ADVERTISEMENT

ಕಾಂಗ್ರೆಸ್‌–ಸಿಐಟಿಯು ಪ್ರತ್ಯೇಕ ಪ್ರತಿಭಟನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ವರ್ಷದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಮೇ 2015, 7:00 IST
Last Updated 27 ಮೇ 2015, 7:00 IST

ವಿಜಯಪುರ:  ಕೇಂದ್ರ ಸರ್ಕಾರ ಒಂದು ವರ್ಷ ಪೂರೈಸಿದ್ದು, ಈ ಅವಧಿಯಲ್ಲಿ ಯಾವುದೇ ಜನ–ರೈತ ಹಿತ, ಕಾರ್ಮಿಕ ಪರ ಕಾರ್ಯಕ್ರಮ ರೂಪಿಸಿಲ್ಲ ಎಂದು ದೂರಿ ಜಿಲ್ಲಾ ಯುವ ಕಾಂಗ್ರೆಸ್‌ ಸಮಿತಿ, ಸಿಐಟಿಯು ಸಂಘಟನೆಗಳು ಮಂಗಳ­ವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದವು.

ನಗರದ ಗಾಂಧಿವೃತ್ತದಲ್ಲಿ ಲೋಕ ಸಭಾ ಯುವ ಕಾಂಗ್ರೆಸ್ ಸಮಿತಿಯ ಜಿಲ್ಲಾ ಘಟಕದ  ಮುಖಂಡರು, ಕಾರ್ಯ­ಕರ್ತರು ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.

ಲೋಕಸಭಾ (ಜಿಲ್ಲಾ) ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್‌ ಖಾದರ್‌ ಖಾದೀಮ ಮಾತನಾಡಿ,  ‘ಅಚ್ಛೆ ದಿನ್ ಆನೆವಾಲೆ ಹೈ' ಎಂದು ಹೇಳುತ್ತಾ ಬಂದು ದೇಶದ ನಾಗರಿಕರಿಗೆ ಕೆಟ್ಟ ದಿನ ಗಳನ್ನು ತರುತ್ತಿದೆ ಎಂದು ಆರೋಪಿ ಸಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾ ಧ್ಯಕ್ಷ ವೈಜನಾಥ ಕರ್ಪೂರ ಮಠ, ಪ್ರಧಾನ ಕಾರ್ಯದರ್ಶಿ ಸೈಯ್ಯದ್‌ ಅಫ್ತಾಬ್‌ ಖಾದ್ರಿ, ಜಿಲ್ಲಾ  ಐಟಿಬಿಟಿ ಸೆಲ್‌ನ ಅಧ್ಯಕ್ಷ ಮಹ್ಮದ್‌ ರಫೀಕ ಟಪಾಲ ಎಂಜಿನಿಯರ್ ಮಾತನಾಡಿದರು.

ಪ್ರತಿಭಟನೆಯಲ್ಲಿ ವಸಂತ ಹೊನಮೊಡೆ, ಲೋಕಸಭಾ (ಜಿಲ್ಲಾ) ಯುವ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಜಾವೀದ ಮೋಮಿನ್‌, ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮೋಯಿನ್‌ ಶೇಖ್‌, ಬಬಲೇಶ್ವರ ಮತ್ತು ನಾಗಠಾಣ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪೋಮು ಜಾಧವ, ಅನಿಲ ರಾಠೋಡ, ಸಾಹೇಬ ಗೌಡ, ಶೌತ್‌, ಈರಪ್ಪ ಜಕ್ಕಣ್ಣವರ, ಚನ್ನ ಬಸಪ್ಪ ನಂದರಗಿ, ಮೋಹನ ಎಸ್. ಬಡಿಗೇರ, ಅಬ್ದುಲ್ಲ ಲತೀಫ್ ಖಲೀಫಾ, ಜಮೀರ ಬಾಂಗಿ, ಬಾಬು ಯಾಳವಾರ, ಎಂ.ಎ.ಬಕ್ಷಿ, ದಾವಲಸಾಬ ಬಾಗವಾನ್‌ ಪಾಲ್ಗೊಂಡಿದ್ದರು.

ಸಿಐಟಿಯು:   ಸಿಐಟಿಯು ಮುಖಂಡರು ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತ ದಲ್ಲಿ ಮಂಗಳವಾರ ಕೇಂದ್ರ ಸರ್ಕಾರದ ಭೂತ ದಹಿಸಿ ಪ್ರತಿಭಟನೆ ನಡೆಸಿದರು. ಬೆಲೆ ಏರಿಕೆ ತಡೆಗಟ್ಟಬೇಕು. ಕಾರ್ಮಿ­ಕರಿಗೆ ಕನಿಷ್ಠ 15 ಸಾವಿರ ವೇತನ ನಿಗದಿ­ಪಡಿ­ಸಬೇಕು. ಕಾರ್ಮಿಕ ಕಾನೂನು ಜಾರಿ­­­ ಯಾಗಬೇಕು ಎಂದು ಆಗ್ರಹಿಸಿದರು.

ಭೂ ಮಾಫಿಯಾ, ಕಾರ್ಪೋರೇಟ್‌ ಸಂಸ್ಥೆಯ ಅನುಕೂಲಕ್ಕೆ ರೈತರ ಒಪ್ಪಿಗೆ ಇಲ್ಲದೆ ಭೂ ಸ್ವಾಧೀನ ಪಡಿಸುವ ಸುಗ್ರೀವಾಜ್ಞೆ ಬೇಡ, ರಕ್ಷಣೆ, ರೈಲ್ವೆ, ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಕಲ್ಪಿಸುವುದು ಬೇಡ. ಸಾರ್ವ ಜನಿಕ ವಲಯದ ಉದ್ಯಮ ಗಳ ಖಾಸಗೀ ಕರಣ, ನೈಸರ್ಗಿಕ ಸಂಪ ನ್ಮೂಲ, ಕಲ್ಲಿದ್ದಲು, ಮೂಲ ಸೌಕರ್ಯ ವಲಯಗಳ ಖಾಸಗೀಕರಣ ಬೇಡ ಎಂದು ಪ್ರತಿ ಭಟನಾಕಾರರು ಆಗ್ರಹಿಸಿದರು. ಭೀಮಶಿ ಕಲಾದಗಿ, ಲಕ್ಷ್ಮಣ ಹಂದ್ರಾಳ, ಲಾರಿ ಹಮಾಲರ ಸಂಘದ ಅಧ್ಯಕ್ಷ ಮಲಿಕ ಸಾಬ್ ಟಕ್ಕಳಕಿ, ಸಾಬು ಗುಗುದಡ್ಡಿ, ಮಾಲಾ ಗಣಾಚಾರಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.