ADVERTISEMENT

‘ಬದುಕು ಅರ್ಥೈಸಿಕೊಳ್ಳಲು ಭಗವದ್ಗೀತೆ’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 7:31 IST
Last Updated 17 ಮಾರ್ಚ್ 2018, 7:31 IST

ಉಮ್ಮಚಗಿ(ಯಲ್ಲಾಪುರ): ‘ನಮ್ಮ ಬದುಕನ್ನು ನಾವು ಅರ್ಥ ಮಾಡಿಕೊಳ್ಳಲು ಭಗವದ್ಗೀತೆಯ ಅನುಸಂಧಾನ ಪ್ರೇರಕ’ ಎಂದು ಇತಿಹಾಸ ತಜ್ಞ ವಿಶ್ವೇಶ್ವರ ಹೆಗಡೆ ಅತ್ತಿಮುರುಡು ಹೇಳಿದರು.

ಯಲ್ಲಾಪುರ ತಾಲ್ಲೂಕಿನ ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ವೈದಿಕ ಶಿಕ್ಷಣ ಸಂಸ್ಥೆಯ ಸಂಸ್ಕೃತ ಕಾಲೇಜು ಇತ್ತೀಚೆಗೆ ಹಮ್ಮಿಕೊಂಡಿದ್ದ ಗೀತಾ ಜಯಂತ್ಯುತ್ಸವದಲ್ಲಿ ಭಗವದ್ಗೀತೆ ಕುರಿತು ಅವರು ಉಪನ್ಯಾಸ ನೀಡಿದರು. ಸಾಲ್ಕಣಿಯ ಲಕ್ಷ್ಮೀನರಸಿಂಹ ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕ ವಿ.ಮಂಜುನಾಥ ಭಟ್ಟ, ಟಿ.ಎಸ್.ಎಸ್ ನಿರ್ದೇಶಕ ವಿ.ವಿ.ಜೋಷಿ ಬಾಳೆಹದ್ದ ಮಾತನಾಡಿದರು.

ಶಿಕ್ಷಣ ಸಂಸ್ಥೆ ಅಧ್ಯಕ್ಷ ಟಿ.ವಿ.ಹೆಗಡೆ ಬೆದೆಹಕ್ಕಲು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ತಿಮ್ಮಪ್ಪ ಹೆಗಡೆ ಶೀಗೇಮನೆ, ಪ್ರಾಚಾರ್ಯ ವಿದ್ವಾನ್ ರಾಮಚಂದ್ರ ಭಟ್ಟ ವೇದಿಕೆಯಲ್ಲಿದ್ದರು. ಪಾಠಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ADVERTISEMENT

ಸೀಮಾ ಪರಿಷತ್ ವತಿಯಿಂದ ಪಾಠಶಾಲೆಯ ಅನ್ನದಾನ ನಿಧಿಗೆ ಸೀಮಾಧ್ಯಕ್ಷ ಶ್ರೀಪಾದ ಹೆಗಡೆ ಶಿರನಾಲಾ ನೀಡಿದ ₹ 8000, ತೀರ್ಥಹಳ್ಳಿಯ ಉದ್ಯಮಿ ಪ್ರಸನ್ನ ನೀಡಿದ ₹ 10ಸಾವಿರ ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಶಿಗ್ಗಾಂವಿಯ ಅಂಧ ಸಂಗೀತ ಕಲಾವಿದರಾದ ವೀರಯ್ಯ ಹಿರೇಮಠ ತಂಡದವರಿ ತಬಲಾ ಸೆಟ್ ವಿತರಿಸಲಾಯಿತು. ಅಧ್ಯಾಪಕ ಮಹೇಶ ಭಟ್ಟ ಸ್ವಾಗತಿಸಿದರು, ಅಧ್ಯಾಪಕ ಡಾ. ಕೆ.ಸಿ.ನಾಗೇಶ ಭಟ್ಟ ನಿರೂಪಿಸಿದರು.

ಹಣ್ಣು ವಿತರಣೆ
ಯಲ್ಲಾಪುರ:
ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಜನ್ಮ ದಿನದ ಅಂಗವಾಗಿ ಶಾಸಕ ಶಿವರಾಮ ಹೆಬ್ಬಾರ ಶುಕ್ರವಾರ ಇಲ್ಲಿ  ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.