ADVERTISEMENT

ದ್ವಿತೀಯ ಪಿಯುಸಿ ಫಲಿತಾಂಶ: ಜಿಲ್ಲೆಗೆ 4ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 14 ಮೇ 2017, 9:58 IST
Last Updated 14 ಮೇ 2017, 9:58 IST

ಕಾರವಾರ: ದ್ವಿತೀಯ ಪಿಯುಸಿಯ ಫಲಿತಾಂಶದಲ್ಲಿ ಜಿಲ್ಲೆ ರಾಜ್ಯಕ್ಕೆ 4ನೇ ಸ್ಥಾನ ಪಡೆದುಕೊಂಡಿದ್ದು, ಜಿಲ್ಲಾಮಟ್ಟದಲ್ಲಿ ಟಾಪರ್ಸ್‌ಗಳ ಪಟ್ಟಿಯನ್ನು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಶುಕ್ರವಾರ ಪ್ರಕಟಿಸಿದೆ.

ವಿಜ್ಞಾನ ವಿಭಾಗದಲ್ಲಿ ಶಿರಸಿಯ ಎಂಇಎಸ್ ಚೈತನ್ಯ ಪಿಯು ಕಾಲೇಜಿನ ಪ್ರತೀಕಾ ಚಂದ್ರಶೇಖರ ಭಟ್ 595 (ಶೇ 99.16) ಅಂಕದೊಂದಿಗೆ ಪ್ರಥಮ, ಹೊನ್ನಾವರದ ಎಸ್‌ಡಿಎಂ ಪಿಯು ಕಾಲೇಜಿನ ಲಲಿತಶ್ರೀ ರವಿ ಹೆಗ್ಡೆ 588 (ಶೇ 98) ಅಂಕದೊಂದಿಗೆ ದ್ವಿತೀಯ, ಶಿರಸಿಯ ಎಂಇಎಸ್ ಚೈತನ್ಯ ಪಿಯು ಕಾಲೇಜಿನ ಜಿ.ಎಮ್.ಸಿರಿ ಹಾಗೂ ಮಂಜುನಾಥ ಭಟ್ 586 (ಶೇ 97.66) ಅಂಕದೊಂದಿಗೆ ತೃತೀಯ ಸ್ಥಾನ ಗಳಿಸಿಕೊಂಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಶಿರಸಿಯ ಎಂಇಎಸ್ ಚೈತನ್ಯ ಪಿಯು ಕಾಲೇಜಿನ ಸಿಂಧು ಎನ್.ಹೆಗ್ಡೆ 589 (ಶೇ 98.16) ಅಂಕದೊಂದಿಗೆ ಪ್ರಥಮ, ಕುಮಟಾದ ಸರಸ್ವತಿ ಪಿಯು ಕಾಲೇಜಿನ ಪೂಜಾ ಉಲ್ಲಾಸ ನಾಯಕ 588 (ಶೇ 98) ಅಂಕದೊಂದಿಗೆ ದ್ವಿತೀಯ, ಶಿರಸಿಯ ಎಂಇಎಸ್ ಚೈತನ್ಯ ಪಿಯು ಕಾಲೇಜಿನ ರಂಜಿತಾ ಎಚ್.ಆರ್ 587 (ಶೇ 97.83) ಅಂಕದೊಂದಿಗೆ ತೃತೀಯ ಸ್ಥಾನ ಗಳಿಸಿಕೊಂಡಿದ್ದಾರೆ.

ADVERTISEMENT

ಕಲಾ ವಿಭಾಗದಲ್ಲಿ ಕಾರವಾರದ ಸರ್ಕಾರಿ ಪಿಯು ಕಾಲೇಜಿನ ಓಂಕಾರ ಸಂತೋಷ ಪಾವಸ್ಕರ್ ಹಾಗೂ ಭಟ್ಕಳದ ಅಂಜುಮನ್ ಮಹಿಳಾ ಕಾಲೇಜಿನ ಆಯುಷ್ 566 (ಶೇ 94.33) ಅಂಕದೊಂದಿಗೆ ಪ್ರಥಮ, ಭಟ್ಕಳದ ಅಂಜುಮನ್ ಮಹಿಳಾ ಕಾಲೇಜಿನ ಮಾರ್ಯಮ್ ಇರ್ಷಾದ್ 562 (ಶೇ 93.66) ಅಂಕದೊಂದಿಗೆ ದ್ವಿತೀಯ, ಮುಂಡಗೋಡ ಸರ್ಕಾರಿ ಪಿಯು ಕಾಲೇಜಿನ ಕಾವೇರಿ ಗಣಪ್ಪನವರ್ 557 (ಶೇ 92.83) ಅಂಕದೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.