ADVERTISEMENT

‘ಮೇಲ್ಸೇತುವೆ: ಕೋಡಿಬಾಗದ ಕಾಳಿ ಸೇತುವೆವರೆಗೆ ವಿಸ್ತರಣೆಯಾಗಲಿ’

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 8:53 IST
Last Updated 22 ಮಾರ್ಚ್ 2017, 8:53 IST

ಕಾರವಾರ: ಇಲ್ಲಿನ ಲಂಡನ್‌ ಸೇತುವೆ ಯಿಂದ ಆರ್‌ಟಿಒ ಕಚೇರಿಯವರೆಗೆ ನಿರ್ಮಿಸಲು ಉದ್ದೇಶಿಸಿರುವ ಮೇಲ್ಸೇತುವೆಯನ್ನು (ಫ್ಲೈಓವರ್‌) ಕೋಡಿಬಾಗದ ಕಾಳಿ ಸೇತುವೆ ಯವರೆಗೂ ವಿಸ್ತರಿಸಬೇಕು. ಇಲ್ಲವೇ ಬೈಪಾಸ್‌ ಮಾಡಬೇಕು ಎಂದು ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಂಘದ ತಾಲ್ಲೂಕು ಘಟಕದ ಪದಾಧಿ ಕಾರಿಗಳು ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಹೆದ್ದಾರಿ–66 ಚತುಷ್ಪಥ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಕೋಡಿಬಾಗದ ಸರ್ವೋದಯ ನಗರದಲ್ಲಿ ಬೈಪಾಸ್ ವ್ಯವಸ್ಥೆ ಇಲ್ಲ. ಈ ಭಾಗದಲ್ಲಿ ನೂರಾರು ಮೀನುಗಾರರ ಕುಟುಂಬಗಳು ವಾಸವಾಗಿದ್ದು, ದಿನನಿತ್ಯ ಕಡಲಿಗೆ ಹೋಗಲು ಚತುಷ್ಪಥವನ್ನು ದಾಟಿ ಹೋಗಬೇಕಾಗುತ್ತದೆ.

ಭವಿಷ್ಯ ದಲ್ಲಿ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಲಿದ್ದು, ಹೆದ್ದಾರಿ ದಾಟಲು ಹರಸಾಹಸ ಪಡಬೇ ಕಾಗುತ್ತದೆ ಇದು ಮೀನುಗಾರರಿಗೆ ನರಕ ವಾಗಲಿದೆ ಎಂದು  ತಿಳಿಸಿದ್ದಾರೆ.

ಪ್ರವಾಸೋದ್ಯಮ ನೆಪದಲ್ಲಿ ಸಮುದ್ರ ದಂಡೆ ಮೇಲೆ ನಿರ್ಮಿಸಿದ ಗುಡಿಸಲುಗಳನ್ನು ಈಗಾಗಲೇ ತೆರವುಗೊಳಿಸಿ ಮೀನುಗಾರರನ್ನು ಅತಂತ್ರ ಗೊಳಿಸಲಾಗಿದೆ. ಈಗ ಗಾಯದ ಮೇಲೆ ಬರೆ ಎಳೆಯುವಂತೆ ನಿತ್ಯ ಚತುಷ್ಪಥ ದಾಟಿ ಮೀನುಗಾರಿಕೆಗಾಗಿ ತೆರಳ ಬೇಕಾದ ದುಃಸ್ಥಿತಿ ಎದುರಾಗಿದೆ.

ಜಿಲ್ಲಾಡಳಿತ ಇಲ್ಲಿನ ಮೀನುಗಾರರ ಹಿತದೃಷ್ಟಿಯಿಂದ ಆರ್‌ಟಿಒ ಕಚೇರಿ ಯಿಂದ ನೇರವಾಗಿ ಕಾಳಿ ಸೇತುವೆ ತನಕ ಮೇಲ್ಸೇತುವೆ ಮುಂದುವರಿಸ ಬೇಕು. ಇಲ್ಲವೇ ಬೈಪಾಸ್ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಂಘದ ಅಧ್ಯಕ್ಷ ಮಹಾರುದ್ರ ಬಾನಾವಳಿಕರ, ಗಣಪತಿ ಬಾನಾವಳಿಕರ, ಸೂರಜ, ದಿಲೀಪ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT