ADVERTISEMENT

ಖಾಸ್ಗತೇಶ್ವರ ಮಠದ ವಾರ್ಷಿಕೋತ್ಸವ 9ಕ್ಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 9:07 IST
Last Updated 8 ಫೆಬ್ರುವರಿ 2017, 9:07 IST

ಮುದ್ದೇಬಿಹಾಳ: ಪಟ್ಟಣದ ಖಾಸ್ಗತೇಶ್ವರ ಮಠದ 5 ನೇ ವಾರ್ಷಿಕೋತ್ಸವ ನಿಮಿತ್ತ ವಿರಕ್ತ ಸ್ವಾಮಿಗಳ ಅಮೃತಶಿಲಾ ಮೂರ್ತಿ ಪ್ರತಿಷ್ಠಾಪನೆ, ಆನೆ ಅಂಬಾರಿ ಮೆರವಣಿಗೆ, ಗುಡ್ಡಾಪುರ ದಾನಮ್ಮದೇವಿ ಮಹಾಪುರಾಣ ಮಂಗಲ, 1001 ಕುಂಭ ಮೇಳ, ಧರ್ಮಸಭೆ ಸಂಯುಕ್ತ ಕಾರ್ಯಕ್ರಮ ಇದೇ 9ರಂದುಶ್ರೀಮಠದ ತೋಟದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.

ಇಲ್ಲಿನ ಹಳೆಯ ಕಾಯಿಪಲ್ಲೆ ಮಾರುಕಟ್ಟೆಯಲ್ಲಿರುವ ಖಾಸ್ಗತೇಶ್ವರ ಮಠದಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪದಾಧಿಕಾರಿಗಳು, ಅಂದು ಮುಂಜಾನೆ 8 ಕ್ಕೆ ಕಿಲ್ಲಾದಲ್ಲಿರುವ ರುದ್ರಮುನಿ ಶಿವಯೋಗಿಗಳ ಮಹಾಗದ್ದುಗೆ ಮೂಲಕ ಶಿಲಾಮೂರ್ತಿಯ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ವೈಭವ ಸಮೇತ ನಡೆಯಲಿದೆ. ಮೂರ್ತಿಯನ್ನು ಆನೆ ಮೇಲಿನ ಅಂಬಾರಿ ಯಲ್ಲಿ ಕೂಡಿಸಿ ಮೆರೆಸಲಾಗುತ್ತದೆ. ಶ್ರೀಗಳು, ಪೂರ್ಣ ಕುಂಭ ಹೊತ್ತ ಮಹಿಳೆಯರು ಪಾಲ್ಗೊಳ್ಳುವರು.

ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಮಠದಲ್ಲಿ 15 ದಿನಗಳಿಂದ ಶರಣಯ್ಯ ಶಾಸ್ತ್ರಿಗಳಿಂದ ದಾನಮ್ಮದೇವಿ ಪುರಾಣ ನಿತ್ಯ ಸಂಜೆ ನಡೆದುಕೊಂಡು ಬಂದಿದೆ. 9 ರಂದೇ ಪುರಾಣವೂ ಮಂಗಲಗೊಳ್ಳು ತ್ತದೆ. ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಭಕ್ತಾದಿ ಗಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ ಎಂದರು.

ಮಧ್ಯಾಹ್ನ 1ಕ್ಕೆ ನಡೆಯುವ ಸಾರ್ವಜನಿಕ ಕಾರ್ಯಕ್ರಮ, ಧರ್ಮಸಭೆ ಯಲ್ಲಿ ಹುಬ್ಬಳ್ಳಿ 3000 ಮಠದ ಜಗದ್ಗುರು ಗುರುಸಿದ್ದರಾಜಯೋಗೀಂದ್ರ ಶ್ರೀ ನಿಡಸೋಸಿ ದುರದುಂಡೇಶ್ವರ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಶ್ರೀ, ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಶ್ರೀ, ತಾಳಿಕೋಟೆ ಖಾಸ್ಗತೇಶ್ವರಮಠದ ಸಿದ್ದಲಿಂಗದೇವರು, ಹಿರೂರ ಮಠದ ಗುರುಜಯಸಿದ್ದೇಶ್ವರ ಶಿವಾಚಾರ್ಯರು, ಸ್ವಾದಿ ಮಠದ ಶಿವಬಸವ ಶ್ರೀ, ಗುಂಡಕನಾಳದ ಗುರುಲಿಂಗ ಶಿವಾ ಚಾರ್ಯ ಶ್ರೀ, ಅಂಕಲಿಮಠದ ವೀರಭದ್ರ ಶ್ರೀ, ಕೊಡೇಕಲ್ಲ ಮಠದ ಶಿವಕುಮಾರ ದೇವರು, ಅಳ್ಳಗಿಯ ಶರಣಯ್ಯ ಶಾಸ್ತ್ರಿಗಳು ಸಾನಿಧ್ಯ ವಹಿಸುವರು.

ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಸಂಗಣ್ಣ ಕಂಚ್ಯಾಣಿ, ದಾನಯ್ಯ ಹಿರೇಮಠ, ಅಶೋಕ ನಾಡಗೌಡ, ಸಂಚಾಲಕ ರಾಜೇಂದ್ರಗೌಡ ರಾಯ ಗೊಂಡ, ಮಠದ ಕಾರ್ಯದರ್ಶಿ ಶ್ರೀಧರ ಕಾರಗನೂರಮಠ,  ಬಸವರಾಜ ಕುಳ ಗೇರಿ, ನಿಂಗಣ್ಣ ಕುಂಟೋಜಿ ಅಬ್ಬಿ ಹಾಳ, ಐ.ಬಿ.ಹಿರೇಮಠ, ಶಿವಾನಂದ ಹಿರೇ ಮಠ, ವೆಂಕಪ್ಪಗೌಡ ಕೊಣ್ಣೂರ ಢವ ಳಗಿ, ಧನಂಜಯ ಮೋಟಗಿ, ಭೀಮಾ ರೆಡ್ಡಿ ಶಹಾಪುರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.