಶಾಸಕರಾದ  ಡಾ.ಎಂ.ಪಿ.ಕರ್ಕಿ, ಜೆ.ಡಿ.ನಾಯ್ಕ, ದಿನಕರ ಶೆಟ್ಟಿ, ಮುಖಂಡರಾದ ಎಂ.ಜಿ.ನಾಯ್ಕ, ಯಶೋಧರ ನಾಯ್ಕ, ಗಾಯತ್ರಿ ಗೌಡ, ಶ್ರೀಕಲಾ ಶಾಸ್ತ್ರಿ, ಉಮೇಶ ನಾಯ್ಕ, ನಾಗರಾಜ ನಾಯಕ, ಸೂರಜ್ ನಾಯ್ಕ, ಸುನಿಲ್ ನಾಯ್ಕ, ವೆಂಕಟ್ರಮಣ ಹೆಗಡೆ, ಲೋಕೇಶ ಮೇಸ್ತ, ವಿನೋದ ನಾಯ್ಕ  ಹಾಜರಿದ್ದರು.

ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ ಸ್ವಾಗತಿಸಿದರು. ಮಂಡಲದ ಅಧ್ಯಕ್ಷ ಸುಬ್ರಾಯ ನಾಯ್ಕ  ಮಾತನಾಡಿದರು. ಬಿ.ಟಿ.ಗಣಪತಿ ನಾಯ್ಕ          ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.